ವಿಜಯಪುರ: ಕಳೆದ ಎರಡು ದಿನಗಳಿಂದ ವಿಜಯಪುರ ಜಿಲ್ಲೆಯಲ್ಲಿ ಮಳೆ ಸುರಿಯುತ್ತಿದ್ದು, ಹಲವೆಡೆ ಉತ್ತಮ ಮಳೆಯಾಗಿದ್ದರೆ, ಕೆಲವೆಡೆ ಭಾರಿ ಮತ್ತೆ ಅನೇಕ ಕಡೆ ಸಾಧಾರಣ ಮಳೆಯಾಗಿದೆ.
ಹಲಸಂಗಿ ಗ್ರಾಮದಲ್ಲಿ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿಯೇ ಅತ್ಯಧಿಕ 84 ಮಿಮಿ, ಇಂಡಿ ಪಟ್ಟಣದಲ್ಲಿ 49 ಮಿಮಿಗೂ ಹೆಚ್ಚು ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ವಿಜಯಪುರ ಜಿಲ್ಲೆಯ ನಾನಾ ಕಡೆ ಸುರಿದ ಮಳೆಯ ವಿವರ ಇಲ್ಲಿದೆ.
ವಿಜಯಪುರ ತಾಲೂಕು
ವಿಜಯಪುರ ನಗರ- 3.60 ಮಿಮಿ
ನಾಗಠಾಣ- 10.20 ಮಿಮಿ
ಭೂತ್ನಾಳ- 16.20 ಮಿಮಿ
ಹಿಟ್ನಳ್ಳಿ- 16.80 ಮಿಮಿ
ಕುಮಟಗಿ- 8.60 ಮಿಮಿ
ಬಬಲೇಶ್ವರ ತಾಲೂಕು
ಮಮದಾಪುರ- 8.80 ಮಿಮಿ
ಬಬಲೇಶ್ವರ- 3.60 ಮಿಮಿ
ತಿಕೋಟಾ ತಾಲೂಕು
ತಿಕೋಟಾ- 21.80 ಮಿಮಿ
ಕನ್ನೂರ- 8.10 ಮಿಮಿ
ಬಸವನ ಬಾಗೇವಾಡಿ ತಾಲೂಕು
ಬಸವನ ಬಾಗೇವಾಡಿ- 29.70 ಮಿಮಿ
ಮನಗೂಳಿ- 28.30 ಮಿಮಿ
ಹೂವಿನ ಹಿಪ್ಪರಗಿ- 12.80 ಮಿಮಿ
ನಿಡಗುಂದಿ ತಾಲೂಕು
ಆಲಮಟ್ಟಿ- 12 ಮಿಮಿ
ಅರೆಶಂಕರ- 9.50 ಮಿಮಿ
ಕೊಲ್ಹಾರ ತಾಲೂಕು
ಕೊಲ್ಹಾರ- 00 ಮಿಮಿ
ಮಟ್ಟಿಹಾಳ- 13 ಮಿಮಿ
ಮುದ್ದೇಬಿಹಾಳ ತಾಲೂಕು
ಮುದ್ದೇಬಿಹಾಳ- 8.40 ಮಿಮಿ
ನಾಲತವಾಡ- 17.30 ಮಿಮಿ
ತಾಳಿಕೋಟೆ ತಾಲೂಕು
ತಾಳಿಕೋಟೆ- 6.40 ಮಿಮಿ
ಡವಳಗಿ- 6 ಮಿಮಿ
ಇಂಡಿ ತಾಲೂಕು
ಇಂಡಿ- 49.8 ಮಿಮಿ
ನಾದ ಬಿಕೆ- 1.40 ಮಿಮಿ
ಅಗರಖೇಡ- 39.20 ಮಿಮಿ
ಹೊರ್ತಿ- 20.40 ಮಿಮಿ
ಹಲಸಂಗಿ- 84 ಮಿಮಿ
ಚಡಚಣ ತಾಲೂಕು
ಚಡಚಣ- 6 ಮಿಮಿ
ಝಳಕಿ- 37.40 ಮಿಮಿ
ಸಿಂದಗಿ ತಾಲೂಕು
ಸಿಂದಗಿ- 00 ಮಿಮಿ
ಆಲಮೇಲ- 3.80 ಮಿಮಿ
ಸಾಸಾಬಾಳ- 00 ಮಿಮಿ
ರಾಮನಳ್ಳಿ- 8.2 ಮಿಮಿ
ದೇವರ ಹಿಪ್ಪರಗಿ ತಾಲೂಕು
ದೇವರ ಹಿಪ್ಪರಗಿ- 7 ಮಿಮಿ
ಕೊಂಡಗೂಳಿ- 00 ಮಿಮಿ
ಕಡ್ಲೆವಾಡ ಪಿಸಿಎಚ್- 10 ಮಿಮಿ
ಆಸ್ಪಿಪಾಸ್ತಿ ಹಾನಿ
ಈ ಮಧ್ಯೆ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆಯಿಂದಾಗಿ ಇಂಡಿ, ಬಬಲೇಶ್ವರ ಮತ್ತು ವಿಜಯಪುರ ತಾಲೂಕುಗಳಲ್ಲಿ ಆಸ್ತಿಪಾಸ್ತಿಗೆ ಹಾನಿಯಾಗಿದೆ.
ಇಂಡಿ ತಾಲೂಕಿನ ಬಳ್ಳೋಳ್ಳಿ ಗ್ರಾಮದಲ್ಲಿ 3 ಪಕ್ಕಾ ಮನೆಗಳು ಭಾಗಷಃ ಕುಸಿದಿವೆ.
ಬಬಲೇಶ್ವರ ತಾಲೂಕಿನ ಎರಡು ಕಚ್ಚಾ ಮನೆಗಳು ಭಾಗಷಃ ಕುಸಿದಿವೆ.
ಅಲ್ಲದೇ, ವಿಜಯಪುರ ತಾಲೂಕಿನಲ್ಲಿ ಮದಭಾವಿ ತಾಂಡಾದಲ್ಲಿ ಒಂದು ಮನೆಗೆ ಹಾನಿಯಾಗಿರುವುದು ಪ್ರಾಥಮಿಕ ವರದಿಯಲ್ಲಿ ಮಾಹಿತಿ ನೀಡಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾಹಿತಿ ನೀಡಿದ್ದಾರೆ.