Accreditation Committee: ವಿಜಯಪುರದ ಮೋಹನ ಕುಲಕರ್ಣಿ ಸೇರಿ 12 ಪತ್ರಕರ್ತರನ್ನು ಸೇರಿಸಿ ಮಾಧ್ಯಮ ಮಾನ್ಯತಾ ಸಮಿತಿ ರಚಿಸಿದ ಸರಕಾರ

ಬೆಂಗಳೂರು: ವಿಜಯಪುರದ ಸತ್ಯಕ್ರಾಂತಿ ದಿನಪತ್ರಿಕೆ ಸಂಪಾದಕ ಮತ್ತು ಕರ್ನಾಟಕ ಸಣ್ಣ ಮತ್ತು ಜಿಲ್ಲಾ ಸಂಪಾದಕರ ಸಂಘದ ಮುಖಂಡ ಹಾಗೂ ಹಿರಿಯ ಪತ್ರಕರ್ತ ಮೋಹನ ಕುಲಕರ್ಣಿ ಸೇರಿದಂತೆ 12 ಜನರನ್ನು ಮಾಧ್ಯಮ ಮಾನ್ಯತಾ ಸಮಿತಿ ಪದಾಧಿಕಾರಿಗಳಾಗಿ ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ. 

ಬೆಂಗಳೂರು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಮುಖ್ಯಸ್ಥರು ಈ ಸಮಿತಿಯ ಅಧ್ಯಕ್ಷರಾಗಿರುತ್ತಾರೆ.  ಉಳಿದಂತೆ ಹನುಮಂತರಾವ ಬೈರಾಮಡಗಿ, ಉದಯವಾಣಿ ಹಿರಿಯ ವರದಿಗಾರ(ಕಲಬುರಗಿ), ರುದ್ರಣ್ಣ ಹರ್ತಿಕೋಟಿ, ಸುದ್ದಿ ವಿಭಾಗದ ಮುಖ್ಯಸ್ಥರು, ವಿಜಯವಾಣಿ(ಬೆಂಗಳೂರು), ಮೋಹನ ಕುಲಕರ್ಣ, ಸಂಪಾದಕರು, ಸತ್ಯಕ್ರಾಂತಿ(ವಿಜಯಪುರ), ಎ. ಹರಿಪ್ರಸಾದ, ಮುಖ್ಯ ನಿರ್ಮಾಪಕರು, ಟಿವಿ9(ಬೆಂಗಳೂರು), ಕೆ. ಎಸ್. ಗಣೇಶ, ಹಿರಿಯ ಛಾಯಾಗ್ರಾಹಕರು, ವಿಜಯ ಕರ್ನಾಟಕ(ಬೆಂಗಳೂರು), ಎಚ್. ಪಿಯ ಪುಣ್ಯವತಿ, ಹಿರಿಯ ವರದಿಗಾರ್ತಿ, ವಿಜಯ ಕರ್ನಾಟಕ(ಬೆಂಗಳೂರು), ವಿನೋದ ಕುಮಾರ ಬಿ. ನಾಯಕ, ಸಹಾಯಕ ಸಂಪಾದಕರು, ಸುವರ್ಣ ಟಿವಿ ಚಾನೆಲ್(ಬೆಂಗಳೂರು), ಎಚ್. ಎಸ್. ರವೀಶ, ರಾಜಕೀಯ ವಿಭಾಗದ ಮುಖ್ಯಸ್ಥರು, ಪಬ್ಲಿಕ್ ಟಿವಿ(ಬೆಂಗಳೂರು), ವಿಜಕುಮಾರ ಮಲಗಿಹಾಳ, ವಿಶೇಷ ಬಾತ್ಮಿದಾರರು, ಕನ್ನಡ ಪ್ರಭ(ಬೆಂಗಳೂರು), ಶಂಕರ ಪಾಗೋಜಿ, ಹಿರಿಯ ವರದಿಗಾರರು, ಉದಯವಾಣಿ(ಬೆಂಗಳೂರು) ಮತ್ತು ಉಪ ನಿರ್ದೇಶಕರು, ಕೇಂದ್ರ ಕಚೇರಿ(ಸುದ್ದಿ ಮತ್ತು ಪತ್ರಿಕಾ ಶಾಖೆ) ಅವರನ್ನು ಸಮಿತಿಯ ಸದಸ್ಯರನ್ನಾಗಿ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ(ಬೆಂಗಳೂರು) ಅವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವಾರ್ತಾ ಶಾಖೆಯಿಂದ ಸಮಿತಿಗೆ ಪದಾಧಿಕಾರಿಗಳನ್ನು ಸೇರ್ಪಡೆ ಮಾಡಿ ಆದೇಶ ಹೊರಡಿಸಲಾಗಿದೆ.

ನೂತನ ಮಾಧ್ಯಮ ಮಾನ್ಯತೆ ಸಮಿತಿ ಪದಾಧಿಕಾರಿಗಳ ನೇಮಕ ಆದೇಶ

 

ಈ ಸಮಿತಿಯ ಅವಧಿ ಎರಡು ವರ್ಷ ಅಥವಾ ಸರಕಾರದ ಮುಂದಿನ ಆದೇಶದವರೆಗೆ ಜಾರಿಯಲ್ಲಿರಲಿದೆ ಎಂದು ಆದೇಶದಲ್ಲಿ ಮಾಹಿತಿ ನೀಡಲಾಗಿದೆ.

 

Leave a Reply

ಹೊಸ ಪೋಸ್ಟ್‌