Rain Fall: ತಾಳಿಕೋಟೆಯಲ್ಲಿ 46 ಮಿಮಿ, ವಿಜಯಪುರದಲ್ಲಿ 38 ಮಿಮಿ ಮಳೆ, ಒಟ್ಟು 15 ಮನೆಗಳಿಗೆ ಹಾನಿ

ವಿಜಯಪುರ: ಕಳೆದ ಮೂರು ದಿನಗಳಿಂದ ವಿಜಯಪುರ ಜಿಲ್ಲಾದ್ಯಂತ ಸುರಿಯುತ್ತಿರುವ ಮಳೆ ಮುಂದುವರೆದಿದೆ. ಬಸವ ನಾಡಿನ ಬಹುತೇಕ ಕಡೆ ಈಗಲೂ ಭಾರಿ‌ ಮೋಡ ಮುಸುಕಿದ ವಾತಾವರಣವಿದ್ದು, ಆಗಾಗ ಮಳೆಯಾಗುತ್ತಿದೆ. ಹಲವೆಡೆ ಉತ್ತಮ ಮಳೆಯಾಗಿದ್ದರೆ, ಕೆಲವೆಡೆ ಭಾರಿ ಮತ್ತೆ ಅನೇಕ ಕಡೆ ಸಾಧಾರಣ ಮಳೆಯಾಗಿದೆ.

ವಿಜಯಪುರ ಜಿಲ್ಲೆಯ ನಾನಾ ಕಡೆ ಸುರಿದ ಮಳೆಯ ವಿವರ ಇಲ್ಲಿದೆ.

ವಿಜಯಪುರ ತಾಲೂಕು

ವಿಜಯಪುರ ನಗರ- 38.60 ಮಿಮಿ

ನಾಗಠಾಣ- 00 ಮಿಮಿ

ಭೂತ್ನಾಳ- 14.40 ಮಿಮಿ

ಹಿಟ್ನಳ್ಳಿ- 21.20 ಮಿಮಿ
ಕುಮಟಗಿ- 11.20 ಮಿಮಿ

ಬಬಲೇಶ್ವರ ತಾಲೂಕು

ಮಮದಾಪುರ- 31 ಮಿಮಿ
ಬಬಲೇಶ್ವರ- 23.20 ಮಿಮಿ

ತಿಕೋಟಾ ತಾಲೂಕು

ತಿಕೋಟಾ- 21.40 ಮಿಮಿ
ಕನ್ನೂರ- 00 ಮಿಮಿ

ಬಸವನ ಬಾಗೇವಾಡಿ ತಾಲೂಕು

ಬಸವನ ಬಾಗೇವಾಡಿ- 18.20 ಮಿಮಿ
ಮನಗೂಳಿ- 5.10 ಮಿಮಿ
ಹೂವಿನ ಹಿಪ್ಪರಗಿ- 13.20.ಮಿಮಿ

ನಿಡಗುಂದಿ ತಾಲೂಕು

ಆಲಮಟ್ಟಿ- 29.60ಮಿಮಿ
ಅರೆಶಂಕರ- 29 ಮಿಮಿ

ಕೊಲ್ಹಾರ ತಾಲೂಕು

ಮಟ್ಟಿಹಾಳ- 19 ಮಿಮಿ

ಮುದ್ದೇಬಿಹಾಳ ತಾಲೂಕು

ಮುದ್ದೇಬಿಹಾಳ- 3.60 ಮಿಮಿ
ನಾಲತವಾಡ- 25 ಮಿಮಿ

ತಾಳಿಕೋಟೆ ತಾಲೂಕು

ತಾಳಿಕೋಟೆ- 46.10ಮಿಮಿ
ಡವಳಗಿ- 25 ಮಿಮಿ

ಇಂಡಿ ತಾಲೂಕು

ಇಂಡಿ- 00 ಮಿಮಿ
ನಾದ ಬಿಕೆ- 00 ಮಿಮಿ
ಅಗರಖೇಡ- 00 ಮಿಮಿ
ಹೊರ್ತಿ- 00 ಮಿಮಿ
ಹಲಸಂಗಿ- 00ಮಿಮಿ

ಚಡಚಣ ತಾಲೂಕು

ಚಡಚಣ- 00 ಮಿಮಿ
ಝಳಕಿ- 00 ಮಿಮಿ

ಸಿಂದಗಿ ತಾಲೂಕು

ಸಿಂದಗಿ- 9.20 ಮಿಮಿ
ಆಲಮೇಲ- 8 ಮಿಮಿ
ಸಾಸಾಬಾಳ- 15.20 ಮಿಮಿ
ರಾಮನಳ್ಳಿ- 4.80. ಮಿಮಿ

ದೇವರ ಹಿಪ್ಪರಗಿ ತಾಲೂಕು

ದೇವರ ಹಿಪ್ಪರಗಿ- 14 ಮಿಮಿ
ಕೊಂಡಗೂಳಿ- 31 ಮಿಮಿ
ಕಡ್ಲೆವಾಡ ಪಿಸಿಎಚ್- 21.50 ಮಿಮಿ

ಆಸ್ಪಿಪಾಸ್ತಿ ಹಾನಿ

ಈ ಮಧ್ಯೆ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆಯಿಂದಾಗಿ ಇಂಡಿ, ತಾಳಿಕೋಟೆ, ವಿಜಯಪುರ, ಸಿಂದಗಿ, ತಿಕೋಟಾ, ನಿಡಗುಂದಿ ಮತ್ತು ಬಬಲೇಶ್ವರ ತಾಲೂಕುಗಳಲ್ಲಿ ಆಸ್ತಿಪಾಸ್ತಿಗೆ ಹಾನಿಯಾಗಿದೆ.

ವಿಜಯಪುರ ತಾಲೂಕಿನಲ್ಲಿ 5 ಕಚ್ಚಾ ಮನೆಗಳು ಹಾನಿಗೀಡಾಗಿವೆ.
ಇಂಡಿ ತಾಲೂಕಿನ ಬಳ್ಳೋಳ್ಳಿ ಗ್ರಾಮದಲ್ಲಿ 3 ಪಕ್ಕಾ ಮನೆಗಳು, ತಾಳಿಕೋಟೆ ಮತ್ತು ಬಬಲೇಶ್ವರ ತಾಲುಕುಗಳಲ್ಲಿ ತಲಾ ಎರಡು ವಾಸದ ಕಚ್ಚಾ ಮನೆಗಳಿಗೆ ಭಾಗಷಃ ಹಾನಿಯಾಗಿದೆ.

ಅಲ್ಲದೇ, ಸಿಂದಗಿ, ತಿಕೋಟಾ ಮತ್ತು ನಿಡಗುಂದಿ ತಾಲೂಕುಗಳಲ್ಲಿ ತಲಾ ಒಂದು ಕಚ್ಚಾ ಮನೆಗಳಿಗೆ ಹಾನಿಯಾಗಿರುವ ಕುರಿತು ಪ್ರಾಥಮಿಕ ವರದಿಗಳಲ್ಲಿ ಮಾಹಿತಿ ನೀಡಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌