Reservation Dharani: ಬೆಂಗಳೂರಿನಲ್ಲಿ ಸತ್ಯಪ್ರತಿಪಾದನ ಹೋರಾಟ- ಸರದಿ ಸತ್ಯಾಗ್ರಹದಲ್ಲಿ ಬಸವ ನಾಡಿನ ಜಂಗಮ ಸಮಾಜದ ಬಂಧುಗಳು ಭಾಗಿ

ವಿಜಯಪುರ: ಬೇಡ ಜಂಗಮ ಮೀಸಲಾತಿ ಸರ್ಟಿಫಿಕೆಟ್ ನೀಡುವಂತೆ ಆಗ್ರಹಿಸಿ ಬೆಂಗಳೂರಿನಲ್ಲಿ ನ್ಯಾಯವಾದಿ ಬಿ. ಡಿ. ಹಿರೇಮಠ ನೇತೃತ್ವದಲ್ಲಿ ನಡೆಯುತ್ತಿರುವ ಸರದಿ ಸತ್ಯಾಗ್ರಹದಲ್ಲಿ ವಿಜಯಪುರ ಜಿಲ್ಲೆಯ ಜಂಗಮ ಬಂಧುಗಳು ಪಾಲ್ಗೋಂಡು ಬೆಂಬಲ ಸೂಚಿಸಿದ್ದಾರೆ. 

ಬೆಂಗಳೂರಿನ ಪ್ರೀಡಂ ಪಾರ್ಕಿನಲ್ಲಿ ನಡೆಯುತ್ತಿರುವ ಸತ್ಯಪ್ರತಿಪಾದನೆ ಸತ್ಯಾಗ್ರಹದಲ್ಲಿ ಪಾಲ್ಗೋಂಡ ವಿಜಯಪುರ ಜಿಲ್ಲೆಯ ಸಾವಿರಕ್ಕೂ ಹೆಚ್ಚು ಜನರು ಬೆಂಬಲ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ನ್ಯಾಯವಾದಿ ಬಿ. ಡಿ. ಹಿರೇಮಠ ಪರಿಶಿಷ್ಟ ಜಾತಿಯ 101 ಜಾತಿಗಳಲ್ಲಿ 92 ಜಾತಿಗಳು ವಂಚಿತವಾಗಿದ್ದು, ಈ ಪಟ್ಟಿಯಲ್ಲಿ 19ನೇ ಸ್ಥಾನದಲ್ಲಿರುವ ಬೇಡ ಜಂಗಮ ಸಮಾಜದ ಸರ್ಟಿಫಿಕೇಟ್ ನೀಡಲು ಕೆಲವರು ಪಿತೂರಿ ನಡಸಿದ್ದಾರೆ.  ಕೂಡಲೇ ಸರಕಾರ ಆದೇಶ ಪ್ರತಿ ನೀಡದಿದ್ದರೆ ಉಗ್ರ ಹೋರಾಟ ಮಾಡಲಾಗುವುದು.  ಕುಲಶಾಸ್ತ್ರ ಅಧ್ಯಯನದಲ್ಲಿ ಡಾ. ಕಾಮತ ವರದಿಯಲ್ಲಿ ವೀರಶೈವ ಜಂಗಮರೇ ಬೇಡ ಜಂಗಮರು ಎಂದು ಹೇಳಿದ್ದು, ಸುಪ್ರೀಂ ಕೋರ್ಟ ಕೂಡ ಇದನ್ನು ಮಾನ್ಯ ಮಾಡಿದೆ.  ಇದಕ್ಕೆ ಸರಕಾರ ಅಡ್ಡಿ ಪಡಿಸಿದರೆ ಚುನಾವಣೆಯಲ್ಲಿ ತಕ್ಕಪಾಠ ಕಲಿಸುವದಾಗಿ ಪ್ರತಿಭಟನಾಕಾರರು ಎಂದು ಎಚ್ಚರಿಕೆ ನೀಡಿದರು.

ಈ ಸಭೆಯಲ್ಲಿ ಪಾಲ್ಗೋಂಡು ಮಾತನಾಡಿದ ವಿಜಯಪುರ ಜಿಲ್ಲೆಯ ಜಂಗಮ ಸಮಾಜ ಮುಖಂಡ ಮತ್ತು ಬೇಡ ಜಂಗಮ ಹೋರಾಟ ಸಮಿತಿ ಸಂಘಟನಾ ಕಾರ್ಯದರ್ಶಿ ರಾಜು ಗಚ್ಚಿನಮಠ, ವಿಜಯಪುರ ಜಿಲ್ಲೆಯ ಇಡೀ ಜಂಗಮ ಸಮಾಜ ಬಿ. ಡಿ. ಹಿರೇಮಠರ ಬೆನ್ನಿಗಿದೆ. ಸಾಮಾಜಿಕ ಹೋರಾಟದಲ್ಲಿ ಹೆಸರು ಮಾಡಿರುವ ಬಿ. ಡಿ. ಹಿರೇಮಠ ಅವರನ್ನು ಇಡೀ ರಾಜ್ಯದ ಸಮಾಜ ಪಕ್ಷಾತೀತವಾಗಿ ಬೆಂಬಲಿಸಿದ್ದು ಪ್ರತಿಯೊಬ್ಬ ಜಂಗಮರ ಹೃದಯ ಗೆದ್ದಿದ್ದಾರೆ ಎಂದು ಹೇಳಿದರು.

ಈ ಸರದಿ ಸತ್ಯಾಗ್ರಹದಲ್ಲಿ ಬಳ್ಳಾರಿಯ ಕಲ್ಯಾಣ ಮಠದ ಶ್ರೀಗಳು, ಮಮದಾಪುರ ವಿರಕ್ತಮಠ ಶ್ರೀಗಳು ಕೋಲಾರದ ಗಣಕುಮಾರ, ಸಿಂದಗಿಯ ಶಂಕ್ರಯ್ಯ ಹಿರೇಮಠ, ಶೈಲಜಾ ಸ್ಥಾವರಮಠ, ಅರಕೇರಿಮಠ, ಪ್ರಭುಸ್ವಾಮಿ ಹಿರೇಮಠ ಜೈನಾಪೂರ, ಶಾಂತಾಬಾಯಿ ಹಿರೇಮಠ, ಡಾ. ವಸ್ತ್ರದ, ಸದಾಶಿವ ಕಾಖಂಡಕಿಮಠ, ದಯಾನಂದ ಧಾರವಾಡಮಠ, ಜಗದೀಶ ರೂಗಿಮಠ, ಅಥರ್ಗಾದ ಶಿವಯ್ಯ ಮಠಪತಿ, ಸಾಲೋಟಗಿಯ ಹಿರೇಪಟ್ಟ ಚನ್ನಬಸಯ್ಯ ಹಿರೇಮಠ, ನಿಂಗಯ್ಯ ಯಾದವಾಡಮಠ, ವಿಶ್ವೇಶ್ವರಯ್ಯ ಮಠಪತಿ, ಈಶ್ವರಯ್ಯ ಶಿರೋಳಮಠ,  ತಿಕೋಟಾದ ಸೋಮನಾಥ ಮಠಪತಿ, ಎಸ್.ಎಸ್. ಹಿರೇಮಠ, ಸಿದ್ದಯ್ಯ ಹಳ್ಳಿ, ಸೇರಿ ಸಾಲೋಟಗಿ, ಮಮದಾಪೂರ, ಗುಣದಾಳ, ನಿಡಗುಂದಿ, ಮಸೂತಿ, ತಾಳಿಕೋಟಿ, ಬಬಲೇಶ್ವರ, ಕಾಖಂಡಕಿಯ ಮುಖಂಡರು ಪಾಲ್ಗೊಂಡಿದ್ದರು.

Leave a Reply

ಹೊಸ ಪೋಸ್ಟ್‌