Rural Talents: ಚಿಕ್ಕರೂಗಿ ಗ್ರಾಮದ ಯುವಕ ಮೈನವಿರೇಳಿದ ಸಾಧನೆ- ಇವರ ಸಾಹಸ ಮೆಚ್ಚುವಂಥದ್ದು

ವಿಜಯಪುರ ಬಸವನಾಡು ವಿಜಯಪುರ ಜಿಲ್ಲೆಯ ಯುವಕರಿಬ್ಬರು ಮಾಡಿರುವ ಸಾಧನೆ ಈಗ ಗಮನ ಸೆಳೆದಿದೆ. ‌ಇಬ್ಬರೂ ಯುವಕರು ಒಂದೇ ಊರಿನವರಾಗಿದ್ದು ಇವರ ಸಾಧನೆಗಳು ಮಾತ್ರ ವಿಭಿನ್ನ ಮತ್ತು ವಿಶಿಷ್ಠವಾಗಿವೆ. ‌ಈ ಹಳ್ಳಿ ಹೈದರ ಶಕ್ತಿ ಸಾಮರ್ಥವನ್ನು ಅವರ ಸಾಧನೆಹಳು ಅನಾವರಣಗೊಳಿಸಿವೆ.

ಓರ್ವ ಯುವಕ ಮೂರು ಕಿ. ಮೀ. ವರೆಗೆ ನಡೆದು ಸಾಧನೆ ಮಾಡಿದರೆ, ಮತ್ತೂರ್ವ ಯುವಕ 11 ಕಿ. ಮೀ. ಸಂಚರಿಸಿ ಜನಮೆಚ್ಚುವ ಸಾಧನೆ ಮಾಡಿದ್ದಾರೆ.

ಅಂದ ಹಾಗೆ ಇವರಿಬ್ಬರು ಬಸವ ನೋಡುವ ವಿಜಯಪುರ ಜಿಲ್ಲೆಯ ದೇವರು ದೇವರ ಹಿಪ್ಪರಗಿ ತಾಲೂಕಿನ ಚಿಕ್ಕರೂಗಿ ಗ್ರಾಮದವರು.

ಪಂಚಮಿ ಬಂತೆಂದರೆ ಸಾಕು ಹಬ್ಬದ ಅಂಗವಾಗಿ ಉತ್ತರ ಕರ್ನಾಟಕ ಆದರಲ್ಲೂ ವಿಜಯಪುರ ಜಿಲ್ಲೆಯಲ್ಲಿ ಯುವಕರು, ತರಹೇವಾರು ರೀತಿಯಲ್ಲಿ ದೈಹಿಕ ಕಸರತ್ತು ತೋರುವ ಮೂಲಕ ಬಾಜಿ ಕಟ್ಟುತ್ತಾರೆ. ಅಲ್ಲದೇ, ಕೆಲವರು ತಮ್ಮ ಸಾಮರ್ಥ್ಯವನ್ನು ತೋರಿಸುವು ಮೂಲಕ ಜನರಿಂದ ಭೇಷ ಎನಿಸಿಕೊಂಡು ಬಕ್ಷಿಸು ಕೂಡ ಪಡುತ್ತಾರೆ. ಅಷ್ಟೇ ಅಲ್ಲ, ಗ್ರಾಮೀಣ ಕ್ರೀಡೆಗಳ ನಾದ ಬಲ್ಲವರು ಇಂಥ ಯುವಕರಲ್ಲಿರುವ ಕಲೆಯನ್ನು ಪ್ರೋತ್ಸಾಹಿಸುವ ಮೂಲಕ ಉತ್ತೇಜನ ನೀಡುತ್ತಾರೆ.

ಮರಗಾಲ ಕಟ್ಟಿ 101 ಕೆಜಿ ಗೋದಿಚೀಲ ಹೊತ್ತುಕೊಂಡು 3 ಕಿ. ಮೀ. ನಡೆದ ಚಿಕ್ಕರೂಗಿ ಯುವಕ ಶರಣಪ್ಪ ರಾಯಗೊಂಡ ಪೂಜಾರಿ

ಮೊದಲ ಪ್ರಕರಣದಲ್ಲಿ ಸುಮಾರು 21 ವರ್ಷದ ಯುವಕ ಶರಣಪ್ಪ ರಾಯಗೊಂಡ ಪೂಜಾರಿ ಮರಗಾಲ ಕಟ್ಟಿ ಅಂದರೆ ಪಾದದ ಕೆಳಗೆ ಸುಮಾರು ಒಂದರಿಂದ ಒಂದೂವರೆ ಅಡಿ ಎತ್ತರದ ಕಟ್ಟಿಗೆಯನ್ನು ಕಟ್ಟಿ ಅದರ ಮೇಲೆ ನಿಂತುಕೊಂಡು ಗೋಣಿ ಚೀಲದಲ್ಲಿ 101 ಕೆಜಿ ಗೋಧಿಯನ್ನು ಹಾಕಿ ಚಿಕ್ಕ ರೋಗಿಯಿಂದ ಕಡ್ಲಿವಾಡ ಪಿಸಿಎಚ್ ಗ್ರಾಮದವರೆಗೆ 3 ಕಿ. ಮೀ. ವರೆಗೆ ನಡೆಯುವ ಮೂಲಕ ಮೈ ನವಿರೇಳಿಸುವ ಸಾಧನೆ ಮಾಡಿದ್ದಾನೆ. ನೂರಾರು ಜನರ ಜೈಕಾರ ಶಿಳ್ಳೆ ಮತ್ತು ಚಪ್ಪಾಳೆಯ ಪ್ರೋತ್ಸಾಹದ ಮಧ್ಯೆ ಸಾಧನೆಗೈದಿರುವ ಈ ಯುವಕನ ಸಾಹಸಗಾಥೆ ಈಗ ಮನೆ ಮಾತಾಗಿದೆ.

ಬರಿಗಾಲಿನಲ್ಲಿಯೇ ಜನ ನಡೆಯುಲು ಹೆದರುವ ಜನರಿರುವ ಇಂದಿನ ದಿನಗಳಲ್ಲಿ ಈ ಯುವಕ ಮರಗಾಲ ಕಟ್ಟಿಕೊಂಡು 101 ಕೆ. ಜಿ. ತೂಕದ ಗೋದಿಯನ್ನು ತುಂಬಿರುವ ಗೋಣಿ ಚೀಲದ ಬಾರವನ್ನು ಹೊತ್ತುಕೊಂಡು ನಡೆದು ತೋರಿರುವ ಸಾಮರ್ಥ್ಯ ಈಗ ಪ್ರಶಂಸೆಗೆ ಪಾತ್ರವಾಗಿದೆ.

13 ಕಿ. ಮೀ. 110 ಕೆಜಿ ಭಾರ ಹೊತ್ತು ಬರಿಗಾಲಲ್ಲಿ ನಡೆದ ಯುವಕ ಪ್ರಕಾಶ ಭೈರವಾಡಗಿ

ಈ ಯುವಕನ ಸಾಧನೆಯನ್ನು ಮೆಚ್ಚಿ ಗ್ರಾಮಸ್ಥರು ಸನ್ಮಾನಿಸಿ ಗೌರವಿಸಿದ್ದಾರೆ. ಈ ಮೂಲಕ ಯುವಕನ ಸಾಧನೆಯನ್ನು ಮೆಚ್ಚಿಕೊಂಡಿದ್ದಾರೆ.

 

ಎರಡನೇ ಪ್ರಕರಣದಲ್ಲಿ ಇದೇ ಚಿಕ್ಕರೂಗಿ ಗ್ರಾಮದ ಯುವಕ ಸುಮಾರು 24 ವರ್ಷದ ಪ್ರಕಾಶ ಭೈರವಾಡಗಿ 110 ಕೆ.‌ ಜಿ. ಗೋದಿ ತುಂಬಿರುವ ಚೀಲವನ್ನು ಹೊತ್ತುಕೊಂಡು ಚಿಕ್ಕರೂಗಿಯಿಂದ ನಿವಾಳಖೇಡ ಗ್ರಾಮದವರೆಗೆ ಸುಮಾರು 13 ಕಿ. ಮೀ. ನಡೆಯುವ ಮೂಲಕ ಮೈ ನೆವಿರುಳಿಸುವ ಸಾಧನೆ ಮಾಡಿದ್ದಾನೆ. 101 ಕೆ.‌ ಜಿ. ಗೋಧಿ ಚಲ ಹೊತ್ತುಕೊಂಡು ಯುವಕ ರಾಜ್ಯ ಹೆದ್ದಾರಿಯಲ್ಲಿ ಮುಂದೆ ಸಾಗುತ್ತಿದ್ದರೆ, ಜೈಕಾರ ಹಾಕುತ್ತ, ಶಿಳ್ಳೆ ಓದುತ್ತ, ಚಪ್ಪಾಳೆ ಬಾರಿಸುತ್ತಾ ಹುರುದುಂಬಿಸಿದ್ದಾರೆ.

ರಾಜ್ಯ ಹೆದ್ದಾರಿಯಲ್ಲಿ ನಡೆದ ಈ ಸಾಧನೆಯನ್ನು ಮನಸಾರೆ ಕೊಂಡಾಡಿದ್ದಾರೆ. ಅಲ್ಲದೆ ಸಾರ್ವಜನಿಕರು ಕೂಡ ಮೂಗಿನ ಮೇಲೆ ಬೆರಳಿಟ್ಟುಕೊಂಡು ಅಚ್ಚರಿ ಮೂಡಿಸಿದ್ದಾರೆ. ಈ ಯುವಕನ ಸಾಧನೆ ಬಳಿಕ ಆತನನ್ನು ಗ್ರಾಮಸ್ಥರು ಪೇಟ ತೋರಿಸಿ ಸನ್ಮಾನಿಸಿ ಗೌರವಿಸಿದ್ದಾರೆ.

ಈ ಬಾರಿ ನಾಗರ ಪಂಚಮಿ ಬಸವ ನಾಡಿನಲ್ಲಿ ಈ ಯುವಕರ ಮೈ ನವಿರೇಳಿಸುವ ಸಾಧನೆಯೂಲಕ ಹಬ್ಬದ ಮೆರಗು ಹೆಚ್ಚಾಗಲು ಕಾರಣವಾಗಿದೆ.

Leave a Reply

ಹೊಸ ಪೋಸ್ಟ್‌