CPI Transfer: ಗಾಂಧಿಚೌಕ ಸಿಪಿಐ ರವೀಂದ್ರ ನಾಯ್ಕೋಡಿ ಸೇರಿ ರಾಜ್ಯಾದ್ಯಂತ 108 ಸಿಪಿಐ ಗಳ ವರ್ಗಾವಣೆ- ಸರಕಾರ ಆದೇಶ

ವಿಜಯಪುರ: ನಗರದ ಗಾಂಧಿಚೌಕ ಠಾಣೆಯ ಜನಪ್ರೀಯ ಸಿಪಿಐ ರವೀಂದ್ರ ನಾಯ್ಕೋಡಿ ಅವರನ್ನು ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಕಳೆದ 3ಕ್ಕೂ ಹೆಚ್ಚು ವರ್ಷಗಳಿಂದ ಗಾಂಧಿಚೌಕ್ ಸಿಪಿಐ ಆಗಿ ಸೇವೆ ಸಲ್ಲಿಸುತ್ತಿದ್ದ ರವೀಂದ್ರ ನಾಯ್ಕೋಡಿ ನಾನಾ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ಗಮನ ಸೆಳೆದಿದ್ದರು.  ಅಲ್ಲದೇ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಯೂ ಶ್ರಮ ವಹಿಸಿದ್ದರು. ಈಗ ಸರಕಾರ ರವೀಂದ್ರ ನಾಯ್ಕೋಡಿ ಅವರನ್ನು ಪಕ್ಕದ ಬೆಳಗಾವಿ ಜಿಲ್ಲೆಯ ಅಥಣಿಗೆ ವರ್ಗಾವಣೆ ಮಾಡಲಾಗಿದೆ.   ಸಾಹೇಬಗೌಡ ಪಾಟೀಲ […]

Amrut ZP CEO: ಅಮೃತ ಗ್ರಾ. ಪಂ. ಯೋಜನೆ: ಜಿಪಂ ಸಿಇಓ ರಾಹುಲ್ ಶಿಂಧೆ ಅವರಿಂದ ವಿಶೇಷ ಸಭೆ

ವಿಜಯಪುರ: ಭಾರತದ 75ನೇ ಸ್ವಾತಂತ್ರ‍್ಯದ ಅಮೃತ ಮಹೋತ್ಸವದ ಸವಿನೆನಪಿಗಾಗಿ ಸರ್ಕಾರವು ಅಮೃತ ಗ್ರಾಮ ಪಂಚಾಯತಿ ಯೋಜನೆ ಜಾರಿ ತಂದಿದೆ. ಈ ಯೋಜನೆ ಸಮರ್ಪಕ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಚರ್ಚಿಸಲು, ಜಿ. ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಹುಲ್ ಶಿಂಧೆ ಜಿ. ಪಂ. ಸಭಾಂಗಣದಲ್ಲಿ ನಾನಾ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಿದರು. ಮೊದಲನೇ ಹಂತದಲ್ಲಿ ಆಯ್ಕೆಯಾದ ಅಮೃತ ಗ್ರಾ. ಪಂ. ಗಳಲ್ಲಿ ಅನುಷ್ಠಾನಗೊಳ್ಳುತ್ತಿರುವ ಕಾಮಗಾರಿಗಳ ಕುರಿತಂತೆ ಸಭೆಯಲ್ಲಿ ಚರ್ಚಿಸಿ, ನಾನಾ ತಾಲೂಕುಗಳ ಸಹಾಯಕ ನಿರ್ದೇಶಕರು ಮತ್ತು ಅಮೃತ ಗ್ರಾಮ ಪಂಚಾಯತಿ […]

Heavy Rain: ಕಳೆದ 24 ಗಂಟೆಗಳಲ್ಲಿ ಬಬಲೇಶ್ವರದಲ್ಲಿ 132 ಮಿಮಿ, ದೇ. ಹಿಪ್ಪರಗಿಯಲ್ಲಿ 105 ಮಿಮಿ, ಭೂತ್ನಾಳದಲ್ಲಿ 84 ಮಿಮಿ ಮಳೆ- 1520 ಹೆ. ಬೆಳೆ ಜಲಾವೃತ

ವಿಜಯಪುರ: ಗುರುವಾರ ಬೆ. 8 ರಿಂದ ಶುಕ್ರವಾರ ಬೆ. 8 ಗಂಟೆಯ ವರೆಗೆ ಕಳೆದ 24 ಗಂಟೆಗಳಲ್ಲಿ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಅಲ್ಲಲ್ಲಿ ಭಾರಿ ಮಳೆಯಾಗಿದೆ.  ಅಲ್ಲದೇ, 1520 ಹೆಕ್ಟೇರಿಗೂ ಹೆಚ್ಚು ಕೃಷಿ ಮತ್ತು ತೋಟಗಾರಿಕೆ ಬೆಳೆ ಜಲಾವೃತವಾಗಿದೆ. ಕಳೆದ 24 ಗಂಟೆಗಳಲ್ಲಿ ಬಬಲೇಶ್ವರದಲ್ಲಿ 132 ಮಿಮಿ ದಾಖಲೆಯ ಮಳೆಯಾಗಿದೆ.  ಜಿಲ್ಲೆಯ ನಾನಾ ಭಾಗಗಳಲ್ಲಿ ಸುರಿದಿರುವ ಮಳೆಯ ವಿವರ ಇಲ್ಲಿದೆ. ವಿಜಯಪುರ ತಾಲೂಕು ವಿಜಯಪುರ ನಗರ- 9.2 ಮಿಮಿ, ನಾಗಠಾಣ- 54 ಮಿಮಿ, ಭೂತ್ನಾಳ- 88.40 ಮಿಮಿ, ಹಿಟ್ನಳ್ಳಿ- 53.20 […]

Flood Visit: ಡೋಣಿ ನದಿ ಪ್ರವಾಹ: ಎಂ. ಬಿ. ಪಾಟೀಲ ಸೂಚನೆ- ನಾನಾ ಗ್ರಾಮಗಳಿಗೆ ಜಿಲ್ಲಾಧಿಕಾರಿ ಭೇಟಿ

ವಿಜಯಪುರ: ಬಬಲೇಶ್ವರ ಕ್ಷೇತ್ರದ ನಾನಾ ಗ್ರಾಮಗಳಲ್ಲಿ ಡೋಣಿ ನದಿ ಪ್ರವಾಹ ಪೀಡಿತ ಪ್ರದೇಶಗಳ ಸಮೀಕ್ಷೆ ಮಾಡಿ, ಕೂಡಲೇ ಹಾನಿಗೊಳಗಾದವರಿಗೆ ಅನ್ಯಾಯವಾಗದಂತೆ ಸೂಕ್ತ ಪರಿಹಾರ ದೊರಕುವಂತೆ ನೋಡಿಕೊಳ್ಳಿ ಎಂದು ಬಬಲೇಶ್ವರ ಶಾಸಕ ಎಂ. ಬಿ. ಪಾಟೀಲ‌ ಅವರು ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರಿಗೆ ಸೂಚಿಸೆ ನೀಡಿದ್ದಾರೆ. ಎಂ. ಬಿ. ಪಾಟೀಲ‌ ಅವರ ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು‌ ಡೋಣಿ ನದಿ ಪ್ರವಾಹದಿಂದ ಹಾನಿಗೊಳಗಾದ ಕೋಟ್ಯಾಳ, ಧನ್ಯಾಳ, ದಾಶ್ಯಾಳ ಹಾಗೂ ಸಾರವಾಡ ಗ್ರಾಮಗಳಿಗೆ ತೆರಳಿ, ವಸ್ತುಸ್ಥಿತಿ ಅವಲೋಕಿಸಿದರು. ಅಲ್ಲದೇ, […]

Heavy Rain: ಕಳ್ಳಕವಟಗಿ ಸಂಗಮನಾಥ ದೇವಸ್ಥಾನ ಜಲಾವೃತ- ಉಕ್ಕಿ ಹರಿಯುತ್ತಿರುವ ಡೋಣಿ ನದಿ

ವಿಜಯಪುರ: ಬಸವನಾಡು ವಿಜಯಪುರ ಜಿಲ್ಲಾಧ್ಯಂತ ಕಳೆದ ನಾಲ್ಕೈದು ದಿನಗಳಿಂದ ಆಗಾಗ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮಲೆನಾಡಿನ ವಾತಾವರಣ ಸೃಷ್ಟಿಯಾಗಿದೆ. ಹಳ್ಳಕೊಳ್ಳಗಳು ಮೈತುಂಬಿ ಹರಿಯುತ್ತಿವೆ. ಕೆಲವು ಕಡೆಗಳಲ್ಲಿ ಮನೆಗಳಿಗೆ, ನಾನಾ ಕಟ್ಟಡಗಳಿಗೆ ನೀರು ನುಗ್ಗಿದೆ. ವಿಜಯಪುರ ಜಿಲ್ಲೆಯ ಹಲವಾರು ಕಡೆ ಜಮೀನುಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಿದ್ದು, ಹಲವು ಕಡೆಗಳಲ್ಲಿ ಬೆಳೆಯೂ ಹಾನಿಯಾಗಿದೆ. ಮುಂಗಾರು ಸರಿಯಾಗಿ ಸುರಿಯದ ಕಾರಣ ಕಂಗಾಲಾಗಿದ್ದ ರೈತರ ಮುಖದಲ್ಲಿ ಈಗ ಸುರಿಯುತ್ತಿರುವ ಧಾರಾಕಾರ ಮಳೆ ಸಂತಸದ ಉಂಟು ಮಾಡಿದೆ.     ತಿಕೋಟಾ ತಾಲೂಕಿನಲ್ಲಿ […]