ವಿಜಯಪುರ: ಗುರುವಾರ ಬೆ. 8 ರಿಂದ ಶುಕ್ರವಾರ ಬೆ. 8 ಗಂಟೆಯ ವರೆಗೆ ಕಳೆದ 24 ಗಂಟೆಗಳಲ್ಲಿ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಅಲ್ಲಲ್ಲಿ ಭಾರಿ ಮಳೆಯಾಗಿದೆ. ಅಲ್ಲದೇ, 1520 ಹೆಕ್ಟೇರಿಗೂ ಹೆಚ್ಚು ಕೃಷಿ ಮತ್ತು ತೋಟಗಾರಿಕೆ ಬೆಳೆ ಜಲಾವೃತವಾಗಿದೆ.
ಕಳೆದ 24 ಗಂಟೆಗಳಲ್ಲಿ ಬಬಲೇಶ್ವರದಲ್ಲಿ 132 ಮಿಮಿ ದಾಖಲೆಯ ಮಳೆಯಾಗಿದೆ. ಜಿಲ್ಲೆಯ ನಾನಾ ಭಾಗಗಳಲ್ಲಿ ಸುರಿದಿರುವ ಮಳೆಯ ವಿವರ ಇಲ್ಲಿದೆ.
ವಿಜಯಪುರ ತಾಲೂಕು
ವಿಜಯಪುರ ನಗರ- 9.2 ಮಿಮಿ, ನಾಗಠಾಣ- 54 ಮಿಮಿ, ಭೂತ್ನಾಳ- 88.40 ಮಿಮಿ, ಹಿಟ್ನಳ್ಳಿ- 53.20 ಮಿಮಿ ಮತ್ತು ಕುಮಟಗಿ-2.40 ಮಿಮಿ ಮಳೆಯಾಗಿದೆ.
ಬಬಲೇಶ್ವರ ತಾಲೂಕು
ಮಮದಾಪುರ- 00 ಮಿಮಿ ಮತ್ತು ಬಬಲೇಶ್ವರ- 132.40 ಮಿಮಿ ಮಳೆಯಾಗಿದೆ.
ತಿಕೋಟಾ ತಾಲೂಕು
ತಿಕೋಟಾ- 58.20 ಮಿಮಿ ಮತ್ತು ಕನ್ನೂರ- 26.90 ಮಿಮಿ ಮಳೆಯಾಗಿದೆ.
ಬಸವನ ಬಾಗೇವಾಡಿ ತಾಲೂಕು
ಬಸವನ ಬಾಗೇವಾಡಿ- 23 ಮಿಮಿ, ಮನಗೂಳಿ- 22.30 ಮಿಮಿ ಮತ್ತು ಹೂವಿನ ಹಿಪ್ಪರಗಿ- 9.820.ಮಿಮಿ ಮಳೆಯಾಗಿದೆ.
ನಿಡಗುಂದಿ ತಾಲೂಕು
ಆಲಮಟ್ಟಿ- 4.20ಮಿಮಿ ಮತ್ತು ಅರೆಶಂಕರ- 2.00 ಮಿಮಿ ಮಳೆಯಾಗಿದೆ.
ಕೊಲ್ಹಾರ ತಾಲೂಕು
ಮಟ್ಟಿಹಾಳ- 00 ಮಿಮಿ ಯಾವುದೇ ಮಳೆಯಾಗಿಲ್ಲ.
ಮುದ್ದೇಬಿಹಾಳ ತಾಲೂಕು
ಮುದ್ದೇಬಿಹಾಳ- 7.10 ಮಿಮಿ ಮತ್ತು ನಾಲತವಾಡ- 23.60 ಮಿಮಿ ಮಳೆಯಾಗಿದೆ.
ತಾಳಿಕೋಟೆ ತಾಲೂಕು
ತಾಳಿಕೋಟೆ- 7.30 ಮಿಮಿ ಮತ್ತು ಡವಳಗಿ- 8.40 ಮಿಮಿ ಮಳೆಯಾಗಿದೆ.
ಇಂಡಿ ತಾಲೂಕು
ಇಂಡಿ- 00 ಮಿಮಿ, ನಾದ ಬಿಕೆ- 2 ಮಿಮಿ, ಅಗರಖೇಡ- 14.20 ಮಿಮಿ, ಹೊರ್ತಿ- 00 ಮಿಮಿ ಮತ್ತು ಹಲಸಂಗಿ- 3 ಮಿಮಿ ಮಳೆಯಾಗಿದೆ.
ಚಡಚಣ ತಾಲೂಕು
ಚಡಚಣ- 16.40 ಮಿಮಿ ಮತ್ತು ಝಳಕಿ- 1.30 ಮಿಮಿ ಮಳೆಯಾಗಿದೆ.
ಸಿಂದಗಿ ತಾಲೂಕು
ಸಿಂದಗಿ- 14 ಮಿಮಿ, ಆಲಮೇಲ- 7 ಮಿಮಿ, ಸಾಸಾಬಾಳ- 18.30 ಮಿಮಿ ಮತ್ತು ರಾಮನಳ್ಳಿ- 6.20. ಮಿಮಿ ಮಳೆಯಾಗಿದೆ.
ದೇವರ ಹಿಪ್ಪರಗಿ ತಾಲೂಕು
ದೇವರ ಹಿಪ್ಪರಗಿ- 105.2 ಮಿಮಿ, ಕೊಂಡಗೂಳಿ- 6.60 ಮಿಮಿ, ಕಡ್ಲೆವಾಡ ಪಿಸಿಎಚ್- 12.10 ಮಿಮಿ ಮಳೆ ದಾಖಲಾಗಿದೆ.
ಆಸ್ಪಿಪಾಸ್ತಿ ಹಾನಿ
ವಿಜಯಪುರ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ತಿಕೋಟಾ, ಬಬಲೇಶ್ವರ ಮತ್ತು ವಿಜಯಪುರ ತಾಲೂಕಿನಲ್ಲಿ ಡೋಣಿ ನದಿ ಪ್ರವಾಹ ಉಂಟಾಗಿದೆ. ಈ ಪ್ರವಾಹದಿಂದಾಗಿ ಸುಮಾರು 1520.60 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿರುವ ಕೃಷಿ ಮತ್ತು ತೋಟಗಾರಿಗೆ ಬೆಳೆಗಳು ಜಲಾವೃತವಾಗಿವೆ. ಪ್ರವಾಹ ಇಳಿಕೆಯಾದ ನಂತರ ಜಂಟಿ ಸಮೀಕ್ಷೆ ಕಾರ್ಯ ಕೈಗೊಳಳಾಗುವುದು. ಈಗಾಗಲೇ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಅವರು ಡೋಣಿ ನದಿ ಪ್ರವಾಹಕ್ಕೆ ಒಳಗಾದ ಸಾರವಾಡ, ಧನ್ನಾಯಳ ಮತ್ತು ತಿಕೋಟಾ ತಾಲೂಕಿನ ಕೋಟ್ಯಾಳ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾರ್ಮಿಕರ ರಕ್ಷಣೆ
ಸಿಂದಗಿ ತಾಲೂಕಿನ ಬಮ್ಮನಹಳಅಳಿ ಕೆರೆಯ ಕೋಡಿಯಿಂದ ಬೂದಿಹಾಳ ಪಿ. ಎಚ್. ಗ್ರಾಮದ ಹಳ್ಳದ ನೀರಿನಲ್ಲಿ ಸಿಲುಕಿರುವ ಆರು ಜನರನ್ನು ಕಾರ್ಯಾಚರಣೆ ನಡೆಸಿ ರಕ್ಷಿಸಲಾಗಿದೆ.
ಮನೆಗಳಿಗೆ ಹಾನಿ
ಮಳೆಯಿಂದಾಗಿ ವಿಜಯಪುರ ತಾಲೂಕಿನಲ್ಲಿ 86, ಮುದ್ದೇಬಿಹಾಳ ತಾಲೂಕಿನಲ್ಲಿ 30, ಬಬಲೇಶ್ವರ ತಾಲೂಕಿನಲ್ಲಿ 13, ದೇವರ ಹಿಪ್ಪರಗಿ ತಾಲೂಕಿನಲ್ಲಿ ಆರು, ಇಂಡಿ ಮತ್ತುತಾಳಿಕೋಟೆ ತಾಲೂಕಿನಲ್ಲಿ ತಲಾ ಎರಡು ಹಾಗೂ ಸಿಂದಗಿ ತಾಲೂಕಿನಲ್ಲಿ ಒಂದು ಸೇರಿದಂತೆ ಒಟ್ಟು 140 ಕಚ್ಚಾ ಮನೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.