CPI Transfer: ಗಾಂಧಿಚೌಕ ಸಿಪಿಐ ರವೀಂದ್ರ ನಾಯ್ಕೋಡಿ ಸೇರಿ ರಾಜ್ಯಾದ್ಯಂತ 108 ಸಿಪಿಐ ಗಳ ವರ್ಗಾವಣೆ- ಸರಕಾರ ಆದೇಶ

ವಿಜಯಪುರ: ನಗರದ ಗಾಂಧಿಚೌಕ ಠಾಣೆಯ ಜನಪ್ರೀಯ ಸಿಪಿಐ ರವೀಂದ್ರ ನಾಯ್ಕೋಡಿ ಅವರನ್ನು ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.

ಕಳೆದ 3ಕ್ಕೂ ಹೆಚ್ಚು ವರ್ಷಗಳಿಂದ ಗಾಂಧಿಚೌಕ್ ಸಿಪಿಐ ಆಗಿ ಸೇವೆ ಸಲ್ಲಿಸುತ್ತಿದ್ದ ರವೀಂದ್ರ ನಾಯ್ಕೋಡಿ ನಾನಾ ಅಪರಾಧ ಪ್ರಕರಣಗಳನ್ನು ಪತ್ತೆ ಹಚ್ಚುವ ಮೂಲಕ ಗಮನ ಸೆಳೆದಿದ್ದರು.  ಅಲ್ಲದೇ, ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿಯೂ ಶ್ರಮ ವಹಿಸಿದ್ದರು.

ಈಗ ಸರಕಾರ ರವೀಂದ್ರ ನಾಯ್ಕೋಡಿ ಅವರನ್ನು ಪಕ್ಕದ ಬೆಳಗಾವಿ ಜಿಲ್ಲೆಯ ಅಥಣಿಗೆ ವರ್ಗಾವಣೆ ಮಾಡಲಾಗಿದೆ.

 

ಸಾಹೇಬಗೌಡ ಪಾಟೀಲ ಚಡಣದಲ್ಲಿಯೇ ಮುಂದುವರಿಕೆ

ಈ ಮಧ್ಯೆ, ಇತ್ತೀಚೆಗಷ್ಟೇ ವರ್ಗಾವಣೆಯಾಗಿದ್ದ ಸಾಹೇಬಗೌಡ ಪಾಟೀಲ ಅವರನ್ನು ಚಡಚಣ ಸಿಪಿಐ ಆಗಿ ಮತ್ತೆ ಮುಂದುವರೆಸಿ ಸರಕಾರ ಆದೇಶ ಹೊರಡಿಸಿದೆ.

ರಾಜ್ಯದ ನಾನಾ ವೃತ್ತಗಳಿಗೆ ವರ್ಗಾವಣೆಯಾಗಿರುವ ಸಿಪಿಐ ಗಳ ಮಾಹಿತಿ ಇಲ್ಲಿದೆ.

 

Leave a Reply

ಹೊಸ ಪೋಸ್ಟ್‌