ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆ ತರಹೇವಾರಿ ಜಾತ್ರೆ, ಸಂಪ್ರದಾಯ, ಆಚರಣೆ, ಕೋಮು ಸೌಹಾರ್ದತೆಗೆ ಹೆಸರುವಾಸಿ. ರಾಜ್ಯ ಇತರ ಜಿಲ್ಲೆಗಳಿಗೆ ಹೋಲಿಸಿದರೆ ಈ ಜಿಲ್ಲೆಯಲ್ಲಿ ಹಬ್ಬಗಳು, ಆಚರಣೆಗಳು, ಜಾತ್ರೆಗಳು, ಉತ್ಸವಗಳು ಅತೀ ಹೆಚ್ಚು. ಪ್ರತಿ ದಿನವೂ ಒಂದಿಲ್ಲೊಂದು ಗ್ರಾಮಗಳಲ್ಲಿ ಜಾತ್ರೆ, ಉತ್ಸವ, ಹಬ್ಬಗಳು, ಕಾರ್ಯಕ್ರಮಗಳ ನಡೆದೇ ಇರುತ್ತವೆ.
ಕಳೆದ ಎರಡು ವರ್ಷಗಳಿಂದ ಕೊರೊನಾದಿಂದಾಗಿ ಸಾರ್ಜಜನಿಕವಾಗಿ ಆಚರಿಸಲಾಗುವು ಜಾತ್ರೆಗಳು, ಹಬ್ಬ, ಹರಿದಿನಗಳು, ಉತ್ಸವಗಳಿಗೆ ಮಂಕು ಕವಿದಿತ್ತು. ಆದರೆ, ಈ ಕೊರೊನಾ ಸೋಂಕಿನ ಬಗ್ಗೆ ಜನರಲ್ಲಿದ್ದ ಆತಂಕ ಬಹುತೇಕ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಮತ್ತೆ ಜಾತ್ರೆ, ಉರುಸುಗಳು ಗತವೈಭವಕ್ಕೆ ಮರಳುತ್ತಿವೆ.
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ನಾಲತವಾಡ ಪಟ್ಟಣದಲ್ಲಿ ಹಿಂದೂ ಮತ್ತು ಮುಸ್ಲಿಮರ ಭಾವೈಕ್ಯತೆಯ ಸಂಕೇತವಾದ ಮೊಹರಂ ಆಚರಣೆ ಈ ಬಾರಿ ವಿಶಿಷ್ಠವಾಗಿತ್ತು. ಏಕೆಂದರೆ ಅಗ್ನಿಯಲ್ಲಿಯಲ್ಲಿ ಹಾಯುವುದು ಅಂದರೆ ಕುಂಡವೊಂದರಲ್ಲಿ ಕಟ್ಟಿಗೆಗಳನ್ನು ಸುಟ್ಟು ಬೆಂಕಿಯ ಕೆಂಡದಲ್ಲಿ ಹಾಯುವ ಕಾರ್ಯಕ್ರಮ ನಡೆಯಿತು. ಉರುಸಿನಲ್ಲಿ ಇಂಥ ಸಂಪ್ರದಾಯಗಳು ಬಹುತೇಕ ಕಡಿಮೆ. ಆದರೆ, ಇಲ್ಲಿ ಹಿಂದೂಗಳ ಜೊತೆ ಮುಸ್ಲಿ ಬಾಂಧವರೂ ಅಗ್ನಿಯಲ್ಲಿ ಹಾಯುವ ಮೂಲಕ ಮತ್ತು ಮಡಿಯಲ್ಲಿ ಸಂಪ್ರದಾಯ ಪಾಲಿಸುವ ಮೂಲಕ ಗಮನ ಸೆಳೆದರು.
ನಾಲತವಾಡ ಪಟ್ಟಣದ ಮೂರು ಓಣಿಯ ಮಸೂತಿ ಯಲ್ಲಿ ಹಿಂದು ಮುಸ್ಲಿಂ ಕೂಡಿಕೊಂಡು ಮೊಹರಂ ಆಚರಣೆ ಮಾಡುತ್ತಿದ್ದಾರೆ. ಐದು ದಿನಗಳ ಈ ಅದ್ದೂರಿ ಮೊಹರಂ ಆಚರಣೆ ಮಾಡುತ್ತಿದ್ದಾರೆ. ಸೋಮವಾರ ರಾತ್ರಿ ಚವನಭಾವಿ ಅವರಿಂದ ಯಜ್ಜೆ ಮೇಳ ಹಾಗೂ ನಾಲತವಾಡ ಪಟ್ಟಣದ ರಿವಾಯತ ಪದಗಳು ಮೆರಗು ತಂದವು ರಾತ್ರಿ ಇಡೀ ಜಾಗ್ರಣೆ ಮಾಡಿ ನಂತರ 15 ಜನ ಯುವಕರು ಹಿರಿಯರು ಕುಡಿ ಕೊಂಡು 15 ಬಿಂದಿಗೆ ತಗಿದುಕೂಂಡು ಗಂಗಸ್ಥಳಕೆ ಹೋಗಿ ತಾವು ಮಡಿ ಯಿಂದ. ಬಿಂದಿಗೆ ತುಂಬಿಕೊಂಡು ಬಂದು ಅಲಾಯ್ ಕುಣಿಯ ಐದು ಸುತ್ತು ನೀರನ್ನು ಹಾಕಿ ಮಡಿವಂತರಾಗಿ ಮಸೂತಿ ಒಳಗೆ ಹೋಗಿ ಅಲ್ಲಿಯೂ ಮಡಿ ಪಾಲನೆ ಮಾಡಿದರು. ನಂತರ. ಅಲಾಯ್ ಕುಣಿಯ ಮುಂದೆ ದೀಪಗಳನ್ನು ಹಚ್ಚಿ ಒಂದು ನಿಂಬಿ ಹಣ್ಣನ್ನು ಇಟ್ಡರು. ಈಗಾಗಲೇ ಅಲಾಯ್ ಬೆಂಕಿಯ ಕುಣಿಯಲ್ಲಿದ್ದ ಕೆಂಡದ ಮೇಲೆ ಈ 15 ಜನರು ಮಡಿಯಿಂದ ಒಬ್ಬೊಬ್ಬರಂತೆ ಹಾಯ್ದು ಮಸೀದಿಯ ಒಳಗೆ ಪ್ರವೇಶ ಮಾಡಿದರು. ಭಾವೈಕ್ಯತೆಯ ಈ ಆಚರಣೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಬಾಂಧವರು ಯಾವುದೇ ಧರ್ಮ ಭೇದವಿಲ್ಲದೆ ಪಾಲ್ಗೋಂಡು ಹಬ್ಬದ ಸಂಭ್ರಮವನ್ನು ಹೆಚ್ಚಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕ ಇಮಾಮಸಾಬ ಅವಟಿ ಮತ್ತು ನಾಲತವಾಡ ಪಟ್ಟಣದ ಮುಖಂಡ ಹಸನಸಾಬ ಕುಳಗೇರಿ, ಖಾಜಹುಸೆನ್ ಖತೀಬಿ, ರಾಜೇಸಾಬ ಕುಳಗೇರಿ ಬಸವರಾಜ ಭೋವಿ, ರಾಯಪ್ಪ ಭೋವಿ, ಅಲ್ಲಾಭಕ್ಷ ಕುಳಗೇರಿ, ಬಸವರಾಜ ತಳವಾರ ಇನ್ನೂ ಮೂರು ಓಣಿಯ ಹಿರಿಯರು ಸಾಮೂಹಿಕವಾಗಿ ಪಾಲ್ಗೋಂಡು ಮೊಹರಂ ಅಲಾಯಿ ದೇವರ ಜಾತ್ರೆಯ ಮೆರಗು ಹೆಚ್ಚಾಗಲು ಕಾರಣರಾದರು. ಅಲ್ಲದೇ, ಸಾಮಾಜಿಕ ಸಾಮರಸ್ಯ ಹದಗೆಡುತ್ತಿರುವ ಇಂದಿನ ದಿನಗಳಲ್ಲಿ ಏಕತೆ ಮತ್ತು ಭಾವೈಕ್ಯತೆಗೆ ಸಾಕ್ಷಿಯಾದರು.