ವಿಜಯಪುರ: ಬಬಲೇಶ್ವರ ಪಟ್ಟಣದಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ ಬೃಹತ್ ತಿರಂಗಾ ಯಾತ್ರೆ ನಡೆಯಿತು.
300 ಮೀ. ಉದ್ದದ ತ್ರಿವರ್ಣ ಧ್ವಜ ಮೆರವಣಿಗೆಗೆ ವಿಧಾನ ಪರಿಷತ ಕಾಂಗ್ರೆಸ್ ಶಾಸಕ ಸುನೀಲಗೌಡ ಪಾಟೀಲ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾವಿರಾರು ಜನರ ತ್ಯಾಗ, ಬಲಿದಾನದಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ಸ್ವಾತಂತ್ರ್ಯ ಹೋರಾಟಗಾರರು ಹಾಕಿಕೊಟದಟ ಮಾರ್ಗದಲ್ಲಿ ನಡೆದಾಗ ಸ್ವಾತಂತ್ರ್ಯಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.
ತಿರಂಗಾ ಯಾತ್ರೆ ಬಬಲೇಶ್ವರ ಪಟ್ಟಣದ ಶಾಂತವೀರ ಸರ್ಕಲ್ ನಿಂದ ಆರಂಭವಾದ ಈ ತಿರಂಗಾ ಯಾತ್ರೆಯು ಪ್ರಮುಖ ವೃತ್ತಗಳ ಮೂಲಕ ಬಜಾರ್ ಸರ್ಕಲ್ ವರೆಗೆ ನಡೆಯಿತು. 300 ಮೀ. ಉದ್ದದ ತ್ರಿವರ್ಣ ಧ್ವಜ ಹಿಡಿದ ಮಕ್ಕಳು, ವಿದ್ಯಾರ್ಥೊಗಳು, ಯಿವಕರು, ಮಹಿಳೆಯರು ಮತ್ತು ಮಹಿಳೆಯರು,ಮಾಜಿ ಸೈನಿಕರು, ಅಧಿಕಾರಿಗಳು ಪಾಲ್ಗೊಂಡು ಗಮನ ಸೆಳೆದರು. ಅಲ್ಲದೇ, ಇಡೀ ಪಟ್ಡಣಾದ್ಯಂದ ರಾಷ್ಟ್ರಧ್ವಜಗಳು ರಾರಾಜಿಸಿದ್ದು ಗಮನಾರ್ಹವಾಗಿತ್ತು.
ಈ ಸಂದರ್ಭದಲ್ಲಿ ಜಿ. ಪಂ. ಮಾಜಿ ಅಧ್ಯಕ್ಷ ವಿ. ಎಸ್. ಪಾಟೀಲ, ಸುಜಾತಾ ಸೋಮನಾಥ ಳ್ಳಿಮನಿ, ಬಬಲೇಶ್ವರ ಗ್ರಾಮಾಂತರ ವಿದ್ಯಾವರ್ಧಕ ಸಂಘದ ಪ್ರಧಾನ ಕಾರ್ಯದರ್ಶಿ ವಿ.ಎನ್. ಬಿರಾದಾರ, ರಾದಾರ್ ಗ್ರಾ. ಪಂ. ಮಾಜಿ ಅಧ್ಯಕ್ಷ ಬಿ. ಜಿ. ಬಿರಾದಾರ, ಬಬಲೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣಗೌಡ ಬಿರಾದಾರ, ಬಬಲೇಶ್ವರ ತಹಸೀಲ್ದಾರ ಸಂತೋಷ ಮ್ಯಾಗೇರಿ , ಮಹಿಳಾ ಬ್ಲಾಕ್ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ತಿಕೋಟಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿದ್ದು ಗೌಡನವರ, ಮುಖಂಡರಾದ ಹನುಮಂತ ಬಡಚಿ, ಆನಂದ ಬೂದಿಹಾಳ, ಮಲ್ಲಿಕಾರ್ಜುನ ಪರ್ಸನ್, ರಾಜಗುರು ಉಳ್ಳಾಗಡ್ಡಿ, ಸ್ಕೌಟ್ಸ್ ಆ್ಯಂಡ್ ಗೈಡ್ಸ್ ವಿದ್ಯಾರ್ಥಿಗಳು ಪಟ್ಟಣದ ಪ್ರಮುಖರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.