Raksha Bandhan: ಪತ್ರಕರ್ತರಿಗೆ ರಾಖಿ ಕಟ್ಟಿದ ಬ್ರಹ್ಮಕುಮಾರಿ ಈಶ್ವರಿಯ ವಿವಿ ಸಹೋದರಿಯರು

ವಿಜಯಪುರ: ಒಡಹುಟ್ಟಿದವರು ಮಾತ್ರ ಸಹೋದರರು ಅಲ್ಲ. ರಕ್ಷಣೆ ಕೊಡುವವರೂ ಎಲ್ಲರೂ ಸಹೋದರ ಬಾಂಧವರೇ ಎಂದು ಬಿ. ಕೆ. ಸರೋಜಿನಿ ಹೇಳಿದರು.

ವಿಜಯಪುರ ನಗರದ ಹುತಾತ್ಮ ವೃತ್ತದಲ್ಲಿ ಗುರುವಾರ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯ ವತಿಯಿಂದ ಪತ್ರಕರ್ತರಿಗೆ ಆಯೋಜಿಸಲಾದ ರಕ್ಷಾ ಬಂಧನ ಕಾರ್ಯಕ್ರಮದಲ್ಲಿ ಪತ್ರಕರ್ತರಿಗೆ ರಾಖಿ ಕಟ್ಟಿ ಅವರು ಮಾತನಾಡಿದರು.

ಮಾತು ಎಲ್ಲರ ಜೀವನ ಪರಿವರ್ತನೆ ಮಾಡುವಂತಿರಬೇಕು. ಸಮಯದ ಜಾಗೃತೆ ಇರಬೇಕು. ಸಮಯ ಹೋದರೆ ಮರಳಿ ಬರುವುದಿಲ್ಲ. ಪಂಚಭೂತವಾದ ಕೆಟ್ಟಗುಣಗಳನ್ನು ದಾನವಾಗಿ ಭಗವಂತನಿಗೆ ಕೊಡಬೇಕು. ರಕ್ಷಾ ಬಂಧನ ಕೇವಲ ಒಂದು ದಿನಕ್ಕೆ ಮಾತ್ರ ಸೀಮಿತವಾಗದೇ ಅನುದಿನವು ತಂಗಿಗೆ ರಕ್ಷಣೆ ನೀಡುವ ಮೂಲಕ ಅರ್ಥಪೂರ್ಣವಾಗಿ ಆಚರಿಸಬೇಕು ಎಂದು ಹೇಳಿದರು.

ಈ ಸಂದರ್ಭದಲ್ಲಿ ಸಂಗಿತಾ ಅವರು ಮಾತನಾಡಿ, ನಮ್ಮಲ್ಲಿ ಜಾತಿ ಧರ್ಮದ ಬೇದ ಭಾವವಿಲ್ಲ. ಎಲ್ಲರೂ ಇಲ್ಲಿಗೆ ಬರಬದುದಾಗಿದೆ. ಭೂಮಿಯ ಮೇಲಿನ ಸ್ವರ್ಗವೆಂದರೆ ಅದು ಮೌಂಟ ಅಬು ಎಂದು ಹೇಳಿದತಿ.

ಈ ಸಂದರ್ಭದಲ್ಲಿ ಶೃತಿ, ಸುವರ್ಣ, ಗಂಗಾಧರ, ಬಿ. ಕೆ. ಹಿರೇಮಠ ಸೇರಿದಂತೆ ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾಲಯದ ಕಾರ್ಯಕರ್ತರು, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ, ರಾಜ್ಯ ಸಮಿತಿ ನಾಮನಿರ್ದೇಶಿತ ಸಸಸ್ಯ ಕೆ. ಕೆ. ಕುಲಕರ್ಣಿ, ಖಜಾಂಚಿ ರಾಹುಲ ಆಪ್ಟೆ, ಕಲ್ಲಪ್ಪ ಶಿವಶರಣ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌