Children Balekundri: ಮಕ್ಕಳನ್ನು ಹಣ, ಅಂಕ ಗಳಿಸುವ ಯಂತ್ರವನ್ನಾಗಿ ಮಾಡಬೇಡಿ- ಹೃದ್ರೋಗ ಖ್ಯಾತ ವೈದ್ಯೆ ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ

ವಿಜಯಪುರ: ಪೋಷಕರು ತಮ್ಮ ಮಕ್ಕಳನ್ನು ಕೇವಲ ಹಣ ಮತ್ತು ಅಂಕ ಗಳಿಕೆಯ ಯಂತ್ರಗಳನ್ನಾಗಿ ಮಾಡಬೇಡಿ ಎಂದು ಬೆಂಗಳೂರಿನ ಜಯದೇವ ಹೃದ್ರೋಗ ಸಂಶೋಧನೆ ಸಂಸ್ಥೆಯ ಪ್ರೊಫೆಸರ್ ಎಮೆರಿಟಸ್ ವಿಜಯಲಕ್ಷ್ಮಿ ಬಾಳೆಕುಂದ್ರಿ ಕರೆ ನೀಡಿದ್ದಾರೆ.

ವಿಜಯಪುರ ನಗರದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ಎಸ್. ಬಿ. ಕಲಾ ಮತ್ತು ಕೆ. ಸಿ. ಪಿ. ವಿಜ್ಞಾನ ಮಹಾವಿದ್ಯಾಲಯದ ಅಮೃದ ಮಹೋತ್ಸವ ವರ್ಷಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಪಾಲಕರು ತಮ್ಮ ಮಕ್ಕಳನ್ನು ಮಾರ್ಕ್ಸ್, ಮೊನಿ ಪ್ರೊಡ್ಯೂಸಿಂಗ್ ಮಶೀನ್ ಗಳನ್ನಾಗಿ ಮಾಡಬೇಡಿ.  ಸ್ಪರ್ಧಾತ್ಮಕತೆ ಹೆಸರಿನಲ್ಲಿ ಮಕ್ಕಳ ಮೇಲೆ ಒತ್ತಡ ಹೇರುವ ಕೆಲಸ ಮಾಡಬಾರದು.  ಇದರಿಂದ ಮಕ್ಕಳು ಖಿನ್ನತೆಗೊಳಗಾಗುವ ಸಾಧ್ಯೆಗಳಿರುತ್ತವೆ.  ಅದರ ಪರಿಣಾಮಗಳೂ ಆತಂಕಕಾರಿಯಾಗಿರುತ್ತವೆ ಎಂದು ಅವರು ಎಚ್ಚರಿಕೆ ನೀಡಿದರು.

ಡಾ. ವಿಜಯಲಕ್ಷ್ಮಿ ಬಾಳೆಕುಂದ್ರಿ ಎಸ್ ಬಿ ಆರ್ಟ್ಸ್ ಆ್ಯಂಡ್ ಕೆಸಿಪಿ ಸಾಯಿನ್ಸ್ ಕಾಲೇಜ್ ಕಾರ್ಯಕ್ರಮದಲ್ಲಿ ಮಾತನಾಡಿದರು

ಹೆಣ್ಣು ಮತ್ತು ಗಂಡು ಮಕ್ಕಳೆಂಬ ಭೇದಭಾವವನ್ನೂ ಮಾಡಬೇಡಿ.  ಮಕ್ಕಳಿಗೆ ಶ್ರಮ ವಹಿಸುವುದನ್ನು ಕಲಿಸಬೇಕು.  ಇಂದ್ರೀಯ ನಿಗ್ರಹದ ಬಗ್ಗೆ ಹೇಳಿ ಕೊಡಬೇಕು.  ಸಹನೆ, ಶ್ರದ್ಧೆ ಮತ್ತು ಸಮಾಧಾನ ಸಂಗತಿಗಳತ್ತ ಅವರಿಗೆ ಅಭಿರುಚಿ ಬೆಳೆಸಬೇಕು ಎಂದು ವಿಜಯಲಕ್ಷ್ಮಿ ಬಾಳೆಕುಂದ್ರಿ ಹೇಳಿದರು.

ಇದೇ ವೇಳೆ ಶಾಲೆಯ ಶಿಕ್ಷಕರಿಗೆ ಸಲಹೆ ನೀಡಿದ ಅವರು, ಗುರುಗಳು ಮಕ್ಕಳು ಮತ್ತು ವಿದ್ಯಾರ್ಥಿಗಳಲ್ಲಿ ಶಿಸ್ತು, ಶಿಷ್ಢಾಚಾರ, ಧೈರ್ಯ, ಸ್ಥೈರ್ಯ, ತಾಳ್ಮೆ ಸಮಾಧಾನಯನ್ನು ಪ್ರೀತಿಯಿಂದ ಬೋಧಿಸಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಏಕಲವ್ಯನ ಏಕಾಗ್ರತೆ ಬೆಳೆಸಿಕೊಳ್ಳಬೇಕು.  ಮುಂದೆ ಗುರು ಇರಬೇಕು, ಹಿಂದೆ ಗುರಿ ಇರಬೇಕು.  ಸರಳತೆಯಿಂದ ಎಲ್ಲರೊಂದಿಗೆ ಬೆರೆಯುವುದನ್ನು ರೂಢಿಸಿಕೊಳ್ಳಬೇಕು.  ಜ್ಞಾನದ ಬೆಳಕು ಇದ್ದಲ್ಲಿ ಕತ್ತಲು ಮರೆಯಾಗುತ್ತದೆ.  ನಮಗೆ ಸಿಗುವುದರಲ್ಲಿ ಸಂತೃಪ್ತರಾಗು ಗುಣ ಬೆಳೆಸಿಕೊಳ್ಳಬೇಕು.  ತಂಬಾಕು ಮತ್ತು ಮದ್ಯ ವ್ಯಸನಿಯಾಗಬಾರದು.  ಕಣ್ಣು ಇರುವುದು ಕನಸು ಕಾಣಲು, ಕನಸು ನನಸು ಮಾಡಲು ಪ್ರಾಮಾಣಿಕವಾಗಿ ಮತ್ತು ನ್ಯಾಯಯುತ ಮಾರ್ಗದಲ್ಲಿ ಮುಂದುವರೆಯಬೇಕು ಎಂದು ಅವರು ಹೇಳಿದರು.

ಬಿ ಎಲ್ ಡಿ ಇ ಸಂಸ್ಥೆ ಮತ್ತು ಇದನ್ನು ಕಟ್ಟಿ ಬೆಳೆಸಿದ ಮಹನೀಯರಾದ ಸಂಗನಬಸವ ಶ್ರೀಗಳು, ವಚನ ಪಿತಾಮಹ ಡಾ. ಫ. ಗು. ಹಳಕಟ್ಟಿ, ಬಂಗಾರಮ್ಮ ಸಜ್ಜನ, ಬಿ. ಎಂ. ಪಾಟೀಲ, ಕನ್ನಾಳ ಚನಗೌಡ ಪಾಟೀಲ ಮತ್ತು ಹಾಲಿ ಅಧ್ಯಕ್ಷ ಎಂ. ಬಿ. ಪಾಟೀಲ ಅವರ ಸಮಾಜಮುಖಿ ಕಾರ್ಯಗಳನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದರು.  ಅಲ್ಲದೇ, ಈಗ ಬಿ ಎಲ್ ಡಿ ಇ ಸಂಸ್ಥೆಯಲ್ಲಿ 78 ವಿದ್ಯಾಸಂಸ್ಥೆಗಳಿರುವ ಈ ಸಂಖ್ಯೆ 108ಕ್ಕೆ ಹೆಚ್ಚುವಂತಾಗಲಿ ಎಂದು ಹೇಳಿದರು.

ಇದೇ ವೇಳೆ ವಿದ್ಯಾರ್ಥಿಗಳಿಗೆ ಆರೋಗ್ಯದ ಬಗ್ಗೆಯೂ ಸಲಹೆ ನೀಡಿದ ಅವರು, ಕೈಯಲ್ಲಿ 39 ಅಕ್ಯುಪ್ತಶರ್ ಪಾಯಿಂಟ್ಸ್ ಗಳಿವೆ.  ಈ ಪಾಯಿಂಟ್ಸ್ ಗಳಿಗೆ ಅಂದರೆ ದೇಹದ ಅಂಗಾಂಗಗಳಿಗೆ ಪ್ರಾಣವಾಯು ತಲುಪಿಸಲು ಚಪ್ಪಾಳೆ ತಟ್ಟಬೇಕು.  ಕೂಗಿದರೆ ಗಂಟಲು ಹಾಳಾಗುತ್ತೆ, ಚಪ್ಪಾಳೆ ತಟ್ಟುವುದರಿಂದ ಆರೋಗ್ಯ ವೃದ್ಧಿಸುತ್ತೆ.  ಒಳ್ಳೆಯ ಮನಸ್ಸಿನಿಂದ ಸತ್ಯ ಶುದ್ಧ ಕಾಯಕದಿಂದ ಕಟ್ಟಿರುವ ಸಂಸ್ಥೆ ಯಶಸ್ವಿಯಾಗುತ್ತದೆ.  ವಿದ್ಯೆಯಿಂದ ವಿನಯ, ವಿನಯದಿಂದ ಗೌರವ ಮತ್ತು ಸಂಪತ್ತು ತಾನಾಗಿಯೇ ಬರುತ್ತೆ.  ವಿದ್ಯಾದಾನ ಶ್ರೇಷ್ಠದಾನ.  ಸ್ಚಾತಂತ್ರ್ಯದ ಜೊತೆಗೆ ಸಾಧನೆ ಮಾಡಬೇಕು.  ಜ್ಞಾನರತ್ನವನ್ನು ತುಂಬಿಸಿಕೊಂಡಷ್ಟು ಬದುಕಿಗೆ ದಾರಿದೀಪವಾಗುತ್ತದೆ ಎಂದು ವಿಜಯಲಕ್ಷ್ಮಿ ಬಾಳೆಕುಂದ್ರಿ ಹೇಳಿದರು.

ಡಾ. ಆರ್. ಎಸ್. ಮುಧೋಳ

ಇದೇ ವೇಳೆ ಮಾತನಾಡಿದ ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಲಾಯಲದ ಉಪಕುಲಪತಿ ಡಾ. ಆರ್. ಎಸ್. ಮುಧೋಳ, ವಿಜಯಪುರದಲ್ಲಿ ಬಿ ಎಲ್ ಡಿ ಇ ಸಂಸ್ಥೆ ಸೇರಿದಂತೆ ಉತ್ತರ ಕರ್ನಾಟಕದಲ್ಲಿ ನಾನಾ ಶಿಕ್ಷಣ ಸಂಸ್ಥೆಗಳು ಇರದಿದ್ದರೆ ಈ ಪ್ರದೇಶ ಶೈಕ್ಷಣಿಕವಾಗಿ ಇಷ್ಟೋಂದು ಅಭಿವೃದ್ಧಿಯಾಗುತ್ತಿರಲಿಲ್ಲ.  ಬಿ ಎಲ್ ಡಿ ಇ ಸಂಸ್ಥೆ ತಾವೂ ಸೇರಿದಂತೆ ತಮ್ಮಂಥ ಬಹಳಷ್ಟು ಜನರಿಗೆ ವಿದ್ಯೆಯ ಮೂಲಕ ಬದುಕು ನೀಡಿದೆ ಎಂದು ಹೇಳಿದರು.

ಕೇಂದ್ರ ಸರಕಾರ ಈಗ ಜಾರಿಗೆ ತಂದಿರುವ ಹೊಸ ಶಿಕ್ಷಣ ನೀತಿ(ಎನ್ಇಪಿ) ಈಗ ಇರುವ ಶಿಕ್ಷಣ ವ್ಯವಸ್ಥೆಯನ್ನು ಬದಲಿಸಿ ಇಂದಿನ ಅಗತ್ಯಕ್ಕೆ ತಕ್ಕಂತೆ ಬದಲಾವಣೆ ತರುತ್ತಿದೆ ಎಂದು ಹೇಳಿದರು.

ಬಿ ಎಲ್ ಡಿ ಇ ಡೀಮ್ಡ್ ವಿಶ್ವವಿದ್ಯಾಲಯ, ಕೌಶಲ್ಯ ಆಧಾರಿತ ಹಲವಾರು ಕೋರ್ಸುಗಳನ್ನು ಆರಂಭಿಸಿದೆ.  ಆಸಕ್ತರು ಸೇರಬಹುದು.  ನಮ್ಮ ವಿವಿಯಲ್ಲಿ ಶೇ. 60 ರಷ್ಟು ವಿದ್ಯಾರ್ಥಿನಿಯರಿದ್ದಾರೆ.  ಈಗ ಎಲ್ಲ ಕಡೆ ಮಹಿಳೆಯರ ಸಬಲೀಕರಣ ನಡೆಯುತ್ತಿದೆ.  ಒಂದು ಹುಡುಗ ಬೇಕು ಎಂಬುದರ ಜೊತೆಗೆ ಈಗ ಒಂದು ಹುಡುಗಿ ಬೇಕು ಎಂಬುದು ಈಗಿನ ಅಗತ್ಯವಾಗಿದೆ.  ವಿವಿ ಯಿಂದ ಬಿ ಎಲ್ ಡಿ ಇ ಸಂಸ್ಥೆಯ ನಾನಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಸ್ಕಾಲರಶಿಪ್ ನೀಡುತ್ತೇವೆ.  ವಿದ್ಯಾರ್ಥಿಗಳ ಒತ್ತಡಕ್ಕೊಳಗಾಗದೇ ಸಂತಸಮಯ ವಾತಾವರಣದಲ್ಲಿ ಕಲಿಯುವಂತಾಗಬೇಕು.  ವಿದ್ಯಾರ್ಥಿ ಸ್ನೇಹಿ ಮತ್ತು ವಿದ್ಯಾರ್ಥಿಗಳಿಗೆ ಭವಿಷ್ಯಕ್ಕೆ ಪೂರಕವಾಗುವ ಶಿಕ್ಷಣ ನೀತಿ ಎನ್ಇಪಿ ಆಗಿದೆ ಎಂದು ಹೇಳಿದರು.

ಸ್ಕಾಲರಶಿಪ್ ಘೋಷಣೆ

ಇದೇ ವೇಳೆ ತಾವು ಕಲಿತ ಕೆಸಿಪಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿರುವ ವಿದ್ಯಾರ್ಥಿಗೆ ವೈಯಕ್ತಿಕವಾಗಿ ಚಿನ್ನದ ಪದಕ ನೀಡುವುದಾಗಿ ಡಾ. ಆರ್. ಎಸ್. ಮುಧೋಳ ಇದೇ ಸಂದರ್ಭದಲ್ಲಿ ಘೋಷಣೆ ಮಾಡಿದರು.

ಜ್ಞಾನಯೋಗಾಶ್ರಮದ ಬಸವಲಿಂಗ ಮಹಾಸ್ವಾಮೀಜಿ

ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಬಸವಾನಂದ ಮಹಾಸ್ವಾಮೀಜಿ ಮಾತನಾಡಿ, ಸಂಗನಬಸವ ಸ್ವಾಮೀಜಿ, ಫ. ಗು. ಹಳಕಟ್ಟಿ, ಬಂಗಾರಮ್ಮ ಸಜ್ನನ, ಬಿ. ಎಂ. ಪಾಟೀಲ ಅವರು ಈ ಸಂಸ್ಥೆಯನ್ನು‌ ಕಟ್ಟಿ ಈ ಭಾಗದಲ್ಲಿ ವಿದ್ಯೆ ನೀಡಿ ಜನರ ಜೀವನ ರೂಪಿಸಿದ್ದಾರೆ.  ಎಂ. ಬಿ. ಪಾಟೀಲ ಅವರು ನೀರಾವರಿ ಮೂಲಕ‌ ಬರದ ನಾಡು ಹಣೆಪಟ್ಟಿ ಅಳಿಸಿ ಹಾಕಿದ್ದಾರೆ ಎಂದು ಹೇಳಿದರು.

ಯುವಕರು ವ್ಯಸನದಿಂದ ಮುಕ್ತರಾಗಬೇಕು.  ಬಸವ ನಾಡಿನ ಯುವಕರು ತಮ್ಮ ಸಾಧನೆ, ನಡವಳಿಕೆ ಮೂಲಕ, ವ್ಯಸನಮುಕ್ತರಾಗಿ ಇತರ ಜಿಲ್ಲೆಗಳ ಯುವಕರಿಗೆ ಮಾದರಿಯಾಗಬೇಕು.  ದೇಶದಲ್ಲಿ ಮಹಿಳೆಯರಿಗೆ ಆದರಣೀಯ ಸ್ಥಾನವಿದೆ. ಎರಡು ಮನೆಯ ದೀಪ ಬೆಳಗಿಸುವ ಶಕ್ತಿಯಿದೆ.  ತವರು ಮನೆ, ಗಂಡನ‌ ಮನೆ ಬೆಳಗುವ ಶಕ್ತಿ ಮಹಿಳೆಯರಲ್ಲಿದೆ.  ದೇಶದ ಸಂಸ್ಕೃತಿಯನ್ನು ಬೆಳೆಸಿ ಉಳಿಸಿಕೊಂಡು ಬಂದಿರುವ ಶಕ್ತಿ ಮಹಿಳೆಯರಲ್ಲಿದೆ.  ವಿದ್ಯೆಯ ಜೊತೆ ಒಳ್ಳೆಯ ಗುಣ ಬೆಳೆಸಿಕೊಳ್ಳಬೇಕು ಎಂದು ಶ್ರೀ ಬಸವಲಿಂಗ ಸ್ವಾಮೀಜಿ ಹೇಳಿದರು.

ಈ ಸಂದರ್ಭದಲ್ಲಿ ವಿಜಯಲಕ್ಷ್ಮಿ ಬಾಳೆಕುಂದ್ರಿ, ಡಾ. ಆರ್. ಎಸ್. ಮುಧೋಳ ಮತ್ತು ಬಿ ಎಲ್ ಡಿ ಇ ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಡಾ. ಆರ್. ವಿ. ಕುಲಕರ್ಣಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಬಿ ಎಲ್ ಡಿ ಇ ಸಂಸ್ಥೆಯ ನಿರ್ದೇಶಕ ಎ. ಎಂ. ಪಾಟೀಲ, ಆಡಳಿತಾಧಿಕಾರಿಗಳಾದ ಬಿ. ಆರ್. ಪಾಟೀಲ, ಡಾ. ಕೆ. ಜಿ. ಪೂಜಾರಿ, ಎಸ್. ಎಚ್. ಲಗಳಿ(ಜಮಖಂಡಿ) ಉಪಸ್ಥಿತರಿದ್ದರು.

ಕೆಸಿಪಿ ಡಿಗ್ರಿ ಕಾಲೇಜಿನ ಪ್ರಾಚಾರ್ಯ ಡಾ. ಯು. ಎಸ್. ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು.  ಕೆಸಿಪಿ ಪಿಯು ಕಾಲೇಜಿನ ಪ್ರಾಚಾರ್ಯ ಸಿ. ಬಿ. ಪಾಟೀಲ ವಂದಿಸಿದರು.  ಡಾ. ಸುಜ್ಞಾನಿ ಬಿರಾದಾರ ಮತ್ತು ಡಾ. ಉಷಾದೇವಿ ಹಿರೇಮಠ ನಿರೂಪಿಸಿದರು.

Leave a Reply

ಹೊಸ ಪೋಸ್ಟ್‌