Bheema Flood: ಮಹಾಮಳೆ ಎಫೆಕ್ಟ್- ಉಕ್ಕಿ ಹರಿಯುತ್ತಿರುವ ಭೀಮಾ ನದಿ- ಉಮರಾಣಿ ಬ್ಯಾರೇಜ್ ಮುಳುಗಡೆ

ವಿಜಯಪುರ: ಮಹಾರಾಷ್ಟ್ರದಲ್ಲಿ ಸುರಿದ ಧಾರಾಕಾರ ಮಳೆಯಿಂದಾಗಿ ಅಲ್ಲಿನ ಜಲಾಷಯಗಳು ಭರ್ತಿಯಾಗುತ್ತಿದ್ದು, ಅಪಾರ ಪ್ರಮಾಣ ನೀರನ್ನು ಭೀಮಾ ನದಿಗೆ ಹರಿಬಿಡಲಾಗಿದೆ.

ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಉಜನಿ ಜಲಾಷಯದಿಂದ ಅಪಾರ ಪ್ರಮಾಮದಲ್ಲಿ ನೀರು ಬಿಡುಗಡೆ ಮಾಡಲಾಗಿದ್ದು, ಈ ನೀರು ಈಗ ಕರ್ನಾಟಕವನ್ನು ತಲುಪಿದೆ. ಅಷ್ಟೇ ಅಲ್ಲ, ಬಸವನಾಡು ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಉಮರಾಣಿ ಸೇರಿದಂತೆ ನಾನಾ ಬ್ಯಾರೇಜುಗಳು ಭೀಮಾ ನದಿ ಪ್ರವಾಹದಲ್ಲಿ ಮುಳುಗಡೆಯಾಗಿವೆ.

ಕರ್ನಾಟಕ ಮತ್ತು ಮಹಾರಾಷ್ಟ್ರದ ರಾಜ್ಯಗಳ ಗಡಿಯಲ್ಲಿ ಹರಿಯುವ ಭೀಮಾ ನದಿಗೆ ವಿಜಯಪುರ ಜಿಲ್ಲೆಯಲ್ಲಿ ಎಂಟು ಕಡೆಗಳಲ್ಲಿ ಬ್ಯಾರೇಜ್ ನಿರ್ಮಿಸಲಾಗಿದ್ದು, ತಲಾ ನಾಲ್ಕು ಬ್ಯಾರೇಜುಗಳನ್ನು ಕರ್ನಾಟಕ ಮತ್ತು ಮಹಾರಾಷ್ಟ್ರಗಳು ನಿರ್ಮಿಸಿವೆ.  ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ದಸೂರ ಗ್ರಾಮದ ಮೂಲಕ ಭೀಮಾ ನದಿ ಕರ್ನಾಟಕವನ್ನು ಪ್ರವೇಶ ಮಾಡುತ್ತದೆ.  ಈಗ ಭೀಮಾ ನದಿ ಉಕ್ಕಿ ಹರಿಯುತ್ತಿದ್ದು, ವಿಜಯಪುರ ಜಿಲ್ಲಾಡಳಿತವೂ ಪ್ರವಾಹದ ಬಗ್ಗೆ ಮುನ್ನೆಚ್ಚರಿಕೆ ನೀಡಿದೆ.

ವಿಜಯಪುರ ಜಿಲ್ಲೆಯ ಚಡಚಣ ಮತ್ತು ಇಂಡಿ ತಾಲೂಕಿನ ನಾಲ್ಕು ಕಡೆಗಳಲ್ಲಿ ಮಹಾರಾಷ್ಟ್ರದ ಸೋಲಾಪುರ ಜಿಲ್ಲೆಯ ಸಮಾನಾಂತರ ಗಡಿಯಲ್ಲಿ ಭೀಮಾ ನದಿಗೆ ಒಟ್ಟು ಎಂಟು ಕಡೆಗಳಲ್ಲಿ ಬ್ಯಾರೇಜ್ ನಿರ್ಮಿಸಲಾಗಿದೆ.

 

ಗೋವಿಂದಪುರ-ಭಂಡಾರಕವಟೆ, ಉಮರಾಣಿ-ಲವಂಗಿ, ಔಜ-ಶಿರನಾಳ, ಚಿಂಚಪೂರ-ಧೂಳಖೇಡ, ಚಣೆಗಾಂವ-ಬರೂರ,  ಹಿಂಗಣಿ-ಆಳಗಿ, ಖಾನಾಪುರ-ಪಡನೂರ, ಹಿಳ್ಳಿ-ಗುಬ್ಬೇವಾಡ ಬಳಿ ಈ ಬ್ಯಾರೇಜುಗಳನ್ನು ನಿರ್ಮಿಸಲಾಗಿದೆ.

ಇವುಗಳಲ್ಲಿ ಗೋವಿಂದಪುರ- ಭಂಡಾರಕವಟೆ, ಉಮರಾಣಿ ಲವಂಗಿ, ಚಣೆಗಾಂವ-ಬರೂರ ಮತ್ತು ಹಿಂಗಣಿ-ಅಳ್ಳಗಿ ಬ್ಯಾರೇಜುಗಳು ಕರ್ನಾಟಕ ವ್ಯಾಪ್ತಿಗೆ ಸೇರಿವೆ.  ಉಳಿದ ನಾಲ್ಕು ಬ್ಯಾರೇಜುಗಳಾದ ಔಜ-ಶಿರನಾಳ, ಚಿಂಚಪೂರ-ಧೂಳಖೇಡ, ಖಾನಾಪೂರ-ಪಡನೂರ ಮತ್ತು ಹಿಳ್ಳಿ-ಗುಬ್ಬೇವಾಡ ಬ್ಯಾರೇಜುಗಳನ್ನು ಮಹಾರಾಷ್ಟ್ರ ನಿರ್ಮಿಸಿವೆ.

ಈಗ ಗೋವಿಂದಪುರ- ಭಂಡಾರಕವಟೆ, ಉಮರಾಣಿ-ಲವಂಗಿ ಬ್ಚಾರೇಜುಗಳು ಭೀಮಾ ನದಿ ಪ್ರವಾಹದಲ್ಲಿ ಮುಳುಗಿದ್ದು, ಇನ್ನುಳಿದ ಬ್ಚಾರೇಜುಗಳತ್ತ ನೀರು ಮುನ್ನಗ್ಗುತ್ತಿದೆ.

ವಿಜಯಪುರ ಜಿಲ್ಲಾಡಳಿತ ಮುುನ್ನೆಚ್ಚರಿಕೆ

ಭೀಮಾ ನದಿಗೆ ಮಹಾರಾಷ್ಟ್ರ ಸರಕಾರ ಅಪಾರ ಪ್ರಮಾಣದಲ್ಲಿ ನೀರು ಬಿಡುಗಡೆ ಮಾಡಿರುವ ಹಿನ್ನೆಲೆಯಲ್ಲಿ ವಿಜಯಪುರ ಜಿಲ್ಲಾಡಳಿತ ಈಗಾಗಲೇ ಸಕಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದ್ದು, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ನದಿ ತೀರಕ್ಕೆ ತೆರಳದಂತೆ ಗ್ರಾಮಸ್ಥರು ಮತ್ತು ಸಾರ್ವಜನಿಕರಿಗೆ ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.

ಭೀಮಾ ತೀರದ ಉಮರಾಣಿ ಗ್ರಾಮದಲ್ಲಿ ವಿಜಯಪುರ ಜಿಲ್ಲಾಡಳಿತ ಡಂಗುರ ಸಾರುವ ಮೂಲಕ ಪ್ರವಾಹದ ಮುನ್ನೆಚ್ಚರಿಕೆ ನೀಡುತ್ತಿರುವುದು

ಅಷ್ಟೇ ಅಲ್ಲ, ವಿಜಯಪುರ ಜಿ. ಪಂ. ಮತ್ತು ಪೊಲೀಸ್ ಇಲಾಖೆಗಳೂ ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಂಡಿದ್ದು, ಭೀಮಾ ನದಿ ತೀರದ ಗ್ರಾಮಗಳಲ್ಲಿ ಡಂಗುರ ಬಾರಿಸುವ ಮೂಲಕ ಪ್ರವಾಹದ ಮುನ್ನೆಚ್ಚರಿಕೆಯನ್ನು ನೀಿಡಿವೆ.

ಈ ವರ್ಷ ಇದೇ ಮೊದಲ ಬಾರಿಗೆ ಭೀಮಾ ನದಿ ಉಕ್ಕಿ ಹರಿಯುತ್ತಿದ್ದು, ಭೀಮಾ ತೀರದ ಗ್ರಾಮಸ್ಥರಲ್ಲಿ ಸಂತಸ ಮೂಡಿಸಿದೆ.  ನದಿ ಉಕ್ಕಿ ಹರಿಯುತತಿರುವುದರಿಂದ ನೀರಾವರಿಗೆ ಅನುಕೂಲವಾಗಲಿದೆ ಎಂದು ರೈತರು ಸಂತಸ ವ್ಯಕ್ತಪಡಿಸಿದ್ದಾರೆ.

Leave a Reply

ಹೊಸ ಪೋಸ್ಟ್‌