Tiranga Umesh Karajol: ಕನ್ನೂರಿನಲ್ಲಿ ಗ್ರಾಮಸ್ಥರೊಂದಿಗೆ ಹರ್ ಘರ್ ತಿರಂಗಾ ಕಾರ್ಯಕ್ರಮದಲ್ಲಿ ಪಾಲ್ಗೋಂಡ ಬಿಜೆಪಿ ಯುವ ಧುರೀಣ ಉಮೇಶ ಕಾರಜೋಳ

ವಿಜಯಪುರ: ಸ್ವಾತಂತ್ರ ಅಮೃತ ಮಹೋತ್ಸವದ ಅಂಗವಾಗಿ ವಿಜಯಪುರ ಜಿಲ್ಲೆಯ ಕನ್ನೂರಿನಲ್ಲಿ ನಡೆದ ಹರ ಘರ್ ತಿರಂಗಾ ಕಾರ್ಯಕ್ರಮದಲ್ಲಿ ಬಿಜೆಪಿ ಯುವ ಧುರೀಣ ಉಮೇಶ ಕಾರಜೋಳ ಪಾಲ್ಗೋಂಡರು.

ಬಿಜೆಪಿ ಜಿಲ್ಲಾ ಉಪಾಧ್ಯಕ್ಷರೂ ಆಗಿರುವ ಅವರು, ಕನ್ನೂರಿನಲ್ಲಿ ಕಲ್ಲಪ್ಪ ಬೆಳ್ಳುಂಡಗಿ ಅವರ ಕುಟುಂಬ ಸದಸ್ಯರು ಮತ್ತು ಗ್ರಾಮಸ್ಥರೊಂದಿಗೆ ಪ್ರತ್ಯೇಕವಾಗಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೋಂಡರು.

ಕನ್ನೂರ ಗ್ರಾಮದಲ್ಲಿ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಬಿಜೆಪಿ ಯುವ ಮುಖಂಡ ಉಮೇಶ ಕಾರಜೋಳ ಪಾಲ್ಗೋಂಡರು

ಬಳಿಕ ಮಾತನಾಡಿದ ಅವರು, ರಾಷ್ಟ್ರಧ್ವಜ ನಮ್ಮ ದೇಶಾಭಿಮಾನದ ಪ್ರತೀಕ,  ನಮ್ಮ ದೇಶದ ಗೌರವದ ಸಂಕೇತ.  ಆಜಾದಿ ಕಾ ಅಮೃತ ಮಹೋತ್ಸವ ಆಚರಣೆಯ ಸಂದರ್ಭದಲ್ಲಿ ಮನೆ-ಮನೆಯಲ್ಲಿಯೂ ರಾಷ್ಟ್ರಧ್ವಜ ರಾರಾಜಿಸಬೇಕು ಎಂಬ ಧ್ಯೇಯದೊಂದಿಗೆ ಹರ್ ಘರ್ ತಿರಂಗಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.  ಈ ಕಾರ್ಯಕ್ರಮಕ್ಕೆ ಎಲ್ಲ ಭಾರತೀಯರು ಉತ್ಸಾಹದಿಂದ ಕೈ ಜೋಡಿಸುತ್ತಿದ್ದಾರೆ,  ಪ್ರತಿಯೊಬ್ಬರ ಮನೆಗಳ ಮೇಲೆ ರಾಷ್ಚ್ರಧ್ವಜ ರಾರಾಜಿಸುತ್ತಿದೆ ಎಂದು ಹೇಳಿದರು.

 

ನಾಗಠಾಣ ಮತಕ್ಷೇತ್ರದಲ್ಲಿ 20 ಸಾವಿರಕ್ಕೂ ಹೆಚ್ಚು ರಾಷ್ಟ್ರದ್ವಜಗಳನ್ನು ವಿತರಣೆ ಮಾಡಲಾಗಿದೆ.  ವಿಜಯಪುರ ನಗರ ವ್ಯಾಪ್ತಿಯಲ್ಲಿ ಬರುವ ನಾಗಠಾಣ ಮತಕ್ಷೇತ್ರದ ಏಳು ವಾರ್ಡುಗಳಲ್ಲಿ ಒಂಬ್ತತು ಸಾವಿರಕ್ಕೂ ಹೆಚ್ಚು ತ್ರಿವರ್ಣ ಧ್ವಜಗಳನ್ನು ವಿತರಣೆ ಮಾಡಲಾಗಿದೆ.  ರಾಷ್ಟ್ರ ಧ್ವಜಾರೋಹಣ ಅಭಿಮಾನದ ಸಂಕೇತವಾಗಿದೆ.  ಸ್ವಾತಂತ್ರ್ಯಕ್ಕಾಗಿ ತ್ಯಾಗ ಮತ್ತು ಬಲಿದಾನ ಮಾಡಿದ ಮಹನೀಯರಿಗೆ ಸಲ್ಲಿಸುವ ಗೌರವ ಇದಾಗಿದೆ ಎಂದು ಅವರು ಹೇಳಿದರು.

ಸ್ವಾತಂತ್ರ್ಯಕ್ಕಾಗಿ ಭಗತಸಿಂಗ್, ವೀರ ಸಾವರಕರ, ಚಂದ್ರಶೇಖರ ಆಜಾದ್ ಸೇರಿದಂತೆ ಅನೇಕರು ತಮ್ಮ ಪ್ರಾಣವನ್ನೇ ಅರ್ಪಿಸಿದ್ದಾರೆ.  ಈ ಎಲ್ಲ ಸ್ವಾತಂತ್ರ್ಯ ಯೋಧರ ಜೀವನ ನಮಗೆ ನಿತ್ಯ ಸ್ಪೂರ್ತಿಯಾಗಬೇಕು.  ಅವರನ್ನು ನಾವು ಪ್ರತಿದಿನ ಸ್ಮರಿಸಬೇಕು.  ಬೆಳಕು ತೋರಿದ ಈ ಎಲ್ಲ ಯೋಧರಿಗೆ ನಾವು ಸದಾ ಚಿರಋಣಿಯಾಗಿರಬೇಕು ಎಂದು ಉಮೇಶ ಕಾರಜೋಳ ಹೇಳಿದರು.

Leave a Reply

ಹೊಸ ಪೋಸ್ಟ್‌