Tiranga Campaign: ಹರ್ ಘರ್ ತಿರಂಗಾ- ಗಮನ ಸೆಳೆದ ಶಾಂತಿ ನಿಕೇತನ ಶಾಲೆಯ ಮಕ್ಕಳ ತ್ರಿವರ್ಣ ಧ್ವಜ ಯಾತ್ರೆ

ವಿಜಯಪುರ: ದೇಶಾದ್ಯಂತ ಈಗ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಮತ್ತು ಸಡಗರ ಮನೆ ಮಾಡಿದೆ.  ಪ್ರತಿ ಮನದಲ್ಲಿಯೂ ದೇಶಪ್ರೇಮ ತುಂಬಿ ತುಳುಕುತ್ತಿದ್ದು, ಎಲ್ಲರೂ ತ್ರಿವರ್ಣ ಧ್ವಜದತ್ತ ಗಮನ ಹರಿಸಿದ್ದಾರೆ.  ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಬಸವ ನಾಡು ವಿಜಯಪುರ ನಗರದಲ್ಲಿ ಶಾಂತಿ ನಿಕೇತನ ಶಾಲೆಯ ವಿದ್ಯಾರ್ಥಿಗಳು ನಡೆಸಿದ ತಿರಂಗಾ ಯಾತ್ರೆ ಗಮನ ಸೆಳೆಯಿತು.

ವಿಜಯಪುರ ಬಿಜೆಪಿ ಸಂಸದ ರಮೇಶ ಜಿಗಜಿಣಗಿ ಚಾಲನೆ ನೀಡಿದ ಈ ತಿರಂಗಾ ಯಾತ್ರೆಯಲ್ಲಿ ಪಾಲ್ಗೋಂಡ ಸಾವಿರಾರು ವಿದ್ಯಾರ್ಥಿಗಳು ವಂದೇ ಮಾತರಂ.. ಭಾರತ ಮಾತಾ ಕಿ ಜೈ ಘೋಷಣೆ ಹಾಕುತ್ತ ಕೈಯಲ್ಲಿ ರಾಷ್ಟ್ರಧ್ವಜ ಹಿಡಿದು ಮೆರವಣಿಗೆಯಲ್ಲಿ ಪಾಲ್ಗೋಂಡರು.

ವಿಜಯಪುರ ನಗರದ ಶಾಂತಿ ನಿಕೇತಸ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಪಾಲ್ಗೋಂಡ ಹರ್ ಘರ್ ತಿರಂಗಾ ಯಾತ್ರೆ

ವಿಜಯಪುರ ನಗರದ ಗ್ರಾಮ ದೇವತೆ ಶ್ರೀ ಸಿದ್ದೇಶ್ವರ ದೇವಸ್ಥಾನದಿಂದ ಪ್ರಾರಂಭದ ಈ ಯಾತ್ರೆ ಗಾಂಧಿಚೌಕ, ಅಜಾದ ರಸ್ತೆ, ಸರಾಫ ಬಜಾರ ಮಾರ್ಗವಾಗಿ ರಾಮಮಂದಿರ, ಅಮೀರ ಟಾಕೀಜ, ಯಳಮೇಲಿ ಕಾಂಪ್ಲೇಕ್ಸ, ಬಿಎಲ್‍ಡಿಇ  ವೈದ್ಯಕೀಯ ಕಾಲೇಜು, ಆದರ್ಶ ನಗರ ಮೂಲಕ ಶಾಂತಿ ನಿಕೇತನ ಶಿಕ್ಷಣ ಸಂಸ್ಥೆಯವರೆಗೆ ನಡೆಯಿತು.

ಗಾಂಧಿ ಚೌಕಿನಲ್ಲಿ ಮುಖಂಡರು ಮಹಾತ್ಮಾ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದರು.  ಶಾಲೆಯ ವಿದ್ಯಾರ್ಥಿಗಳು ಭರತನಾಟ್ಯ ಮಾಡಿ ಗಮನ ಸೆಳೆದರು.

ನಾನಾ ವೇಷಗಳನ್ನು ಧರಿಸಿದ್ದ ವಿದ್ಯಾರ್ಥಿಗಳು ಗಮನ ಸೆಳೆದರು.  ರೈತರು, ರೈತಮಹಿಳೆ, ರಾಮ, ಸೀತೆ,  ಲಕ್ಷ್ಮಣ, ಶಿವಾಜಿ ಮಹಾರಾಜ, ವಣಕೆ ಒಬವ್ವ, ಕಿತ್ತೂರು ರಾಣಿ ಚನ್ನಮ್ಮ, ವೀರ ಸಾವರಕರ, ಭಗತಸಿಂಗ್, ಹೆಡಗೆವಾರ, ವೈದ್ಯ, ಶೂಶ್ರುಕಿ, ಆಶಾಕಾರ್ಯಕರ್ತೆ ಮುಂತಾದ ಛದ್ಮವೇಷಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.

ವಿಶ್ವದ ಅತ್ಯಂತ ಬೃಹತ್ ಕರೊನಾ ಲಸಿಕಾ ಅಭಿಯಾನದ ಸ್ಥಬ್ದ ಚಿತ್ರ ಹಾಗೂ ರೈತರ ಕಲ್ಯಾಣ ಕುರಿತ ಸ್ಥಬ್ದ ಚಿತ್ರ, ರಾಮ ಮಂದಿರ, ಸರ್ಜಿಕಲ್ ಸ್ಟ್ರೈಕ್ ಮುಂತಾದ ಸ್ಥಬ್ದ ಚಿತ್ರಗಳು ಜನರ ಮನಸ್ಸನ್ನು ಸೆಳೆದವು.  ವಿದ್ಯಾರ್ಥಿಗಳು ದೇಶ ಪ್ರೇಮದ ಜೈಘೋಷಗಳನ್ನು ಹಾಕಿದರು.  ದೇಶ ಪ್ರೇಮದ ಹಾಡಿಗೆ ಹೆಜ್ಜೆಯನ್ನು ಹಾಕಿದರು.

ಈ ಸಂದರ್ಭದಲ್ಲಿ ಮಾತಾಡಿದ ಶಾಂತಿ ನಿಕೇತನ ಸಂಸ್ಥೆಯ ಅಧ್ಯಕ್ಷ ಮತ್ತು ಬಿಜೆಪಿ ಜಿಲ್ಲಾ ವಕ್ತಾರ ಡಾ. ಸುರೇಶ ಬಿರಾದಾರ, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಆಶಯದಂತೆ ಹರ್ ಘರ್ ತಿರಂಗಾ ಅಭಿಯಾನವನ್ನು ಆಚರಣೆ ಮಾಡಲಾಗುತ್ತಿದೆ.  ಹಲವಾರು ಜನರ ತ್ಯಾಗ ಮತ್ತು ಬಲಿದಾನದಿಂದಾಗಿ ನಮಗೆ ಸ್ವಾತಂತ್ರ್ಯ ಸಿಕ್ಕಿದೆ.  ಅವರ ಕೊಡುಗೆಯನ್ನು ಸ್ಮರಿಸುವ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾಜಿ ಸಚಿವರಾದ ಅಪ್ಪು ಪಟ್ಟಣಶೆಟ್ಟಿ, ಯೋಗೆಶ್ವರಿ ಮಾತಾಜಿ ಬುರಣಾಪೂರ, ಆರ್. ಎಸ್. ಪಾಟೀಲ ಕುಚಬಾಳ, ಪ್ರಕಾಶ ಅಕ್ಕಲಕೊಟ,  ಚಂದ್ರಶೇಖರ ಕವಟಗಿ, ಗೋಪಾಲ ಘಟಕಾಂಬಳೆ,  ಭಿಮಾಶಂಕರ ಹದನೂರ, ಶ್ರೀಮತಿ ಶೀಲಾ ಬಿರಾದಾರ,  ಶರತ ಬಿರಾದಾರ,  ಭರತ ಬಿರಾದಾರ, ಶ್ರೀಮತಿ ದಿವ್ಯಾ ಬಿರಾದಾರ ಮುಂತಾದವರು ಉಪಸ್ಥಿತರಿದ್ದರು.

ರಾಷ್ಟ್ರಗೀತೆ ಹಾಡುವ ಮೂಲಕ ಹರ್ ಘರ್ ತಿರಂಗಾ ಯಾತ್ರೆಯ ಮುಕ್ತಾಯವಾಯಿತು.

 

Leave a Reply

ಹೊಸ ಪೋಸ್ಟ್‌