Har Ghar Tiranga: ಮನೆ ಮನಗಳಲ್ಲಿ ರಾರಾಜಿಸುತ್ತಿವೆ ತ್ರಿವರ್ಣ ಧ್ವಜಗಳು- ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂಭ್ರಮ ಬಲು ಜೋರು

ವಿಜಯಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಈ ಬಾರಿ ಮೂರು ದಿನಗಳ ಕಾಲ ಮನೆಮನೆಗಳಲ್ಲಿ ತ್ರಿವರ್ಣ ಧ್ವಜ ಹಾರಿಸಲು ಕೇಂದ್ರ ಸರಕಾರ ಅವಕಾಶ ಕಲ್ಪಿಸಿದೆ.  ಅಲ್ಲದೇ, ಈ ಅಮೃತ ಮಹೋತ್ಸವ ಸದಾಕಾಲ ನೆನಪಿನಲ್ಲಿ ಉಳಿಯುವಂತಾಗಲು ನಾನಾ ಕಾರ್ಯಕ್ರಮಗಳನ್ನೂ ಆಯೋಜಿದೆ.

ಆದರ್ಶ ನಗರದಲ್ಲಿ ಮನೆಮನೆಯಲ್ಲಿ ತ್ರಿವರ್ಣ ಧ್ವಜ ಕಾರ್ಯಕ್ರಮ

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿಯೂ ಮನೆಮನೆಗಳಲ್ಲಿ ತ್ರಿವರ್ಣ ಧ್ವಜಗಳು ರಾರಾಜಿಸುತ್ತಿವೆ.  ವಿಜಯಪುರ ನಗರದಲ್ಲಿಯೂ ಎಲ್ಲ ಕಡೆಗಳಲ್ಲಿ ಸಾರ್ವಜನಿಕರೂ ಕೂಡ ತಂತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸುವ ಮೂಲಕ ದೇಶಭಕ್ತಿಗೆ ಮೆರಗು ನೀಡಿದ್ದಾರೆ.  ಮೂರು ದಿನಗಳ ಕಾಲ ಸತತ ಮನೆಯ ಮೇಲೆ ರಾಷ್ಟ್ರಧ್ವಜ ಹಾರಿಸಲು ಅವಕಾಶ ಕಲ್ಪಿಸಲಾಗಿದ್ದು, ಆ. 15ರಂದು ಸೂರ್ಯಾಸ್ತದೊಳಗೆ ರಾಷ್ಟ್ರಧ್ವಜವನ್ನು ಅವರೋಹಣ ಅಂದರೆ ಕೆಳಗೆ ಇಳಿಸಬೇಕು ಎಂದು ಸೂಚನೆ ನೀಡಲಾಗಿದೆ.

ಸರಕಾರಿ, ಖಾಸಗಿ ಕಚೇರಿಗಳಲ್ಲಿಯೂ ಹಾರಾಡುತ್ತಿರುವ ಧ್ವಜಗಳು

ಮೂರು ದಿನಗಳ ಕಾಲ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಸರಕಾರಿ ಮತ್ತು ಖಾಸಗಿ ಕಚೇರಿಗಳು, ಶಾಲೆ, ಕಾಲೇಜುಗಳಲ್ಲಿಯೂ ತ್ರಿವರ್ಣ ಧ್ವಜ ಹಾರಿಸಲು ಅವಕಾಶ ಕಲ್ಪಿಸಲಾಗಿದೆ.

ಈ ಈ ಹಿನ್ನೆಲೆಯಲ್ಲಿ ಬೆಳಿಗ್ಗೆಯೇ ನಾನಾ ಸರಕಾರಿ ಮತ್ತು ಖಾಸಗಿ ಶಾಲೆ, ಕಾಲೇಜುಗಳು, ಕಚೇರಿಗಳ ಮೇಲೆ ಆಯಾ ಸಂಘ, ಸಂಸ್ಥೆ, ಕಚೇರಿಗಳ ಮುಖ್ಯಸ್ಥರು ಧ್ವಜಾರೋಹಣ ಮಾಡಿ ದೇಶಭಕ್ತಿಗೆ ಸಾಕ್ಷಿಯಾಗಿದ್ದಾರೆ.

ವಿಜಯಪುರ ನಗರದ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನೆ ಕೇಂದ್ರದಲ್ಲಿ ಮನೆಮನೆಯಲ್ಲಿ ತ್ರಿವರ್ಣ ಧ್ವಜ ಕಾರ್ಯಕ್ರಮ

ಬಿ ಎಲ್ ಡಿ ಇ ಸಂಸ್ಥೆಯ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನೆ ಕೇಂದ್ರದಲ್ಲಿಯೂ ಬೆಳಿಗ್ಗೆ ಧ್ವಜಾರೋಹಣ ಮಾಡಿದ ಅಲ್ಲಿನ ಸಿಬ್ಬಂದಿ ರಾಷ್ಟ್ರಗೀತೆ ಹಾಡಿ ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಪಾಲ್ಗೋಂಡರು.

ಸರಕಾರಿ ಮತ್ತು ಖಾಸಗಿ ಶಾಲೆ, ಕಾಲೇಜುಗಳು ಮತ್ತು ಕಚೇರಿಗಳ ಕಟ್ಟಡಗಳ ಮೇಲೆ ಮೂರು ದಿನಗಳ ಕಾಲ ರಾಷ್ಟ್ರಧ್ವಜ ಹಾರಿಸಲು ಅವಕಾಶ ಕಲ್ಪಿಸಲಾಗಿದೆ.  ಆದರೆ, ಪ್ರತಿ ದಿನ ಸಂಜೆ ಸೂರ್ಯಾಸ್ತಕ್ಕೂ ಮುಂಚೆ ಈ ಧ್ಜವನ್ನು ಅವರೋಹಣ ಮಾಡಿ ಅಂದರೆ ಕೆಳಗಿಳಿಸಿ ಮತ್ತೆ ಮರುದಿನ ಬೆಳಿಗ್ಗೆ ಧ್ವಜಾರೋಹಣ ಮಾಡಬೇಕಿದೆ.  ಇಲ್ಲಿ ಇನ್ನೋಂದು ಗಮನಿಸಬೇಕಾದ ಅಂಶವೇನೆಂದರೆ ಧ್ವಜದೊಳಗೆ ಯಾವುದೇ ಹೂವು ಮತ್ತೀತರ ವಸ್ತುಗಳನ್ನು ಹಾಕಬಾರದು ಎಂದು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ.

ಆ. 15 ರಂದು ಸ್ವಾತಂತ್ರ್ಯ ಅಮೃತ ಮಹೋತ್ಸವದ ದಿನ ಸೂರ್ಯಾಸ್ತದವರೆಗೂ ಎಲ್ಲ ಮನೆಮನೆಗಳಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲು ಅವಕಾಶ ನೀಡಲಾಗಿದ್ದು, ಅಂದು ಸೂರ್ಯಾಸ್ತದೊಳಗೆ ಧ್ಜಜವನ್ನು ಅವರೋಹಣ ಅಂದರೆ ಕೆಳಗಿಳಿಸಿ ಸುರಕ್ಷಿತವಾಗಿ ಗೌರವಪೂರ್ವಕವಾಗಿ ರಾಷ್ಟ್ರಧ್ವಜವನ್ನು ಸಂರಕ್ಷಿಸಿ ಇಡಬೇಕಿದೆ.

Leave a Reply

ಹೊಸ ಪೋಸ್ಟ್‌