ವಿಜಯಪುರ: ಎಸ್ಪಿ ಎಚ್. ಡಿ. ಆನಂದಕುಮಾರ ಅವರು ನಗರದಲ್ಲಿರುವ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್ ಜಿಲ್ಲಾ ಕ್ರೀಡಾಂಗಣಕ್ಕೆ ಭೇಟಿ ನೀಡಿ, ಸ್ವಾತಂತ್ರ್ಯೋತ್ಸವ ಹಿನ್ನೆಲೆಯ್ಲಿ ಪಥ ಸಂಚಲನದ ಪೂರ್ವ ತಯಾರಿ ವೀಕ್ಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಅವರು, ಸ್ವಾತಂತ್ರೊö್ಯÃತ್ಸವ ದಿನಾಚರಣೆಯಂದು ಪಥ ಸಂಚಲನದಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಮತ್ತು ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಿಸ್ತಿನಿಂದ ಭಾಗಿಯಾಗಬೇಕು ಎಂದು ಸಲಹೆ ನೀಡಿದರು.
ಪಥ ಸಂಚಲನ ಪೂರ್ವ ವೀಕ್ಷಣೆ ಸಂದರ್ಭದಲ್ಲಿ ಮಾತನಾಡಿದ ಎಸ್ಪಿ ಅವರು, ನಾನು ವಿದ್ಯಾರ್ಥಿಯಾಗಿದ್ದಾಗ ನಿಮ್ಮಂತೆಯೇ ಫರೇಡ್‌ನಲ್ಲಿ ಭಾಗಿಯಾಗುತ್ತಿದ್ದೆ. ಬೇರೆ ಬೇರೆ ದಿನಾಚರಣೆಗಳ ಸಂದರ್ಭದಲ್ಲಿ ಸಹ ಶಿಸ್ತಿನಿಂದ ಭಾಗಿಯಾಗುತ್ತಿದ್ದ ಐಎಎಸ್, ಐಪಿಎಸ್ ಅಧಿಕಾರಿಗಳನ್ನು ನೋಡಿ ನಾನು ಹೀಗೆ ಗೌರವ ವಂದನೆ ಸ್ವೀಕರಿಸುವಂತಾಗಬೇಕು ಎಂದು ಗುರಿ ಹೊಂದಿದ್ದೆ. ಹಿರಿಯ ಅಧಿಕಾರಿಗಳನ್ನು ನೋಡುತ್ತ ನೋಡುತ್ತ ಪ್ರೇರಣೆಗೊಳಗಾದೆ ಎಂದು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟರು.
ವಿದ್ಯಾರ್ಥಿಗಳೊಂದಿಗೆ ಆಪ್ತವಾಗಿ ಬೆರೆತ ಎಸ್ಪಿ
ಇದೆ ವೇಳೆ ಎಚ್. ಡಿ. ಆನಂದಕುಮಾರ, ಪಥ ಸಂಚಲನದ ಪೂರ್ವ ತಯಾರಿಯಲ್ಲಿದ್ದ ವಿದ್ಯಾರ್ಥಿಗಳ ಬಳಿಗೆ ತೆರಳಿ ಅವರೊಂದಿಗೆ ಆಪ್ತವಾಗಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಉತ್ತಮವಾಗಿ ಅಭ್ಯಾಸ ಮಾಡಲು ಸಲಹೆ ಮಾಡಿದರು. ಈಗಿನಿಂದಲೇ ಒಳ್ಳೆಯ ಆಸೆ-ಆಕ್ಷಾಂಕ್ಷೆಗಳನ್ನು ಬೆಳೆಸಿಕೊಂಡು ಗುರಿ ತಲುಪಬೇಕು. ಒಳ್ಳೆಯ ನಾಗರಿಕರಾಗಿ ಬಾಳಬೇಕು. ತಪ್ಪು ಮಾಡಬಾರದು. ಒಳ್ಳೆಯ ವ್ಯಕ್ತಿಗಳು ತಮಗೆ ಆದರ್ಶವಾಗಬೇಕು ಎಂದು ಸಲಹೆ ನೀಡಿದರು.
ಎಸ್ಪಿ ಅವರ ಮಾತಿಗೆ ಪ್ರತಿಯಾಗಿ ಪ್ರತಿಯೊಬ್ಬ ವಿದ್ಯಾರ್ಥಿಯು ಧನ್ಯವಾದ ತಿಳಿಸಿದ್ದಲ್ಲದೇ ನಾನು ಸಹ ಐಪಿಎಸ್ ಅಧಿಕಾರಿ ಆಗ್ತೀನಿ ಸರ್ ಎಂದು ಕೆಲವು ವಿದ್ಯಾರ್ಥಿಗಳು ಪ್ರತಿಕ್ರಿಯಿಸಿದ್ದು ವಿಶೇಷವಾಗಿತ್ತು. ಸಣ್ಣ ವಯಸ್ಸಿನಲ್ಲಿಯೇ ವಿದ್ಯಾರ್ಥಿಗಳು ಹಾದಿ ತಪ್ಪುತ್ತಿರುವುದು ಕಳವಳದ ಸಂಗತಿ. ವಿದ್ಯಾರ್ಥಿಗಳನ್ನು ಸರಿಯಾಗಿ ನೋಡಿಕೊಳ್ಳಿರಿ ಎಂದು ಇದೆ ವೇಳೆ ಎಸ್ಪಿ ಅವರು ಅಲ್ಲಿದ್ದ ಶಿಕ್ಷಕರಿಗೆ ಸಲಹೆ ನೀಡಿದರು.
ಸ್ಫೂರ್ತಿ ನೀಡಲು ಫೋಟೊ
ಸರಕಾರಿ ಪಿಯು ಕಾಲೇಜಿನ ಸ್ಕೌಟ್ ಮತ್ತು ಗೈಡ್ಸ್ ವಿಭಾಗ, ಎನ್‌ಸಿಸಿ ಸಿನಿಯರ್ ವಿಭಾಗ, ಸೈನಿಕ ಶಾಲೆ, ಕನ್ನಡ ಹೆಣ್ಣು ಮಕ್ಕಳ ಮಾದರಿ ಪ್ರಾಥಮಿಕ ಶಾಲೆಯ ತೊರವಿ ಗೈಡ್ಸ್ ಮಕ್ಕಳು, ಜಗಜ್ಯೋತಿ ಬಸವೇಶ್ವರ ಪ್ರೌಢಶಾಲೆ, ಕನ್ನಡ ಹಿರಿಯ ಪ್ರಾಥಮಿಕ ಶಾಲೆ ದರ್ಗಾದ ವಿದ್ಯಾರ್ಥಿಗಳು, ಸೇಂಟ್ ಜೋಸೇಫ್ ಪ್ರೌಢಶಾಲೆ, ಹಿರಿಯ ಪ್ರಾಥಮಿಕ ಶಾಲೆ ಶಾಂತಿನಗರ ತೊರವಿ, ಸರ್ಕಾರಿ ಹೆಣ್ಣುಮಕ್ಕಳ ಮಾದರಿ ಪ್ರಾಥಮಿಕ ಶಾಲೆ ತೊರವಿ ಸೇರಿದಂತೆ ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳ ತಂಡಕ್ಕೆ ಭೇಟಿ ಮಾಡಿ ಆ ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಲು ಫೋಟೊಗಾಗಿ ಪ್ರತಿಯೊಂದು ಶಾಲೆಯ ವಿದ್ಯಾರ್ಥಿಗಳೊಂದಿಗೆ ಜೊತೆಯಾಗಿ ನಿಂತರು. ಎಸ್ಪಿ ಅವರೊಂದಿಗೆ ಫೋಟೊ ತೆಗೆಯಿಸಿಕೊಂಡು ವಿದ್ಯಾರ್ಥಿಗಳು ಖುಷಿಪಟ್ಟರು.
ನಾನಾ ಪಡೆಗಳೊಂದಿಗೆ ಜತೆಯಾದರು
ನಾಗರಿಕ ಪೊಲೀಸ್ ತುಕಡಿ, ಕರ್ನಾಟಕ ಮೀಸಲು ಪೊಲೀಸ್ ಪಡೆ, ಜಿಲ್ಲಾ ಮೀಸಲು ಪೊಲೀಸ್ ಪಡೆ, ಮಹಿಳಾ ಮೀಸಲು ಪೊಲೀಸ್ ಪಡೆ, ಅರಣ್ಯ ಇಲಾಖೆಯ ಪಥ ಸಂಚಲನೆ ಪಡೆ ಅರಣ್ಯ ರಕ್ಷಕ ದಳ, ಅಗ್ನಿಶಾಮಕ ದಳ, ಪೊಲೀಸ್ ಬ್ಯಾಂಡ್ ಸಿಬ್ಬಂದಿ ಹತ್ತಿರವೂ ತೆರಳಿದ ಎಸ್ಪಿ ಅವರು ಎಲ್ಲ ಪಡೆಗಳೊಂದಿಗೆ ಜೊತೆಯಾಗಿ ನಿಂತು ಎಸ್ಪಿ ಪ್ರೇರಣೆ ನೀಡಿದರು.
ಪಥ ಸಂಚಲನದಲ್ಲಿ ವಿಕಲಚೇತನ ವಿದ್ಯಾರ್ಥಿಗಳು
ಬಳಿಕ ಸುದ್ದಿಗಾರೊಂದಿಗೆ ಮಾತನಾಡಿದ ಎಸ್ಪಿಎಚ್. ಡಿ. ಆನಂದಕುಮಾರ ಅವರು, ಈ ಬಾರಿಯ ಸ್ವಾತಂತ್ರ್ಯೋತ್ಸವದ ಪಥ ಸಂಚಲನದಲ್ಲಿ ವಿಕಲಚೇತನ ಮಕ್ಕಳು ಸಹ ಭಾಗಿಯಾಗುತ್ತಿರುವುದು ವಿಶೇಷತೆಯಾಗಿದೆ ಎಂದು ತಿಳಿಸಿದರು.
ವಿಕಲಚೇತನ ಮಕ್ಕಳ ಪುನಶ್ಚೇತನ ಕೇಂದ್ರ ವಿಜಯಲಕ್ಷ್ಮಿ ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆಯ 12 ಮಕ್ಕಳು ಸಹ ಪಥಸಂಚಲನದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಡಿಎಆರ್‌ನ ಡಿವೈಎಸ್ಪಿ ಡಿ. ಎಸ್. ಧನಗರ, ವಿಜಯಲಕ್ಷ್ಮಿ ಸರ್ವೋತ್ತಮ ದೇಶಪಾಂಡೆ ಶಿಕ್ಷಣ ಮತ್ತು ಸಾಮಾಜಿಕ ಸಂಸ್ಥೆಯ ಪ್ರಶಾಂತ ದೇಶಪಾಂಡೆ, ಶಿಕ್ಷಕರಾದ ಪ್ರಹ್ಲಾದ್ ವಾಳ್ವೇಕರ, ಶಿಕ್ಷಕಿಯರಾದ ನಂದಾ ಎಸ್ ತಿಕೋಟೆ, ಎಂ. ವೈ. ಧನಗೊಂಡ ಮುಂತಾದವರು ಉಪಸ್ಥಿತರಿದ್ದರು.