ವಿಜಯಪುರ: ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ನಡೆಯಿತು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ರವರು ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ಮಹಾತ್ಮಾ ಗಾಂಧೀಜಿ, ಡಾ. ಬಿ. ಆರ್. ಅಂಬೇಡ್ಕರ, ಜವಾಹರಲಾಲ ನೆಹರು ಹಾಗೂ ಇನ್ನೂ ಅನೇಕ ಮಹಾಪುರುಷರು ಈ ದೇಶಕ್ಕಾಗಿ ಮಾಡಿದ ತ್ಯಾಗ ಬಲಿದಾನಗಳಿಂದ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ಇದನ್ನು ಏಕತೆ ಹಾಗೂ ಸಾಮರಸ್ಯದಿಂದ ಕಾಪಾಡಿಕೊಂಡು ಹೋಗಬೇಕು ಎಂದು ಹೇಳಿದರು.
ಸ್ವಾತಂತ್ರ್ಯದ ಹೋರಾಟದಲ್ಲಿ ಕಾಂಗ್ರೆಸ್ಸಿನ ಪಾತ್ರ ಪ್ರಮುಖವಾಗಿದೆ. ಇಂದು ಸರಕಾರದ ನೇತೃತ್ವ ವಹಿಸಿರುವ ಬಿಜೆಪಿ ನಾಯಕರ ಪಾತ್ರ ಏನೂ ಇಲ್ಲ. ಆದರೂ ಅವರು ನಾವೇ ದೇಶಭಕ್ತರು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ಮುಂದಿನ ಪೀಳಿಗೆಗೆ ದೇಶಭಕ್ತಿಯ ಬಗ್ಗೆ ತಿಳಿಹೇಳಿ ದೇಶಪ್ರೇಮ ಹೆಚ್ಚಿಸುವ ಕೆಲಸ ಮಾಡೋಣ ಎಂದು ವೈಜನಾಥ ಕರ್ಪೂರಮಠ ಹೇಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಹಿರಿಯ ಮುಖಂಡ ಕೆ. ಎಫ್. ಅಂಕಲಗಿ ಮಾತನಾಡಿ, ದೇಶದ ಏಕತೆ, ಸಾಮರಸ್ಯ, ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡುತ್ತಾ ಪ್ರತಿಯೊಬ್ಬ ನಾಗರಿಕರು ತಂತಮ್ಮ ಜವಾಬ್ದಾರಿಗಳನ್ನು ಅರಿತು ಈ ದೇಶಕ್ಕೆ ಅವರದೇ ಆದ ಕೊಡುಗೆ ನೀಡಬೇಕು. ಆದರ್ಶ ಪ್ರಜೆಗಳಾಗಿ ಬಾಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಚಾಂದಸಾಬ ಗಡಗಲಾವ, ಮಹಾದೇವಿ ಗೋಕಾಕ, ಸುಭಾಸ ಕಾಲೇಬಾಗ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸುರೇಶ ಗೊಣಸಗಿ, ಶಬ್ಬೀರ ಜಹಾಗೀರದಾರ, ಸಾಹೇಬಗೌಡ ಬಿರಾದಾರ, ವಸಂತ ಹೊನಮೊಡೆ, ಸಮದ್ ಸುತಾರ, ಶರಣಪ್ಪ ಯಕ್ಕುಂಡಿ, ಪರವೇಜ ಚಟ್ಟರಕಿ, ಪಕ್ಷದ ಹಿರಿಯ ಮುಖಂಡರಾದ ಡಿ. ಎಚ್. ಕಲಾಲ, ವಿದ್ಯಾವತಿ ಅಂಕಲಗಿ, ಪೀರಪ್ಪ ನಡುವಿನಮನಿ, ಶಂಕರ್ ಸಿಂಗ್ ಹಜೇರಿ, ಚನಬಸಪ್ಪ ನಂದರಗಿ, ಪ್ರಕಾಶ ಕಟ್ಟಿಮನಿ, ಮಹಾದೇವ ಜಾಧವ, ಮಲ್ಲಿಕಾರ್ಜುನ ಗಬಸಾವಳಗಿ, ಅಕ್ಬರ ನಾಯಕ, ಅಲ್ಲಾಬಕ್ಷ ಬಾಗಲಕೋಟ, ಕುಲದೀಪ ಸಿಂಗ, ಅಪ್ಸರ ಪಟೇಲ, ಭಾರತಿ ನಾವಿ, ಸಂಗೀತಾ ಹೂಗಾರ, ಇಲಿಯಾಸ ಸಿದ್ದಿಕಿ, ಬಿ. ಪಿ. ನಡುವಿನಮನಿ, ಡಿ. ಎಸ್. ಮುಲ್ಲಾ, ಎಂ. ಆರ್. ಪಾಟೀಲ, ಸಲಿಮ ಉಸ್ತಾದ, ಅನಿಲ ರಜಪೂತ, ಅಭಿಷೇಕ ಮಠ, ಎಂ. ಎ. ಬಕ್ಷಿ, ಬಿ. ಎಚ್. ಬಿರಾದಾರ, ವಸೀಮ ತಾವರಗೇರಿ, ಪ್ರತಾಪ ಬಬಲೇಶ್ವರ, ಮಲ್ಲು ತೊರವಿ, ತಾಜುದ್ದೀನ ಖಲೀಫಾ, ಗಂಗೂಬಾಯಿ ಧೂಮಾಳೆ, ಆಯೇಷಾ ಬೇಪಾರಿ, ಮಂಜುಳಾ ಜಾಧವ, ಆಸಮಾ ಕಾಲೇಬಾಗ, ಅಶ್ವಿನಿ ಬಿಜ್ಜರಗಿ, ರುಕ್ಮಿಣಿ ಚವ್ಹಾಣ, ರಿಹಾನಾ ಗಲಗಲಿ, ಫಿರೋಜ ಶೇಖ, ಅಂಬಣ್ಣ ಕಲಮನಿ, ನಿಸಾರ ಮುಜಾವರ, ಸುರೇಶ ಬಿರಾದಾರ, ಧನರಾಜ ಎ., ಮಹ್ಮದ ಮುಲ್ಲಾ, ಯುಸುಫ್‌ಅಲಿ ಶೇಖ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.