Independence Day Katti: ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿಜಯಪುರ ಕೊಡುಗೆ ಅಪಾರ: ಉಮೇಶ ಕತ್ತಿ

ವಿಜಯಪುರ: ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ವಿಜಯಪುರ ಜಿಲ್ಲೆಯು ಮಹತ್ತರ ಕೊಡುಗೆ ನೀಡಿದೆ ಎಂದು ಅರಣ್ಯ ಹಾಗೂ ಆಹಾರ ನಾಗರಿಕ ಪೂರೈಕೆ ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ಕತ್ತಿ ಹೇಳಿದರು.

ವಿಜಯಪುರ ನಗರದಲ್ಲಿ ಜಿಲ್ಲಾಡಳಿತದಿಂದ, ಭಾರತ ರತ್ನ ಡಾ. ಬಿ. ಆರ್. ಅಂಬೇಡ್ಕರ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣದ ನೆರವೇರಿಸಿ ಅವರು ಮಾತನಾಡಿದರು.

ಸಚಿವ ಉಮೇಶ ಕತ್ತಿ ವಿಜಯಪುರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು

ನುಡಿದಂತೆ ನಡೆದ ಬಸವಾದಿ ಶರಣರು, ಸಂತರು, ಸೂಫಿಗಳು, ದಾರ್ಶನಿಕರು ಮತ್ತು ಕೆಚ್ಚೆದೆಯ ದೇಶಪ್ರೇಮಿಗಳು ಜನಿಸಿ, ಬಾಳಿ-ಬದುಕಿ, ಸಮಾನತೆಯ ಆದರ್ಶ ಸಮಾಜ ನಿರ್ಮಾಣಕ್ಕಾಗಿ ನಿರಂತರವಾಗಿ
ಶ್ರಮಿಸಿ, ಜಗತ್ತಿಗೆ ಆದರ್ಶವೆನಿಸಿರುವ ನಮ್ಮ ಹೆಮ್ಮೆಯ ನೆಲ ವಿಜಯಪುರ ಜಿಲ್ಲೆಯಾಗಿದೆ. ಶಿಕ್ಷಣ ಕ್ರಾಂತಿಯ ಮೂಲಕ ಮಾತ್ರ ಸಮಾಜದ ಎಲ್ಲ ರಂಗಗಳಲ್ಲಿ ಸಮಾನತೆಯನ್ನು ಸಾಧಿಸಲು ಸಾಧ್ಯ ಎಂದು ಬಲವಾಗಿ
ನಂಬಿದ್ದ ಸಂವಿಧಾನ ಶಿಲ್ಪಿ, ಭಾರತರತ್ನ ಡಾ. ಬಾಬಾಸಾಹೇಬ ರಾಮಜಿ ಅಂಬೇಡ್ಕರ್ ಅವರು ಪ್ರತಿಪಾದಿಸಿದ ಸಮಾನತೆ ಮತ್ತು ಸಮಾನತೆಯ ಅವಕಾಶಗಳು ನಮ್ಮ ದೇಶದ ಪ್ರಜಾಸತ್ತಾತ್ಮಕ ಸಂಪ್ರದಾಯದ
ಬೇರುಗಳನ್ನು ಗಟ್ಟಿಗೊಳಿಸುವ ಮೂಲಕ ಜಾತ್ಯಾತೀತ ರಾಷ್ಟç ನಿರ್ಮಾಣದ ಕನಸುಗಳನ್ನು ನನಸು ಮಾಡುತ್ತಿವೆ. ನಾವೆಲ್ಲ ಭಾರತೀಯರೂ ಸಮತಾಭಾವ, ರಾಷ್ಟçಪ್ರೇಮ ಮತ್ತು ಸಮಷ್ಠಿ ಭಾವದ ರಾಷ್ಟçಪ್ರಜ್ಞೆಯಿಂದ ಪ್ರೇರಿತರಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಅದಮ್ಯ ಉತ್ಸಾಹ ಮತ್ತು ವಿಜೃಂಭಣೆಯಿಂದ ಆಚರಿಸುತ್ತಿದ್ದೇವೆ ಎಂದು ಹೇಳಲು ಅಭಿಮಾನ ಪಡುತ್ತೇನೆ ಎಂದು ಹೇಳಿದರು.

ಸ್ವಾತಂತ್ರ್ಯ ಹೋರಾಟದಲ್ಲಿ ಸುರಪುರದ ರಾಜಾ ವೆಂಕಟ್ಟಪ್ಪ ನಾಯಕ, ನರಗುಂದದ ಬಾಬಾಸಾಹೇಬ, ದೊಂಡಿಯಾ ವಾಘ, ಹಲಗಲಿಯ ಬೇಡರು, ಗಂಗಾಧರರಾಯ ದೇಶಪಾಂಡೆ, ಹರ್ಡೆಕರ್ ಮಂಜಪ್ಪ ಮತ್ತು ಮೈಲಾರ ಮಹಾದೇವಪ್ಪ ಮುಂತಾದವರ ತ್ಯಾಗ ಅಪ್ರತಿಮವಾದದ್ದಾಗಿದೆ. ಅದೇ ರೀತಿ ವಿಜಯಪುರ ಜಿಲ್ಲೆಯ ಶ್ರೀ ಚನ್ನಬಸಪ್ಪ ಅಂಬಲಿ, ಶ್ರೀ ಕಾಕಾ ಕಾರ್ಖಾನಿಸ್, ಶ್ರೀ ತಾಮಜಿ ಕುಶಾಜಿ ಮಿರಜಕರ್, ಇಂಚಗೇರಿಯ ಶ್ರೀ ಸ.ಸ.ಮಾಧವನಂದ ಪ್ರಭುಗಳು, ಸುರಪುರ ಮಲ್ಲಪ್ಪ, ಜೀವರಾಜ ದೋಶಿ, ಮೊಹರೆ ಹನುಮಂತರಾಯರು, ದೇವರ ನಾವದಗಿಯಲ್ಲಿ ನೆಲೆಸಿದ್ದ ಶ್ರೀ ವಾಸುದೇವ ಬಲವಂತ ಫಡ್ಕೆ, ಮಹಾನ್ ಸೇನಾನಿ ರಮಾನಂದ ತೀರ್ಥರು, ಶ್ರೀ ರಾಚಪ್ಪ ಗುರುಲಿಂಗಪ್ಪ ಹೊಳಗಿ, ಶ್ರೀ ನಾರಾಯಣ ರಾಘವೇಂದ್ರ ದೇಸಾಯಿ, ಶ್ರೀ ರತನಚಂದ ಪಾಯಪ್ಪ ಜಗಶೆಟ್ಟಿ, ಶ್ರೀ ಶಂಕರಗೌಡ ಪಾಟೀಲ್, ಶ್ರೀ ಭಗವಾನ ಸಿಂಗ ಅಂಗಡಿ, ಶ್ರೀ ಶಿವಾನಂದ ಶಿವಯೋಗಿಗಳು, ಶ್ರೀ ತಿಪ್ಪಣ್ಣ ಶಂಕ್ರಪ್ಪ ಗುದ್ದಿ, ಶ್ರೀ ಬಾಳಪ್ಪ ನರಸಪ್ಪ ಬೋಸಗಿ, ಶ್ರೀ ಮಲ್ಲಪ್ಪ ಬಸಪ್ಪ ಕುಂಬಾರ, ಶ್ರೀ ಈರಪ್ಪ ಕಾಳಪ್ಪ ಬಡಿಗೇರ, ಮಧುರ ಚೆನ್ನರು, ಶ್ರೀ ಪಿ. ಧೂಲಾಸಾಬ್, ಲಾವಣಿ ರತ್ನ ಖಾಜಾಬಾಯಿ, ಶ್ರೀ ರೇವಪ್ಪ ಕಾಪಸೆ, ಶ್ರೀ ಗಿರಿಮಲ್ಲಪ್ಪ ಶಿವಪ್ಪ ವಾಲಿ, ಶ್ರೀ ಬಸಪ್ಪ ಅಲಪ್ಪ ಬಳಗಲಿ, ಶ್ರೀ ಶಂಕ್ರಯ್ಯ ಮಲಯ್ಯ ಪೂಜಾರಿ, ಶ್ರೀ ಶೀಲವಂತ ಮಲಕಾಜಪ್ಪ, ಶ್ರೀ ಹೊನ್ನಳ್ಳಿ ಸಿದ್ರಾಮಯ್ಯ, ಶ್ರೀ ನಾಗೇಂದ್ರಪ್ಪ ಕಪಟಕರ, ಶ್ರೀ ರೇವಣಸಿದ್ದಯ್ಯ ಲದ್ದಿಮಠ, ಶ್ರೀ ಬಸಪ್ಪಣ್ಣ ಶಿರೂರು, ಶ್ರೀ ಸುಗಂಧಿ ಮುರಿಗೆಪ್ಪ, ರಾವ್‌ಬಹಾದ್ದೂರ ಡಾ. ಫ. ಗು. ಹಳಕಟ್ಟಿ, ಶಿಕ್ಷಣ ದಾಸೋಹಿ ಬಂಥನಾಳ ಶಿವಯೋಗಿಗಳು, ಶ್ರೀ ಬಸಲಿಂಗಪ್ಪ ದೇಸಾಯಿ, ಶ್ರೀ ವೆಂಕಪ್ಪ ಕೂಸಪ್ಪ ದೇಸಾಯಿ ಹಾಗೂ ಇನ್ನೂ ಹಲವಾರು ಸ್ವಾತಂತ್ರ್ಯ ಹೋರಾಟಗಾರರು ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ತಿಳಿಸಿದರು.

ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಮಹಾತ್ಮ ಗಾಂಧೀಜಿಯವರು 1918ರಲ್ಲಿ ಬಿಜಾಪುರದಲ್ಲಿ ನಡೆದ ಮುಂಬಯಿ ರಾಜಕೀಯ ಪರಿಷತ್ತಿನ ಸಭೆಯಲ್ಲಿ, 1921ರಲ್ಲಿ ಮತ್ತೊಮ್ಮೆ ಆಗಮಿಸಿ ಮಹಿಳೆಯರ ಸಭೆ ಹಾಗೂ ತಾಜ್ ಬಾವುಡಿ ಮೈದಾನದಲ್ಲಿ ಜರುಗಿದ ಸಾರ್ವಜನಿಕ ಸಭೆಯಲ್ಲಿ, 1927ರಲ್ಲಿ ನೀಡಿದ 3ನೇ ಭೇಟಿಯಲ್ಲಿ ಖಾದಿ ಪ್ರಚಾರದ ಬಗ್ಗೆ ಭಾಗವಹಿಸಿದ್ದರು. 1934 ರಲ್ಲಿ ಅಥಣಿಯಿಂದ ಬಿಜಾಪೂರಕ್ಕೆ ಆಗಮಿಸಿ ತಿಕೋಟಾ, ತೊರವಿ, ಹೊನವಾಡ ಗ್ರಾಮಗಳಲ್ಲಿ ಅಸ್ಪೃಶತಾ ನಿವಾರಣೆಗೆ ಸಾರ್ವಜನಿಕರ ಸಭೆಯಲ್ಲಿ ಭಾಗವಹಿಸಿದ್ದರು. ಹೀಗೆ 4 ಬಾರಿ ನಮ್ಮ ಜಿಲ್ಲೆಗೆ ಆಗಮಿಸಿದ್ದರು ಎನ್ನುವುದು ಹೆಮ್ಮೆಯ ಸಂಗತಿಯಾಗಿದೆ ಎಂದು ಸಚಿವರು ಹೇಳಿದರು.

ಸ್ವಾತಂತ್ರ್ಯ ಬಂದ ನಂತರ ದೇಶದ ಸಮಸ್ಯೆಗಳನ್ನು ಬಗೆಹರಿಸಲು ಪಂಚವಾರ್ಷಿಕ ಯೋಜನೆಗಳನ್ನು ಹಾಕಿಕೊಂಡು ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ, ಕೈಗಾರಿಕೆ, ಕೃಷಿ, ಸಾಕ್ಷರತೆ, ತಂತ್ರಜ್ಞಾನ, ಆರೋಗ್ಯ, ಗ್ರಾಮಾಂತರ ಪ್ರದೇಶದಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವಲ್ಲಿ, ಬಾಹ್ಯಾಕಾಶ ವಿಜ್ಞಾನ, ಅಣುವಿಜ್ಞಾನ ಕ್ಷೇತ್ರಗಳಲ್ಲಿ ಗಮನ ಸೆಳೆಯುವಂತಹ ಪ್ರಗತಿಯನ್ನು ನಮ್ಮ ದೇಶ ಸಾಧಿಸಿದೆ. ಜಾಗತಿಕ ನಾಯಕ ಎಂಬ ಹಿರಿಮೆಗೆ ಭಾಜನರಾಗಿರುವ ನಮ್ಮ ದೇಶದ ಹೆಮ್ಮೆಯ ಪ್ರಧಾನಿ ಸನ್ಮಾನ್ಯ ಶ್ರೀಯುತ ನರೇಂದ್ರ ಮೋದೀಜಿಯವರ ದೂರದೃಷ್ಠಿ, ದಣಿವರಿಯದ ಸತತ ಪರಿಶ್ರಮ ಮತ್ತು ಸಮಯಕ್ಕೆ ತಕ್ಕ ಚಾಣಾಕ್ಷ ನಿರ್ಧಾರಗಳ ಫಲವಾಗಿ ನಮ್ಮ ದೇಶವು ಇಂದು ಎಲ್ಲ ರಂಗಗಳಲ್ಲಿ ಸ್ವಾವಲಂಬನೆ ಸಾಧಿಸಿ ವಿಶ್ವದ ಭೂ ಪಟದಲ್ಲಿ ಬಲಿಷ್ಠ ಭಾರತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದು ನಮ್ಮೆಲ್ಲರಿಗೂ ತುಂಬಾ ಅಭಿಮಾನದ ಸಂಗತಿ. ಕೃಷಿ, ಆರೋಗ್ಯ, ಶಿಕ್ಷಣ, ವಸತಿ-ಆಹಾರ-ಶುದ್ಧವಾದ ಕುಡಿಯುವ ನೀರು, ರಸ್ತೆ ಇತ್ಯಾದಿ ಮೂಲಭೂತ ಸೌಕರ್ಯಗಳು, ರಕ್ಷಣೆ, ವಿದೇಶಾಂಗ ನೀತಿ, ವಿಜ್ಞಾನ-ತಂತ್ರಜ್ಞಾನ, ಇಂಧನ, ಔದ್ಯೋಗೀಕರಣ, ಕೈಗಾರಿಕೆ, ಉದ್ಯಮಶೀಲತೆ, ಕೌಶಲ್ಯಾಭಿವೃದ್ಧಿ ಮುಂತಾದ ಕ್ಷೇತ್ರಗಳಲ್ಲಿ ಆತ್ಮ ನಿರ್ಭರತೆಯನ್ನು ಸಾಧಿಸುತ್ತಿರುವ ನಮ್ಮ ರಾಷ್ಟçವು ಜಾಗತಿಕ ಮಟ್ಟದಲ್ಲಿ ಪ್ರಬಲ ಶಕ್ತಿಯಾಗಿ ಹೊರ ಹೊಮ್ಮುತ್ತಿರುವುದಕ್ಕೆ ಸಮಸ್ತ ಭಾರತೀಯರೆಲ್ಲರೂ ಹೆಮ್ಮೆ ಪಡುವ ಸಂಗತಿಯಾಗಿರುತ್ತದೆ. ಅದರಂತೆಯೇ ಕೋವಿಡ್, ಅತಿವೃಷ್ಠಿ ಮತ್ತು ಪ್ರವಾಹಗಳಂತಹ ಪ್ರಕೃತಿ ವಿಕೋಪಗಳ ನಡುವೆಯೂ ನಮ್ಮ ರಾಜ್ಯದ ಸನ್ಮಾನ್ಯ ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ಸಮರ್ಥ ನಾಯಕತ್ವದಲ್ಲಿ ರಾಜ್ಯ ಸರ್ಕಾರವು ರಾಜ್ಯದ ಜನತೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸುತ್ತ ಜನಮನ್ನಣೆ ಗಳಿಸಿರುತ್ತದೆ ಎಂದು ಉಮೇಶ ಕತ್ತಿ ತಿಳಿಸಿದರು.

ದೇಶದ ಸ್ವಾತಂತ್ರ‍್ಯಕ್ಕಾಗಿ ಜೀವತ್ಯಾಗ ಮಾಡಿದ ಹೋರಾಟಗಾರರ ಜೀವನಗಾಥೆ, ಹೋರಾಟದ ವಿವಿಧ ಹಂತಗಳು ಹಾಗೂ ಸ್ವಾತಂತ್ರ‍್ಯ ಹೋರಾಟಕ್ಕೆ ಕರ್ನಾಟಕದ ಕೊಡುಗೆಯನ್ನು ಇಂದಿನ ಯುವಜನಾಂಗಕ್ಕೆ,
ಸಾರ್ವಜನಿಕರಿಗೆ ಮತ್ತು ಸಮಾಜಕ್ಕೆ ತಿಳಿಸುವ ಉದ್ದೇಶದಿಂದ ಅಮೃತ ಭಾರತಿಗೆ ಕನ್ನಡದಾರತಿ ಎನ್ನುವ ವಿಶೇಷ ಕಾರ್ಯಕ್ರಮವನ್ನು ವಿಜಯಪುರ ಜಿಲ್ಲೆಯ ಸ್ವಾತಂತ್ರ‍್ಯ ಯೋಧರ ಗ್ರಾಮಗಳಾದ ಸಾರವಾಡ, ಮಸಬಿನಾಳ, ಹಲಸಂಗಿ ಮತ್ತು ದೇವರನಾವದಗಿಯಲ್ಲಿ ಹಮ್ಮಿಕೊಳ್ಳಲಾಗಿತ್ತು. ರಾಷ್ಟಿçÃಯ ಭಾವೈಕ್ಯತೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿ ವೈವಿಧ್ಯಮಯವಾಗಿ ಮೂಡಿಬಂದ ಈ ಕಾರ್ಯಕ್ರಮದ ಬಗ್ಗೆ
ಭಾರತದ ಸನ್ಮಾನ್ಯ ಪ್ರಧಾನಮಂತ್ರಿಗಳು ತಮ್ಮ ಮನ್ ಕಿ ಬಾತ್ ಆಕಾಶವಾಣಿ ಕಾರ್ಯಕ್ರಮದ ಮೂಲಕ ಮೆಚ್ಚುಗೆಯನ್ನು ವ್ಯಕ್ತಪಡಿಸಿರುವುದು ನಮಗೆಲ್ಲ ಆನಂದವನ್ನುAಟು ಮಾಡಿದೆ. ಜಾತ್ಯಾತೀತ ನೆಲೆಗಟ್ಟಿನ ಮೇಲೆ ನಿಂತಿರುವ ನಮ್ಮ ದೇಶದ ಸಾಮಾಜಿಕ, ಆರ್ಥಿಕ, ರಾಜಕೀಯ, ಧಾರ್ಮಿಕ, ಸಾಂಸ್ಕೃತಿಕ, ವೈಜ್ಞಾನಿಕ ಹಾಗೂ ರಕ್ಷಣಾ ವಲಯಗಳ ನೀತಿ-ಸಿದ್ಧಾಂತಗಳನ್ನು ಮತ್ತು ತತ್ವ ಆದರ್ಶಗಳನ್ನು ನಿರಂತರವಾಗಿ ಎತ್ತಿ ಹಿಡಿಯಲು ನಾವೆಲ್ಲರೂ ಕಂಕಣಬದ್ಧರಾಗಿ ದುಡಿಯೋಣ ಎಂದು ಅವರು ಹೇಳಿದರು.

ಸಂಗೊಳ್ೞಿ ರಾಯಣ್ಣ ಜನ್ಮದಿನ

ಆ. 15ರಂದು ಅಪ್ರತಿಮ ಹೋರಾಟಗಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮದಿನವಾಗಿದ್ದು, ಈ ಸಂದರ್ಭದಲ್ಲಿ ಅವರನ್ನೂ ನೆನೆಯುತ್ತಾ ಜನ್ಮದಿನದ ಶುಭಾಶಯಗಳನ್ನು ಗೌರವಗಳೊಂದಿಗೆ ಸಲ್ಲಿಸುತ್ತಿದ್ದೇನೆ ಎಂದು ಸಚಿವರು ತಿಳಿಸಿದರು.

ವಿಜಯಪುರ ನಗರ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ ಅವರು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಸಂಸದ ರಮೇಶ ಜಿಗಜಿಣಗಿ, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆಯ ಅಧ್ಯಕ್ಷರಾದ ವಿಜುಗೌಡ ಪಾಟೀಲ, ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಚಂದ್ರಶೇಖರ ಕವಟಗಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀಹರಿ ಗೋಳಸಂಗಿ, ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ, ಜಿಲ್ಲಾ ಪಂಚಾಯತ್ ಸಿಇಓ ರಾಹುಲ್ ಶಿಂಧೆ, ಎಸ್ಪಿ ಎಚ್. ಡಿ. ಆನಂದಕುಮಾರ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಜಿಲ್ಲಾ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಲಕ್ಷ್ಮಣ ಅರಸಿದ್ದಿ, ಉಪವಿಭಾಗಾಧಿಕಾರಿ ಕ್ಯಾ. ಮಹೇಶ ಮಾಲಗಿತ್ತಿ, ಮಹಾನಗರ ಪಾಲಿಕೆಯ ಆಯುಕ್ತ ವಿಜಯಕುಮಾರ ಮೆಕ್ಕಳಕಿ, ವಿಜಯಪುರ ತಹಸೀಲ್ದಾರ ಸಿದ್ಧರಾಯ ಬೋಸಗಿ, ನಾನಾ ಇಲಾಖೆಗಳ ಅಧಿಕಾರಿಗಳಾದ ಸಿದ್ರಾಮ ಮಾರಿಹಾಳ, ಎಸ್. ಎಂ. ಬರಗಿಮಠ, ಉಮೇಶ ಶಿರಹಟ್ಟಿಮಠ, ಎಸ್. ಜಿ. ಲೋಣಿ, ಬಿ. ನಾಗರಾಜ ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌