ವಿಜಯಪುರ: ನಗರದ ಶಾಂತಿನಿಕೇತನ ಶಿಕ್ಷಣ ಸಂಸ್ಥೆಯಲ್ಲಿ 75ನೇ ಸ್ವಾತಂತ್ರ್ಯ ದಿನವನ್ನು ಆಚರಿಸಲಾಯಿತು. ನಿವೃತ್ತ ಸೈನಿಕ ಸುಭಾಸ ಸಜ್ಜನ್ ಧ್ವಜಾರೋಹಣ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನಿಯರನ್ನು ನಾವೆಲ್ಲರೂ ನೆನೆಯಬೇಕು. ಎಲ್ಲರೂ ದೇಶ ಸೇವೆಗಾಗಿ ದುಡಿಯಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷೆ ಶೀಲಾ ಬಿರಾದಾರ ಮಾತನಾಡಿ, ಪ್ರತಿಯೊಬ್ಬರು ಕುಟುಂಬ, ಪಾಲಕರು, ಸ್ನೇಹಿತರು, ಅಜ್ಜ-ಅಜ್ಜಿ, ಸಮಾಜವನ್ನು ಪ್ರೀತಿಸುವ, ಸ್ನೇಹದಿಂದ ಕಾಣುವ ಗುಣವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ದೇಶಭಕ್ತಿ, ದೇಶಸೇವೆ ಮಾಡುವಂತಹ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ಸೈನಿಕರು ತಮ್ಮ ವೈಯಕ್ತಿಕ ಜೀವನವನ್ನು ಬದಿಗಿಟ್ಟು ನಮ್ಮ ದೇಶವನ್ನು ರಕ್ಷಣೆ ಮಾಡುತ್ತಾರೆ. ಅವರ ತ್ಯಾಗ ಮತ್ತು ಬಲಿದಾನವನ್ನು ನಾವು ಸ್ಮರಿಸಬೇಕು. ಅಲ್ಲದೇ, ಸದಾ ಕೃತಜ್ಞತೆ ಸಲ್ಲಿಸಬೇಕು. ಸಮಾಜದಲ್ಲಿರುವ ಜಾತಿ ಮತ, ಧರ್ಮ, ಭ್ರಷ್ಟಾಚಾರಗಳನ್ನು ನಿರ್ಮೂಲನೆ ಮಾಡಿ ಸುಂದರ ಸಮಾಜವನ್ನು ನಿರ್ಮಾಣ ಮಾಡುವವನ್ನು ಎಲ್ಲರೂ ಮಾಡಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ದೇಶಭಕ್ತಿ ನೃತ್ಯ ಗಮನ ಸೆಳೆಯಿತು. ಆಕಾಂಕ್ಷಾ ಬೊಂದರ್ಡೆ, ಪ್ರೇರಣಾ ಅಂಬಿಗೇರ, ನಿಶಿಕಾ ಗನುರವರ, ಸಿದ್ಧಾರ್ಥ ಹಿಟ್ನಳ್ಳಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದು ಕೊಟ್ಟ ವೀರಯೋಧರ ಕುರಿತು ಭಾಷಣ ಮಾಡಿದರು.
ವಿದ್ಯಾರ್ಥಿಗಳು ದೇಶಭಕ್ತಿ ಕುರಿತು ಹಾಡುಗಳನ್ನು ಹಾಡಿದರು. ನಾನಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಎಲ್ಲ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು.
ಪ್ರಾಚಾರ್ಯ ಶ್ರೀಧರ ಕುರಬೆಟ ಸ್ವಾಗತಿಸಿದರು. ಶಿಕ್ಷಕರಾದ ಶಶಿಧರ ಲೋನಾರಮಠ ನಿರೂಪಿಸಿದರು. ಯುನುಸ್ ಪೀರ್ಜಾದೆ ವಂದಿಸಿದರು. ಶಿಕ್ಷಕರಾದ ಪ್ರವೀಣಕುಮಾರ ಗೆಣ್ಣೂರ, ಎ. ಎಚ್. ಸಗರ, ಅನೀಲ ಬಾಗೆವಾಡಿ, ಪರಮಾನಂದ ಅಂಬಿ, ಬಸವರಾಜ ರೆಬಿನಾಳ, ಅಶ್ವೀನ ವಗದರಗಿ, ಈಶ್ವರ, ಶ್ರೀದೇವಿ, ಸವಿತಾ, ಶ್ವೇತಾ, ಸೀಮಾ, ಕವಿತಾ, ಸರೋಜಾ, ತಬಸ್ಸುಮ, ಹೀನಾ ಕೌಸರ, ಮೋಹಸಿನಾ, ಗೀತಾಂಜಲಿ, ದೀಪಾ, ಅಪ್ಸರಾ, ಬೌರಮ್ಮಾ, ಮಂಜುಳಾ, ವಿದ್ಯಾ ಮುಂತಾದವರು ಉಪಸ್ಥಿತರಿದ್ದರು.