IPS Promotion: ವಿಜಯಪುರ ಎಎಸ್ಪಿ ಡಾ.‌ ಅರಸಿದ್ದಿ, ಬಿ. ಎಸ್. ನೇಮೆಗೌಡ ಸೇರಿ ಏಳು ಜನರಿಗೆ ಐಪಿಎಸ್ ಗೆ ಬಡ್ತಿ

ಬೆಂಗಳೂರು: ವಿಜಯಪುರ ಹೆಚ್ಚುವರಿ ಎಸ್ಪಿ ಡಾ. ರಾಮ ಲಕ್ಷ್ಮಣಸಾ ಅರಸಿದ್ಧಿ ಮತ್ತು ಬೆಳಗಾವಿ ಎಸಿಬಿ ಎಸ್ಲಿ ಬಿ. ಎಸ್. ನೇಮಗೌಡ ಸೇರಿದಂತೆ ಏಳು ಜನ‌ ಪೊಲೀಸ್ ಅಧಿಕಾರಿಗಳಿಗೆ ಐಪಿಎಸ್ ಅಧಿಕಾರಿಗಳಾಗಿ ಬಡ್ತಿ ನೀಡಲಾಗಿದೆ.

ವಿಜಯಪುರ ಎಎಸ್ಪಿ ಡಾ. ರಾಮ ಲಕ್ಷ್ಮಣಸಾ ಅರಸಿದ್ಧಿ

ರಾಜ್ಯದ ನಾನಾ ಕಡೆ ಈ ಅಧಿಕಾರಿಗಳು ಈಗ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೆಎಸ್‌ಪಿಎಸ್‌ ಮೂಲಕ ಡಿವೈಎಸ್ಪಿಗಳಾಗಿ ಆಯ್ಕೆಯಾಗಿದ್ದ ಈ ಅಧಿಕಾರಿಗಳು ನಂತರ ಸೇವಾನುಭವ ಮತ್ತು ಅರ್ಹತೆಯ ಆಧಾರದ ಮೇಲೆ ಹೆಚ್ಚುವರಿ ಎಸ್ಪಿಗಳಾಗಿ ನಾನಾ ಕಡೆ ಸೇವೆ ಸಲ್ಲಿಸುತ್ತಿದ್ದಾರೆ. ಈಗ ಇವರಿಗೆ ಕೇಂದ್ರ ಗೃಹ ಇಲಾಖೆ ಐಪಿಎಸ್ ಅಧಿಕಾರಿಗಳಾಗಿ ಬಡ್ತಿ ನೀಡಿದೆ.

ಬೆಳಗಾವಿ ಎಸಿಬಿ ಎಸ್ಪಿ ಬಿ. ಎಸ್. ನೇಮಗೌಡ

 

ಈ ಏಳು ಜ‌ನ ಅಧಿಕಾರಿಗಳಲ್ಲಿ ಸಚಿನ ಘೊರ್ಪಡೆ ಮೂಲತಃ ವಿಜಯಪುರದವರಾಗಿದ್ದಾರೆ. ಆದರೆ, ಅವರು ತಮ್ಮ ಸೇವಾವಧಿಯನ್ನು ಬೆಂಗಳೂರು ಭಾಗದಲ್ಲಿ ಮಾಡಿದ್ದಾರೆ.

ಬಿ. ಎಸ್. ನೇಮಗೌಡ ಈ ಹಿಂದೆ ವಿಜಯಪುರ ಎಸ್ಪಿಯಾಗಿ ಸೇವೆ ಸಲ್ಲಿಸಿ ಈಗ ಬೆಳಗಾವಿ ಎಸಿಬಿ ಎಸ್ಪಿಯಾಗಿದ್ದಾರೆ.

ಡಾ. ರಾಮ ಲಕ್ಷ್ಮಣಸಾ ಅರಸಿದ್ದಿ ಈ ಮುಂಚೆ ವಿಜಯಪುರ ಡಿವೈಎಸ್ಪಿಯಾಗಿ ನಂತರ ಬೆಳಗಾವಿ ಹೆಚ್ಚವರಿ ಎಸ್ಪಿಯಾಗಿ ಸೇವೆ ಸಲ್ಲಿಸಿದ್ದಾರೆ. ಈಗ ಸಧ್ಯಕ್ಕೆ ವಿಜಯಪುರ ಹೆಚ್ಚುವರಿ ಎಸ್ಪಿಯಾಗಿ ಕಳೆದ ಮೂರು ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ.

ಏಳು‌ ಜನ ಕನ್ನಡಿಗ ಪೊಲೀಸ್ ಅಧಿಕಾರಿಗಳಿಗೆ ಐಪಿಎಸ್ ಬಡ್ತಿ ನೀಡಿರುವ ಆದೇಶ ಪ್ರತಿ

ಐಪಿಎಸ್ ಅಧಿಕಾರಿಗಳಾಗಿ ಬಡ್ತಿ ಪಡೆದ ಪೊಲೀಸರ ಮಾಹಿತಿ ಇಲ್ಲಿದೆ.

1. ಸಚಿನ ಘೋರ್ಪಡೆ,
2. ವಿಕ್ರಮ ಆಮ್ಟೆ,
3. ಸಚಿನ ವಿ. ಜೆ.
4. ಡಾ. ರಾಮ ಲಕ್ಷ್ಮಣಸಾ ಅರಸಿದ್ದಿ,
5. ಬಿ. ಎಸ್. ನೇಮಗೌಡ,
6. ಗೋಪಾಲ ಎಂ. ಬ್ಯಾಕೋಡ
7. ಮಹಾನಿಂಗ ನಂದಗಾಂವಿ

ಎಲ್ಲ ಏಳೂ ಜನರನ್ನು ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಗಳಾಗಿ ಬಡ್ತಿ ನೀಡಲಾಗಿದೆ.

ಮುಂದಿನ 15 ದಿನಗಳು ಅಥವಾ ಒಂದು ತಿಂಗಳಲ್ಲಿ ಇವರಿಗೆ ಹಾಲಿ ಹುದ್ದೆಗಳಿಂದ ಐಪಿಎಸ್ ಕೇಡರ್ ನ‌ ನಾನಾ ಹುದ್ದೆಗಳಿಗೆ ವರ್ಗಾವಣೆ ಮಾಡುವ ನಿರೀಕ್ಷೆಗಳಿವೆ.

Leave a Reply

ಹೊಸ ಪೋಸ್ಟ್‌