Retired Filicitaion: ವಿಜಯಪುರದ ಸಿಕ್ಯಾಬ್ ನಿವೃತ್ತ ಪ್ರಾಚಾರ್ಯ ಸೇವಾ ನಿವೃತ್ತಿ- ಆತ್ಮೀಯ ಬೀಳ್ಕೊಡುಗೆ

ವಿಜಯಪುರ: ಸ್ಥಳೀಯ ಸಿಕ್ಯಾಬ್ ಸಂಸ್ಥೆಯ ಎ. ಆರ್. ಎಸ್. ಇನಾಮದಾರ ಕಲಾ, ವಿಜ್ಞಾನ, ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಕೇಂದ್ರದ ಪ್ರಾಚಾರ್ಯರಾದ ಡಾ. ಮಹಮ್ಮದ್ ಅಫ್ಜಲ್ ಅವರಿಗೆ ಸೇವಾ ನಿವೃತ್ತಿ ಹಿನ್ನೆಲೆಯಲ್ಲಿ ಕಾಲೇಜಿನ ಆಡಳಿತ ಮಂಡಳಿ ಮತ್ತು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವತಿಯಿಂದ ಆತ್ಮೀಯಾವಾಗಿ ಬೀಳ್ಕೊಡಲಾಯಿತು. 

ಕಳೆದ 34 ವರ್ಷಗಳ ಅವಧಿಯಲ್ಲಿ ಡಾ. ಮಹಮ್ಮದ್ ಅಫ್ಜಲ್ ಬಾಲಕಿಯರ ಪದವಿಪೂರ್ವ ಕಾಲೇಜಿನಲ್ಲಿ ಭೌತಶಾಸ್ತ್ರ ಪ್ರಾಧ್ಯಾಪಕರಾಗಿ, ಮಹಿಳಾ ಪದವಿ ಕಾಲೇಜಿನಲ್ಲಿ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಉಪಪ್ರಾಚಾರ್ಯರಾಗಿ, ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ಕಾಲೇಜಿನ ಹಾಗೂ ಮಹಿಳಾ ನಾನಾ ಸಮಿತಿಗಳಲ್ಲಿ ಸದಸ್ಯರಾಗಿ ಕಾರ್ಯ ವಿರ್ವಹಿಸಿದ್ದನ್ನು ಸ್ಮರಿಸಲಾಯಿತು. 

ಎ. ಆರ್. ಎಸ್. ಇನಾಮದಾರ ಕಲಾ, ವಿಜ್ಞಾನ, ವಾಣಿಜ್ಯ ಮಹಿಳಾ ಮಹಾವಿದ್ಯಾಲಯ ಮಹಮ್ಮದ್ ಅಫ್ಜಲ್ ಸೇವಾ ನಿವೃತ್ತಿ ಹೊಂದಿದ ಹಿನ್ನೆಲೆ ಸನ್ಮಾನಿಸಲಾಯಿತು

ಮುಂದಿನ ಅವಧಿಗೆ ಪ್ರಾಚಾರ್ಯರಾಗಿ ಇಂಗ್ಲೀಷ್ ವಿಭಾಗದ ಮುಖ್ಯಸ್ಥ ಪ್ರೊ. ಮನೋಜ್ ಕೊಟ್ನಿಸ್ ಹಾಗೂ ಉಪಪ್ರಾಚಾರ್ಯರಾಗಿ ಗೃಹವಿಜ್ಞಾನ ವಿಭಾಗದ ಮುಖ್ಯಸ್ಥ ಪ್ರೊ. ಜೊಹರಾ ತಬಸ್ಸುಮ್ ಖಾಜಿ ಇದೇ ವೇಳೆ ಅಧಿಕಾರ ವಹಿಸಿಕೊಂಡರು.

ಈ ಬೀಳ್ಕೊಡುಗೆ ಸಮಾರಂಭದಲ್ಲಿ ಸಿಕ್ಯಾಬ್ ಸಂಸ್ಥೆಯ ಅಧ್ಯಕ್ಷ ಎಸ್. ಎ. ಪುಣೆಕರ, ಕಾರ್ಯಾದರ್ಶಿ ಎ. ಎಸ್.  ಪಾಟೀಲ, ಕಾಲೇಜಿನ ಆಡಳಿತ ಮಂಡಳಿಯ ಚೇರ್ಮನ್ ರಿಯಾಜ್ ಫಾರೂಖಿ, ನಿರ್ದೇಶಕರಾದ ಸಲಾವುದ್ದೀನ್ ಅಯೂವಿ, ಎ. ಎಂ. ಬಗಲಿ, ನಜೀಬ್ ಭಕ್ಷಿ, ಪ್ರಾಧ್ಯಾಪಕ ವರ್ಗದವರು ಹಾಗೂ  ಕಾರ್ಯಾಲಯ ಸಿಬ್ಬಂದಿ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌