Vision Programme: ಮದಭಾವಿ ಗ್ರಾಮದಲ್ಲಿ ದೂರದೃಷ್ಟಿ ಯೋಜನೆ ಕಾರ್ಯಕ್ರಮ

ವಿಜಯಪುರ: ದೂರದೃಷ್ಠಿ ಯೋಜನೆಯ ಕುರಿತಂತೆ ವಿಜಯಪುರ ತಾಲೂಕಿನ ಮದಭಾವಿ ಗ್ರಾಮದಲ್ಲಿ ಕಾರ್ಯಕ್ರಮ ನಡೆಯಿತು.

ಊರಿನ ಮನೆಮನೆಗೆ ಭೇಟಿ ನೀಡುವುದರ ಮೂಲಕ ಮದಭಾವಿ ಗ್ರಾಮದ ಸಾಮಾಜಿಕ ಹಾಗೂ ಸಂಪನ್ಮೂಲ ನಕ್ಷೆ ಹಾಗೂ ಮಾರ್ಗಗಳನ್ನು ರಂಗೋಲಿಯಲ್ಲಿ ಬಿಡಿಸಿ ಜನರಿಗೆ ತಿಳಿಸಲಾಯಿತು.

ಬಡತನ ಮುಕ್ತ ಮತ್ತು ಜೀವನೋಪಾಯ ಕೌಶಲ್ಯ ಅಭಿವೃದ್ಧಿ, ಗ್ರಾಮದಲ್ಲಿ ಆರೋಗ್ಯ ಯೋಜನೆಯ ಗುರಿ ನಿಗದಿಪಡಿಸುವಿಕೆ, ಶಿಕ್ಷಣ ವಲಯ, ಮಹಿಳಾ ಸ್ನೇಹಿ ಹಾಗೂ ಮಕ್ಕಳ ಸ್ನೇಹಿ ಗ್ರಾಮ ಪಂಚಾಯತ ಯೋಜನೆ, ಜಲ ಸಮೃದ್ಧಿ ಗ್ರಾಮ ನೈಸರ್ಗಿಕ ಸಂಪನ್ಮೂಲಗಳ ನಿರ್ವಹಣೆ, ನಿರ್ವಹಣೆಯಲ್ಲಿ ಸ್ವಚ್ಛತೆ ಮತ್ತು ಹಸಿರು ಗ್ರಾಮ, ಸಾಮಾಜಿಕವಾಗಿ ಸುರಕ್ಷಿತವಾಗಿ ಗ್ರಾಮದ ವಿಷಯಗಳ ಬಗ್ಗೆ ಗ್ರಾಮದಲ್ಲಿ ಚರ್ಚಿಸಲಾಯಿತು.

ದೂರದೃಷ್ಠಿ ಕಾರ್ಯಕ್ರಮ ವಿಜಯಪುರ ಜಿಲ್ಲೆಯ ಮದಭಾವಿ ಗ್ರಾಮದಲ್ಲಿ ನಡೆಯಿತು

ಈ ಸಂದರ್ಭದಲ್ಲಿ ಮಾನ್ಯ ಮುಖ್ಯ ಯೋಜನಾಧಿಕಾರಿಗಳಾದ ನಿಂಗಪ್ಪ ಗೋಠೆ, ಜಿಲ್ಲಾ ಪಂಚಾಯತಿಯ ಯೋಜನಾ ಅಂದಾಜು ಮತ್ತು ಮೌಲ್ಯಮಾಪನಾಧಿಕಾರಿ ಎ. ಬಿ. ಅಲ್ಲಾಪೂರ, ಜಿ. ಪಂ. ವಿಜಯಪುರದ ಪ್ರಮೋದ ಚಾಂದಕವಟೆ, ಅಬ್ದುಲ್ ನಜೀರಸಾಬ ಗ್ರಾಮೀಣಾಭಿವೃದ್ಧಿ ತರಬೇತಿ ಸಂಸ್ಥೆಯ ವಿಜಯಾ ಗಲಗಲಿ, ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಬಾಬು ಸಜ್ಜನ, ತಾಲೂಕಿನ ಸಾಮಾಜಿಕ ಲೆಕ್ಕಪರಿಶೋಧನಾ ತಂಡ ಹಾಗೂ ವಿ ಆರ್ ಪಿ ಗಳು ಹಾಗೂ ಮದಭಾವಿ ಗ್ರಾ. ಪಂ. ಯ ಚೇತನ ರಾ. ಬಗಲಿ, ಪಿಡಿಓ ಎಸ್. ಆರ್. ಕಟ್ಟಿ ಹಾಗೂ ತಾಲೂಕು ಐಇಸಿ ಸಂಯೋಜಕ ರಾಘವೇಂದ್ರ ಭಜಂತ್ರಿ ಹಾಗೂ ಕಾರ್ಯದರ್ಶಿ ಪ್ರಶಾಂತ ಸಜ್ಜನ ಹಾಗೂ ಪಂಚಾಯತಿ ಡಿಇಒ, ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ಜರು.

Leave a Reply

ಹೊಸ ಪೋಸ್ಟ್‌