Gokulastami Karjol: ಮೊಮ್ಮಕ್ಕಳೊಂದಿಗೆ ಕೃಷ್ಣ ಜನ್ಮಾಷ್ಟಮಿ ಆಚರಿಸಿದ ಸಚಿವ ಗೋವಿಂದ ಕಾರಜೋಳ

ಬೆಂಗಳೂರು: ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಮ್ಮ ಮೊಮ್ಮಕ್ಕಳೊಂದಿಗೆ ಕೃಷ್ಣ ಜನ್ಮಾಷ್ಟಮಿ ಆಚರಿಸಿದ್ದಾರೆ.

ಬೆಂಗಳೂರಿನಲ್ಲಿರುವ ಸಚಿವರ ನಿವಾಸದಲ್ಲಿ ಮೊಮ್ಮಕ್ಕಳಾದ ಓಂ, ಆದ್ಯ ಮತ್ತು ಅನ್ವದಾ ಅವರು ಕೃಷ್ಣ ಮತ್ತು ರಾಧೆಯರ ವೇಷ ಧರಿಸಿದ್ದರು.  ಈ ಸಂದರ್ಭದಲ್ಲಿ ಮೊಮ್ಮಕ್ಕಳೊಂದಿಗೆ ಬೆರೆತ ಸಚಿವ ಗೋವಿಂದ ಕಾರಜೋಳ ಗೋಕುಲಾಷ್ಟಮಿ ಸಂಭ್ರಮದಲ್ಲಿ ಪಾಲ್ಗೋಂಡು ಸಂತಸ ಪಟ್ಟರು.

ಮೊಮ್ಮಕ್ಕಳೊಂದಿಗೆ ಕೃಷ್ಣ ಜನ್ಮಾಷ್ಟಮಿ ಆಚರಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ

ಕಿರಿಯ ಮೊಮ್ಮಗಳು ಅನ್ವದಾಳನ್ನು ಎತ್ತಿಕೊಂಡು ಉಳದ ಇಬ್ಬರು ಮೊಮ್ಮಕ್ಕಳೊಂದಿಗೆ ಭಾವಚಿತ್ರ ತೆಗೆಸಿಕೊಂಡಿದ್ದು ವಿಶೇಷವಾಗಿತ್ತು.

Leave a Reply

ಹೊಸ ಪೋಸ್ಟ್‌