Madabhavi Epicenter: 3.5 ತೀವ್ರತೆ, ಮದಭಾವಿ ಬಳಿ ಭೂಕಂಪನ ಕೇಂದ್ರ ಬಿಂದು-
ವಿಜಯಪುರ: ರಾತ್ರಿ 8.17ಕ್ಕೆ ಸಂಭವಿಸಿದ ಭೂಜಂಪನದ ಕೇಂದ್ರಬಿಂದು ವಿಜಯಪುರ ತಾಲೂಕಿನ ಮದಭಾವಿ ಬಳಿ ಎಂದು ಗುರುತಿಸಲಾಗಿದೆ. 3.5 ತೀವ್ರತೆಯ ಭೂಕಂಪಕನ ಇದಾಗಿದ್ದು, ಭೂಮಿಯಿಂದ 5 ಕಿ. ಮೀ. ಆಳದಲ್ಲಿ ಭೂಕಂಪನ ಉಂಟಗಿದೆ. ಮದಭಾವಿಯಿಂದ ದಕ್ಷಿಣ- ದಕ್ಷಿಣ- ಪಶ್ಚಿಣ(ನೈರುತ್ಯ) ಭಾಗದ 3.30 ಕಿ. ಮೀ. ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ ಎಂದು ಮೂಲಗಳು ಬಸವ ನಾಡು ವೆಬ್ ಗೆ ಮಾಹಿತಿ ನೀಡಿವೆ.
Earthquake Sound: ಬಸವ ನಾಡಿನಲ್ಲಿ ಭೂಕಂಪನ- ಭೂಮಿಯೊಳಗಿಂದ ಕೇಳಿ ಬಂದ ಶಬ್ದ
ವಿಜಯಪುರ : ಬಸವ ನಾಡು ವಿಜಯಪುರದಲ್ಲಿ ಭೂಕಂಪನದ ಅನುಭವವಾಗಿದೆ. ರಾತ್ರಿ 8.17ರ ಸುಮಾರಿಗೆ ಭೂಮಿಯೊಳಗಿನಿಂದ ಗಢಗಢ ಶಬ್ದ ಕೇಳಿಬಂದಿದೆ. ಅಷ್ಟೇ ಅಲ್ಲ, ಭೂಮಿಯೂ ಕಂಪಿಸಿದೆ. ವಿಜಯಪುರ ನಗರದ ಆದರ್ಶ ನಗರ, ಚಾಲುಕ್ಯ ನಗರ, ಜಲನಗರ ಸೇರಿದಂತೆ ನಾನಾ ಕಡೆ ಇದು ಅನುಭವಕ್ಕೆ ಬಂದಿದೆ. ಇದರಿಂದಾಗಿ ಜನತೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ. ಸುಮಾರು ಮೂರ್ನಾಲ್ಕು ಸೆಕೆಂಡ್ ಭೂಕಂಪನ ಅನುಭವಕ್ಕೆ ಬಂದಿದ್ದು, ಇದು ವಿಜಯಪುರ ಜಿಲ್ಲಾಡಳಿತ ಇನ್ನಷ್ಟೇ ದೃಢಪಡಿಸಬೇಕಿದೆ.
Congress Celebration: ವಿಜಯಪುರ ಕಾಂಗ್ರೆಸ್ ಕಚೇರಿಯಲ್ಲಿ ರಾಜೀವ ಗಾಂಧಿ, ದೇವರಾಜ ಅರಸ ಜನ್ಮದಿನ ಆಚರಣೆ
ವಿಜಯಪುರ: ಮಾಜಿ ಪ್ರಧಾನಿ ದಿ. ರಾಜೀವ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ಡಿ. ದೇವರಾಜ ಅರಸ ಅವರ ಜನ್ಮದಿನವನ್ನು ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ದಿ. ರಾಜೀವ ಗಾಂಧಿಯವರು ಅತ್ಯಂತ ಕಿರಿಯ ವಯಸ್ಸಿನಲ್ಲಿ ಈ ದೇಶದ ಪ್ರಧಾನಿಯಾಗಿ ಇಡೀ ಜಗತ್ತು ಭಾರತದ ಕಡೆಗೆ ನೋಡುವಂತೆ ಮಾಡಿದ್ದಾರೆ. ಯುವಕರಿಗೆ 18ನೇ ವರ್ಷಕ್ಕೆ ಮತದಾನ ಮಾಡುವ ಹಕ್ಕನ್ನು ನೀಡಿದ್ದಾರೆ. ಪಂಚಾಯಿತಿ ರಾಜ್ ವ್ಯವಸ್ಥೆ ಮತ್ತು ಅದರಲ್ಲಿ […]