Earthquake Sound: ಬಸವ ನಾಡಿನಲ್ಲಿ ಭೂಕಂಪನ- ಭೂಮಿಯೊಳಗಿಂದ ಕೇಳಿ ಬಂದ ಶಬ್ದ

ವಿಜಯಪುರ : ಬಸವ ನಾಡು ವಿಜಯಪುರದಲ್ಲಿ ಭೂಕಂಪನದ ಅನುಭವವಾಗಿದೆ.

ರಾತ್ರಿ 8.17ರ ಸುಮಾರಿಗೆ ಭೂಮಿಯೊಳಗಿನಿಂದ ಗಢಗಢ ಶಬ್ದ ಕೇಳಿಬಂದಿದೆ. ಅಷ್ಟೇ ಅಲ್ಲ, ಭೂಮಿಯೂ ಕಂಪಿಸಿದೆ.

ವಿಜಯಪುರ ನಗರದ ಆದರ್ಶ ನಗರ, ಚಾಲುಕ್ಯ ನಗರ, ಜಲನಗರ ಸೇರಿದಂತೆ ನಾನಾ ಕಡೆ ಇದು ಅನುಭವಕ್ಕೆ ಬಂದಿದೆ. ಇದರಿಂದಾಗಿ‌ ಜನತೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಸುಮಾರು‌ ಮೂರ್ನಾಲ್ಕು ಸೆಕೆಂಡ್ ಭೂಕಂಪನ ಅನುಭವಕ್ಕೆ ಬಂದಿದ್ದು, ಇದು ವಿಜಯಪುರ ಜಿಲ್ಲಾಡಳಿತ ಇನ್ನಷ್ಟೇ ದೃಢಪಡಿಸಬೇಕಿದೆ.

Leave a Reply

ಹೊಸ ಪೋಸ್ಟ್‌