Sports Meet: ಅಮೃತ ಮಹೊತ್ಸವ ಅಂಗವಾಗಿ ಬಾಗಲಕೋಟೆಯಲ್ಲಿ ಕ್ರೀಡಾಕೂಟ

ಬಾಗಲಕೋಟೆ:ಕ್ರೀಡಾ ಕ್ಷೇತ್ರವು ಇಚ್ಛಾಶಕ್ತಿ, ಏಕಾಗ್ರತೆ ಮತ್ತು ಸ್ಪರ್ಧಾ ಮನೋಭಾವವನ್ನು ಬೆಳೆಸುತ್ತದೆ. ನಿರಂತರವಾದ ಕಠಿಣ ಪ್ರಯತ್ನದಿಂದ ಮಾತ್ರ ಸಾಧನೆ ಮಾಡಲು ಸಾಧ್ಯ ಎಂದು ಬಿವಿವಿಎಸ್ ದೈಹಿಕ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲ ಬಿರಾದಾರ ಹೇಳಿದರು.

ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬಾಗಲಕೋಟೆ ನಗರದ ಬಿವಿವಿಎಸ್ ಹೋಮಿಯೋಪಥಿಕ್ ವೈದ್ಯಕೀಯ ಮಹಾವಿದ್ಯಾಲಯದಲ್ಲಿ ನಡೆದ ಕ್ರೀಡಾಕೂಟವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ಮಲ್ಲಿಕಾಜುನ ಸಾಸನೂರು ಮಾತನಾಡಿ, ವಿದ್ಯಾಥಿ೯ಗಳು ಕ್ರೀಡೆಯಲ್ಲಿ ಹೆಚ್ಚೆಚ್ಚು ತೊಡಗಿಸಿಕೊಳ್ಳುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಢರಾಗಲು ಸಾಧ್ಯ ಎಂದು ಹೇಳಿದರು.

ಬಾಗಲಕೋಟೆಯ ಬಿವಿವಿಎಸ್ ಹೋಮಿಯೋಪಥಿ ಕಾಲೇಜಿನಲ್ಲಿ ನಡೆದ ಕ್ರೀಡಾಕೂಟದ ಉದ್ಘಾಟನೆ ಸಮಾರಂಭ

ಪ್ರಾಂಶುಪಾಲ ಡಾ. ಅರುಣ ಹೂಲಿ ಮಾತನಾಡಿ, ವಿದ್ಯಾರ್ಥಿಳು ಮೋಬೈಲ ದಾಸರಾಗದೆ ಆಟದ ಮೈದಾನಕ್ಕಿಳಿದು ಸದೃಢರಾಗಬೇಕು. ಸದೃಢವಾದ ದೇಹದಲ್ಲಿ ಮಾತ್ರ ಸದೃಢವಾದ ಮನಸ್ಸು ಇರಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಕ್ರೀಡಾ ಸಂಯೋಜಕ ಡಾ. ಮಂಜುನಾಥ ಪಾಟೀಲ, ಪ್ರಾಧ್ಯಾಪಕರಾದ ಡಾ. ರವಿ. ಎಸ್. ಕೋಟೆಣ್ಣವರ, ಡಾ. ಮಿಲಿಂದ ಬೆಳಗಾಂವಕರ, ಡಾ. ವಿಜಯಲಕ್ಷ್ಮಿ ಪಾಟೀಲ.ಲ, ಡಾ. ಫಾತಿಮಾ ಬಾಲಸಿಂಗ್ ಲ, ಡಾ. ಸುಧೀರ ಬೆಟಗೇರಿ, ಡಾ. ರುದ್ರೇಶ ಕೊಪ್ಪಳ, ಡಾ. ಅಮರೇಶ ಬಳಗಾನೂರ ಉಪಸ್ಥಿತರಿದ್ದರು.

ವಿದ್ಯಾಥಿ೯ನಿ ದಕ್ಷತಾ ಹೊರಟ್ಟಿ ಕಾರ್ಯಕ್ರಮ ನಿರೂಪಿಸಿದರು. ವಿದ್ಯಾರ್ಥಿಗಳಾದ ಆಕಾಶ ವಾಲಿ, ಆನಂದ ಒಡೆಯರ, ಪ್ರವೀಣ ಲಮಾಣಿ, ವಿಜಯಲಕ್ಷ್ಮಿ ಹವಾಲ್ದಾರ, ಅನುಶ್ರೀ, ಶ್ರೀದೇವಿ ಹಿರೇಮಠ ಕ್ರೀಡಾ ಜ್ಯೋತಿಯೊಂದಿಗೆ ಆಗಮಿಸಿ ಕ್ರೀಡಾ ಜ್ಯೋತಿ ಪ್ರಜ್ವಲನಗೊಳಿಸಿದರು. ವಿದ್ಯಾರ್ಥಿಗಳಾದ ಹುಜೈಫ ಭಕ್ಷಿ, ಸೋಹಮ ವಾಸ್ಕೆ, ಪ್ರತೀಕ, ಚಿನ್ನಬಸವರಾಜ ರೆಡ್ಡಿ ಲಯಬದ್ಧವಾಗಿ ಕ್ರೀಡಾ ಬ್ಯಾಂಡ ನುಡಿಸಿದರು.

Leave a Reply

ಹೊಸ ಪೋಸ್ಟ್‌