ವಿಜಯಪುರ: ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ವಿಜಯಪುರ ನಗರ ಮತಕ್ಷೇತ್ರಾದ್ಯಂತ ಕಾಂಗ್ರೆಸ್ ವತಿಯಿಂದ ಭಾರತ ಜೋಡೊ ಯಾತ್ರೆ ನಡೆಯಿತು.
ವಿಜಯಪುರ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಜಲ ನಗರ ಬ್ಲಾಕ್ ಕಾಂಗ್ರೆಸ್ ಸಮಿತಿಯ ವತಿಯಿಂದ ಆಯೋಜಿಸಲಾಗಿದ್ದ ಈ ಯಾತ್ರೆ ನಗರದ ಹಕೀಂ ಚೌಕನಿಂದ ಗಾಂಧಿ ವೃತ್ತದ ವರೆಗೆ ನಡೆಯಿತು.
ಭಾರತ ಜೊಡೊ ಕಾರ್ಯಕ್ರಮವನ್ನು ವಿಧಾನ ಪರಿಷತ್ ಸದಸ್ಯ ಸುನೀಲಗೌಡ ಪಾಟೀಲ ಮತ್ತು ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶ ಸ್ವಾತಂತ್ರ್ಯದ ಅಮೃತ ಮಹೋತ್ವವ ಆಚರಿಸುತ್ತಿದೆ. ಮಹಾತ್ಮ ಗಾಂಧಿ ಸೇರಿದಂತೆ ಅನೇಕ ಸ್ವಾತಂತ್ರ್ಯ ಹೋರಾಟಗಾರರು ತ್ಯಾಗ ಮತ್ತು ಬಲಿದಾನಗಳಿಂದ ನಮಗೆ ಬದುಕು ರೂಪಿಸಿಕೊಟ್ಟಿದ್ದಾರೆ. ಭಾರತದ ಪ್ರತಿಯೊಬ್ಬ ಪ್ರಜೆಯೂ ಶಾಂತಿ, ನೆಮ್ಮದಿಯಿಂದ, ಏಕತೆಯಿಂದ, ಸಾಮರಸ್ಯತೆಯಿಂದ ಬಾಳಲಿ ಎಂದು ಸಂದೇಶ ಸಾರಿದ್ದಾರೆ. ಅಲ್ಲದೇ, ಈ ದೇಶ ಕಟ್ಟುವಲ್ಲಿ ಸರ್ವ ಸಮಾಜಗಳ ಪಾಲಿದೆ. ನಾವೆಲ್ಲ ಒಂದೇ ತಾಯಿಯ ಮಕ್ಕಳಂತೆ ಬಾಳಬೇಕಾಗಿದೆ ಇಂದು ಕೆಲವು ದುಷ್ಟ ಶಕ್ತಿಗಳು ನಮ್ಮ ನಡುವೆ ಕಂದಕಗಳನ್ನು ಸೃಷ್ಟಿ ಮಾಡುತ್ತಿರುವುದು ದುರಾದೃಷ್ಟವಾಗಿದೆ ಎಂದು ಆರೋಪಿಸಿದರು.
ಮಹಾತ್ಮ ಗಾಂಧಿ, ಜವಹರಲಾಲ್ ನೆಹರು, ಡಾ. ಬಾಬಾಸಾಹೇಬ ಅಂಬೇಡ್ಕರ, ಮೌಲಾನ್ ಅಬ್ದುಲ್ ಕಲಾಂ, ಇಂದಿರಾ ಗಾಂಧಿ ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲ ನಡೆಯೋಣ ನಮ್ಮ ಮುಂದಿನ ಪೀಳಿಗೆಗೆ ದೇಶ ಪ್ರೇಮ ಹೇಳಿಕೊಟ್ಟು ನಾವು ಮಾದರಿಯಾಗೋಣ ಎನ್ನುವ ಉದ್ದೇಶದಿಂದ ಈ ಯಾತ್ರೆಯನ್ನು ಆಯೋಜಿಸಲಾಗಿದೆ. ಈ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಹುತಾತ್ಮರ ಆದರ್ಶಗಳನ್ನು ಮನೆ ಮನೆಗಳಿಗೆ ತಲುಪಿಸೋಣ ಎಂದು ಪ್ರೊ. ರಾಜು ಆಲಗೂರ, ಅಬ್ದುಲ್ ಹಮೀದ್ ಮುಶ್ರೀಪ್ ಮತ್ತೀತರ ನಾಯಕರು ಹೇಳಿದರು.
ಭಾರತ ಜೊಡೊ ಯಾತ್ರೆಯಲ್ಲಿ ವಿಜಯಪುರ ನಗರ ಮತಕ್ಷೇತ್ರದ ಪ್ರತಿಯೊಂದು ವಾರ್ಡಿನ ಮುಖಂಡರುಗಳು, ಕಾರ್ಯಕರ್ತರುಗಳು, ಭಾಗವಹಿಸಿದ್ದರು.
ಈ ಯಾತ್ರೆಯಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಾಂತಾ ನಾಯಕ, ಜಿಲ್ಲಾ ಸಂಚಾಲಕ ಮಹ್ಮದ್ ರಪೀಕ್ ಟಪಾಲ ಎಂಜಿನಿಯರ್, ಶ್ರೀದೇವಿ ಉತ್ಲಾಸಕರ, ಜಿಲ್ಲಾ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ, ಚಾಂದಸಾಬ ಗಡಗಲಾವ, ಮಹಾದೇವಿ ಗೋಕಾಕ, ವಿಜಯಪುರ ನಗರ ಬ್ಲಾಕ್ ಅಧ್ಯಕ್ಷ ಜಮೀರ್ ಅಹ್ಮದ್ ಬಕ್ಷಿ, ಜಲನಗರ ಬ್ಲಾಕ್ ಅಧ್ಯಕ್ಷೆ ಆರತಿ ಶಹಾಪೂರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವಿದ್ಯಾರಾಣಿ ತುಂಗಳ, ಜಿಲ್ಲಾ ಕಿಸಾನ್ ಘಟಕದ ಅಧ್ಯಕ್ಷ ಬಾಪೂಗೌಡ ಪಾಟೀಲ, ರಾಜ್ಯ ಕಿಸಾನ ಘಟಕದ ಕಾರ್ಯದರ್ಶಿ ಶಹಜಹಾನ್ ದುಂಡಸಿ, ಪ್ರಧಾನ ಕಾರ್ಯದರ್ಶಿ ಶಬ್ಬೀರ ಜಾಗೀರದಾರ, ವಸಂತ ಹೊನಮೊಡೆ, ನಾಗಠಾಣ ಬ್ಲಾಕ್ ಅಧ್ಯಕ್ಷ ಶಹಜಹಾನ್ ಮುಲ್ಲಾ, ಉಮಾ ಪಾಟೀಲ, ಮಹಾನಗರ ಪಾಲಿಕೆಯ ಮಾಜಿ ಮೇಯರ್ ಸಜ್ಜಾದೇ ಪೀರಾ ಮುಶ್ರೀಪ್, ಅಬ್ದುಲ್ ರಜಾಕ್ ಹೋರ್ತಿ, ಜಮೀರ್ ಅಹ್ಮದ್ ಬಾಂಗಿ, ಶಪೀಕ್ ಬಗದಾದಿ, ಮೈನುದ್ದೀನ ಬೀಳಗಿ, ಇದ್ರೂಷ್ ಬಕ್ಷಿ, ಹಾಜೀಂ ಇನಾಮದಾರ, ಬಬಲೂ ಪೀರಜಾದೆ, ಇಪ್ರಾನ್ ಶೇಖ, ಕೈಸರ್ ಇನಾಮದಾರ, ಹೈದರ ಅಲಿ ನಧಾಪ್, ಅಬ್ದುಲ್ ಖಾದರ್ ಖಾದೀಂ, ಆಬೀದ್ ಸಂಗಮ, ರಾಹುಲ್ ರಾಠೋಡ, ವಿನಾಯಕ ಶಹಾಪೂರ, ಜಮಖಂಡಿ ಸದ್ದಾಂ, ನಾಡೆವಾಲೆ, ಅಕ್ರಂ ಮಾಶಾಳಕರ, ಧನರಾಜ. ಎ, ಸವಿತಾ ಧನರಾಜ, ರವೀಂದ್ರ ಜಾಧವ, ವಿಜಯಕುಮಾರ ಘಾಟಗೆ, ಶರಣಪ್ಪ ಯಕ್ಕುಂಡಿ, ಅಸ್ಫಾಕ್ ಮನಗೂಳಿ, ಇಲಿಯಾಸ ಸಿದ್ದಕಿ, ಆಸ್ಮಾ ಕಾಲೇಬಾಗ, ದೀಪಾ ಕಂಬಾರ, ಮಂಜುಳಾ ಜಾಧವ, ರುಕ್ಮೀಣಿ ರಾಠೋಡ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.