ವಿಜಯಪುರ: ಬಸವ ನಾಡಿನಲ್ಲಿ ಮತ್ತೆ ಭೂಕಂಪನ ಸಂಭವಿಸಿದೆ.
ಶನಿವಾರ ರಾತ್ರಿ ವಿಜಯಪುರ ತಾಲೂಕೊನ ಮದಭಾವಿ ಬಳಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದ್ದು, 3.5 ತೀವ್ರತೆಯ ಭೂಕಂಪನ ದಾಖಲಾಗಿತ್ತು.
ಈಗ ಸಂಜೆ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿ ಸುತ್ತಮುತ್ತ ಭೂಕಂಪನ ಸಂಭವಿಸಿದೆ. ಈ ಭೂಕಂಪನದ ಕೇಂದ್ರ ಬಿಂದು ಉಕ್ಕಲಿ ಗ್ರಾಮದ ವಾಯುವ್ಯಕ್ಕೆ 1.30 ಕಿ. ಮೀ. ದೂರದಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ:
Madabhavi Epicenter: 3.5 ತೀವ್ರತೆ, ಮದಭಾವಿ ಬಳಿ ಭೂಕಂಪನ ಕೇಂದ್ರ ಬಿಂದು-
3.5 ತೀವ್ರತೆಯ ಭೂಕಂಪನ ಇದಾಗಿದ್ದು, ಭೂಮಿಯ 5 ಕೀ. ಮೀ. ಆಳದಲ್ಲಿ ಭೂಮಿ ಕಂಪಿಸಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾಹಿತಿ ನೀಡಿದ್ದಾರೆ.
ಸಂ. 6.27ರ ಸುಮಾರಿಗೆ ಭೂಮಿಯೊಳಗಿಂದ ಭಾರಿ ಶಬ್ದ ಕೇಳಿ ಬಂದಿದ್ದು ಭೂಮಿ ಕಂಪಿಸಿದ ಅನುಭವವಾಗಿದೆ ಉಕ್ಕಲಿ ಗ್ರಾಮದ ರಾಹುಲ ಕಲಗೊಂಡ ಬಸವ ನಾಡು ವೆಬ್ ಗೆ ಮಾಹಿತಿ ನೀಡಿದ್ದಾರೆ.