Temple Prasad: ಅಡವಿಶಂಕಲಿಂಗ ದೇವಸ್ಥಾನದಲ್ಲಿ ಕಳೆದ 29 ವಾರದಿಂದ ಪ್ರತಿ ಸೋಮವಾರ ಸದ್ದಿಲ್ಲದೇ ನಡೆಯುತ್ತಿದೆ ಭಕ್ತರಿಂದ ಪ್ರಸಾದ ವಿತರಣೆ
ವಿಜಯಪುರ: ಬಸವ ನಾಡು ವಿಜಯಪುರ ನಗರದ ಅಡವಿ ಶಂಕರಲಿಂಗ ದೇವಸ್ಥಾನದಲ್ಲಿ ಕಳೆದ 29 ವಾರಗಳಿಂದ ಪ್ರತಿ ಸೋಮವಾರ ಸದ್ದಿಲ್ಲದೇ ಭಕ್ತರ ತಂಡವೊಂದು ಪ್ರಸಾದ ವಿತರಿಸುವ ಮೂಲಕ ದೇವರ ಸೇವೆ ಮಾಡುತ್ತಿದೆ. ಉದ್ಯಮಿ ಉಮಾಕಾಂತ ಲೋಣಿ ಅವರು 7ನೇ ಮಾರ್ಚ್ 2002 ರಿಂದ ಈ ಸೇವೆ ಆರಂಭಿಸಿದ್ದಾರೆ. ಪ್ರತಿ ಸೋಮವಾರಕ್ಕೊಮ್ಮೆ ಉಮಾಕಾಂತ ಲೋಣಿ ಅವರ ಅಧ್ಯಕ್ಷತೆಯಲ್ಲಿ ಅವರ ಸ್ನೇಹಿತರು ಕೂಡಿಕೊಂಡು ಶ್ರೀ ಅಡವಿಶಂಕರಲಿಂಗ ಅನ್ನದಾಸೋಹ ಸಮಿತಿ ಹೆಸರಿನಲ್ಲಿ ಈ ಪ್ರಸಾದ ವಿತರಣೆ ಮಾಡುತ್ತಿದ್ದಾರೆ. ಪ್ರತಿ ಸೋಮವಾರ ಬೆಳಿಗ್ಗೆ ದೇವಸ್ಥಾನಕ್ಕೆ […]
Tremor Felt: ಗುಮ್ಮಟ ನಗರಿಯಲ್ಲಿ ಮತ್ತೆ ನಡುಗಿದ ಭೂಮಿ- ಭೂಕಂಪನ ಅನುಭವ
ವಿಜಯಪುರ: ವಿಜಯಪುರ ನಗರದಲ್ಲಿ ರಾತ್ರಿ 9.23ಕ್ಕೆ ಮತ್ತೆ ಭೂಕಂಪನದ ಅನುಭವವಾಗಿದೆ. ವಿಜಯಪುರ ನಗರದ ಆದರ್ಶ ನಗರ, ಜಲನಗರ ಸೇರಿದಂತೆ ನಾನಾ ಕಡೆಗಳಲ್ಲಿ ಈ ಅನುಭವವಾಗಿದೆ. ಭೂಮಿಯೊಳಗಿಂದ ಶಬ್ದ ಕೇಳಿ ಬಂದಿದ್ದು, ಭೂಮಿ ನಡುಗಿದ ಅನುಭವವಾಗಿದೆ. ಆದರೆ, ಇತರ ತೀವ್ರತೆ, ಕೇಂದ್ರಬಿಂದು ಮತ್ತು ಇದು ಭೂಕಂಪನ ಹೌದೋ ಅಲ್ವೋ ಎಂಬುದನ್ನು ವಿಜಯಪುರ ಜಿಲ್ಲಾಡಳಿತ ಇನ್ನಷ್ಟೇ ದೃಢಪಡಿಸಬೇಕಿದೆ.
Bar Council: ವಿಜಯಪುರ ಬಾರ್ ಅಸೋಸಿಯೇಶನ್ ಅಧ್ಯಕ್ಷರಾಗಿ ಅಧ್ಯಕ್ಷರಾಗಿ ಈರಣ್ಣ ಜಿ. ಚಗಶೆಟ್ಟಿ, ಗೌರವ ಕಾರ್ಯದರ್ಶಿಯಾಗಿ ಎ. ಎಚ್. ಜೈನಾಪುರ ಆಯ್ಕೆ- ಉಳಿದ ಪದಾಧಿಕಾರಿಗಳ ಮಾಹಿತಿ ಇಲ್ಲಿದೆ
ವಿಜಯಪುರ: ವಿಜಯಪುರ ಬಾರ್ ಅಸೋಸಿಯೇಶನ್ ನೂತನ ಅಧ್ಯಕ್ಷರಾಗಿ ಈರಣ್ಣ ಜಿ. ಚಿಗಶೆಟ್ಟಿ ಆಯ್ಕೆಯಾಗಿದ್ದಾರೆ. ಉಳಿದಂತೆ ಸಂಜೀವ ಬಿ. ಜಹಾಗೀರದಾರ(ಉಪಾಧ್ಯಕ್ಷ), ಎ. ಎಜಚ್. ಜೈನಾಪುರ(ಗೌರವ ಕಾರ್ಯದರ್ಶಿ), ಯು. ಎಂ. ಆಲಗೂರ(ಜಂಟಿ ಕಾರ್ಯದರ್ಶಿ), ವಿ. ಎಸ್. ಕಾರ್ಯದರ್ಶಿ(ವಾಚನಾಲಯ ಕಾರ್ಯದರ್ಶಿ), ಎಲ್. ಎಚ್. ಮುಜಾವರ, ಪಿ. ಎಂ. ಪೋಳ, ಎಚ್. ಎಂ. ದೊಡಮನಿ, ಡಾ. ಎಸ್. ಆರ್. ತಳೇವಾಡ(ಪಾಟೀಲ) ಮತ್ತು ವಿ. ಎಸ್. ರಾಠೋಡ(ಎಲ್ಲರೂ ಆಡಳಿತ ಮಂಡಳಿ ಸದಸ್ಯರು) ಆಯ್ಕೆಯಾಗಿದ್ದಾರೆ. ಈ ಕುರಿತು ಚುನಾವಣಾಧಿಕಾರಿಯಾಗಿದ್ದ ಆರ್. ಎಸ್. ನಂದಿ ಆಯ್ಕೆಯನ್ನು ಪ್ರಕಟಿಸಿದ್ದಾರೆ.
Earthquake Again: ಗುಮ್ಮಟ ನಗರಿಯಲ್ಲಿ ಮತ್ತೆ ಭೂಕಂಪನ- ತೀವ್ರತೆ ಎಷ್ಟು ಗೊತ್ತಾ?
ವಿಜಯಪುರ: ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಸತತ ಮೂರನೇ ದಿನವೂ ಭೂಕಂಪನ ಅನುಭವವಾಗಿದೆ. ಶನಿವಾರ ವಿಜಯಪುರ ನಗರದಲ್ಲಿ ಇದು ಅನುಭವಕ್ಕೆ ಬಂದಿದ್ದರೆ, ರವಿವಾರ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯಲ್ಲಿ ಭೂಕಂಪನ ಸಂಭವಿಸಿತ್ತು. ಈಗ ಮಧ್ಯಾಹ್ನ ಮತ್ತೆ ಗುಮ್ಮಟ ನಗರಿ ವಿಜಯಪುರದಲ್ಲಿ ಭೂಕಂಪನ ಉಂಟಾಗಿದೆ. ಸಂ. 4.26ಕ್ಕೆ ಈ ಭೂಕಂಪ ಉಂಟಾಗಿದೆ. ಭೂಮಿಯಿಂದ 10 ಕಿ. ಮೀ. ಆಳದಲ್ಲಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 2.6 ರಷ್ಟು ತೀವ್ರತೆಯ ಭೂಕಂಪನ ದಾಖಲಾಗಿದೆ. ಈ ಭೂಕಂಪದ ಕೇಂದ್ರ ಬಿಂದು ಬಸವನ […]
Savarkar Babaleshwar: ಬಿಜೆಪಿ ವರ್ತನೆಗೆ ಕಾಂಗ್ರೆಸ್ ಮುಖಂಡ ಸಂಗಮೇಶ ಬಬಲೇಶ್ವರ ಆಕ್ರೋಶ
ವಿಜಯಪುರ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾವರ್ಕರ ಫೋಟೋ ಅಂಟಿಸಿದ ಘಟನೆಯನ್ನು ಕಾಂಗ್ರೆಸ್ ಮುಖಂಡ ಸಂಗಮೇಶ ಬಬಲೇಶ್ವರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಸಾವರ್ಕರ್ ಭಾವಚಿತ್ರವನ್ನ ಕಾಂಗ್ರೆಸ್ ಕಚೇರಿಗೆ ಅಂಟಿಸಿರುವುದು ನಾಚಿಕೆಗೇಡಿನ ಸಂಗತಿ. ಇತಿಹಾಸವನ್ನು ಅರಿತವರು ಇತಿಹಾಸವನ್ನು ಸೃಷ್ಟಿ ಮಾಡುತ್ತಾರೆ. ಇತಿಹಾಸವನ್ನು ತಿರುಚಲು ಹೊರಟವರು ಇಂಥ ಅತಿರೇಕದ ವರ್ತನೆಗಳನ್ನ ಮಾಡುವುದರ ಮೂಲಕ ಸಮಾಜದಲ್ಲಿ ಅಶಾಂತಿಯನ್ನು ಉಂಟು ಮಾಡುತ್ತಾರೆ. ಸಾವರ್ಕರ್ ಭಾವಚಿತ್ರವನ್ನ ಕಾಂಗ್ರೆಸ್ ಕಚೇರಿಗೆ ಅಂಟಿಸಿದವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು ಎಂದು ಆವರು ಆಗ್ರಹಿಸಿದ್ದಾರೆ. […]
Savarkar MB Patil: ಬಿಜೆಪಿ ಚಿಲ್ಲರೆ ರಾಜಕಾರಣ ಮುಂದುವರೆಸಿದೆ- ಎಂ. ಬಿ. ಪಾಟೀಲ ಕಿಡಿ
ವಿಜಯಪುರ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾವರ್ಕರ ಭಾವಚಿತ್ರ ಅಂಟಿಸಿದ ಘಟನೆಯನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಖಂಡಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾರ್ವಕರ್ ಭಾವಚಿತ್ರ ಅಂಟಿಸುವ ಮೂಲಕ ಬಿಜೆಪಿ ತನ್ನ ಚಿಲ್ಲರೆ ರಾಜಕಾರಣವನ್ನು ಮುಂದುವರೆಸಿದೆ ಎಂದು ಕಿಡಿಕಾರಿದ್ದಾರೆ. ರಾಜ್ಯ ಪ್ರವಾಸ ಕೈಗೊಂಡಿರುವ ಅವರು, ದಾವಣಗೆರೆಯಲ್ಲಿ ಈ ಕುರಿತು ಹೇಳಿಕೆ ನೀಡಿದ್ದಾರೆ. ಈ ಹಿಂದೆ ಸ್ವಾಮಿವಿವೇಕಾನಂದ, ನೇತಾಜಿ ಸುಭಾಷಚಂದ್ರ ಬೋಸ್ ಮತ್ತು ಭಗತ್ […]
Alagur Action: ಜಿಲ್ಲಾ ಕಾಂಗ್ರೆಸ್ ಕಚೇರಿ ಮೇಲೆ ಸಾರರ್ಕರ ಫೋಟೋ ಅಂಟಿಸಿದವರನ್ನು ಕೂಡಲೇ ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು- ಪ್ರೊ. ರಾಜು ಆಲಗೂರ
ವಿಜಯಪುರ: ಜಿಲ್ಲಾ ಕಾಂಗ್ರೆಸ್ ಕಚೇರಿಯ ಗೋಡೆ ಮತ್ತು ಬಾಗಿಲುಗಳಿಗೆ ಸಾವರ್ಕರ್ ಅವರ ಫೋಟೋಗಳನ್ನು ಅಂಟಿಸಿದವರನ್ನು ಕೂಡಲೇ ಬಂಧಿಸಿ ಅವರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ವಿಜಯಪುರ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪ್ರೊ. ರಾಜು ಆಲಗೂರ ಆಗ್ರಹಿಸಿದ್ದಾರೆ. ಈ ಘಟನೆ ತಿಳಿದ ನಂತರ ಕಚೇರಿಗೆ ಆಗಮಿಸಿದ ಅವರು ಕಾಂಗ್ರೆಸ್ ಮುಖಂಡ ಹಮೀದ ಮುಶ್ರಿಫ್ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿದ ಪ್ರೊ. ರಾಜು ಆಲಗೂರ, ಸಾವರ್ಕರ್ ಫೋಟೊ ಅಂಟಿಸಿದ ಬಿಜೆಪಿ ಕಾರ್ಯಕರ್ತನ ವಿರುದ್ಧ […]
Savarkar Photo Hugar: ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟೋ ಅಂಟಿಸಿದ್ದು ನಾವೇ- ಬಸವರಾಜ ಹೂಗಾರ
ವಿಜಯಪುರ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟವನ್ನು ಬಿಜೆಪಿ ಯುಮ ಮೋರ್ಚಾದವರೇ ಅಂಟಿಸಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಹೂಗಾರ ತಿಳಿಸಿದ್ದಾರೆ. ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಪೋಟೋ ಅಂಟಿಸಿದ್ದು ನಾವೇ. ಅದರಲ್ಲಿ ಪ್ರಶ್ನೆಯೇ ಇಲ್ಲ. ಹುಬ್ಬಳ್ಳಿ ಮತ್ತು ಶಿವಮೊಗ್ಗದಲ್ಲಿ ನಡೆದ ಘಟನೆಗೆ ಪ್ರತಿಯಾಗಿ ನಾವು ಪೋಟೋ ಅಂಟಿಸಿದ್ದೇವೆ. 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಹುಬ್ಬಳ್ಳಿಯಲ್ಲಿ ಸಾವರ್ಕರ್ ಅವರ ಪೋಟೋ ಸುಟ್ಟಿದ್ದರು. ಈ ಮೂಲಕ ಸಾವರ್ಕರ್ […]
Savarkar Photo: ಕಾಂಗ್ರೆಸ್ ಕಚೇರಿ ಹೊರಗೋಡೆಗಳಿಗೆ ಸಾವರ್ಕರ್ ಫೋಟೋ ಅಂಟಿಸಿದ ಕಿಡಿಗೇಡಿಗಳು
ವಿಜಯಪುರ: ರಾಜ್ಯದಲ್ಲಿ ಸಾವರ್ಕರ ವಿವಾದ ತೀವ್ರವಾಗಿದ್ದು, ಕಿಡಗೇಡಿಗಳು ಕಾಂಗ್ರೆಸ್ ಕಚೇರಿ ಗೋಡೆಗೆ ಸಾವರ್ಕರ ಫೋಟೋ ಅಂಟಿಸಿದ ಘಟನೆ ಗುಮ್ಮಟ ನಗರಿ ವಿಜಯಪುರದಲ್ಲಿ ನಡೆಸಿದೆ. ವಿಜಯಪುರ ನಗರದ ಬಾಗಲಕೋಟೆ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಕಿಡಿಗೇಡಿಗಳು ವೀರ ಸಾವರ್ಕರ ಅವರ ಫೋಟೋ ಅಂಟಿಸಿ ಪರಾರಿಯಾಗಿದ್ದಾರೆ. ಕಾಂಗ್ರೆಸ್ ಕಚೇರಿಯ ಹೊರಗಡೆ ಗೋಡೆಗೆ ನಾನಾ ಕಡೆ ಸಾವರ್ಕರ ಫೋಟೋ ಅಂಟಿಸಲಾಗಿತ್ತು. ರವಿವಾರವತಡರಾತ್ರಿ ಹತ್ತಾರು ಫೋಟೋಗಳನ್ನು ಅಂಟಿಸಿದ ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ಕಾಂಗ್ರೆಸ್ ಕಚೇರಿಯ ಕಟ್ಟಡ, ಬಾಗಿಲು, ಬೋರ್ಡ್ ಗೆ ಸಾವರ್ಕರ ಫೋಟೋ ಅಂಟಿಸಲಾಗಿತ್ತು. […]