ವಿಜಯಪುರ: ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಫೋಟವನ್ನು ಬಿಜೆಪಿ ಯುಮ ಮೋರ್ಚಾದವರೇ ಅಂಟಿಸಿದ್ದಾರೆ ಎಂದು ಬಿಜೆಪಿ ಯುವ ಮೋರ್ಚಾ ಜಿಲ್ಲಾ ಉಪಾಧ್ಯಕ್ಷ ಬಸವರಾಜ ಹೂಗಾರ ತಿಳಿಸಿದ್ದಾರೆ.
ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಕಚೇರಿಗೆ ಸಾವರ್ಕರ್ ಪೋಟೋ ಅಂಟಿಸಿದ್ದು ನಾವೇ. ಅದರಲ್ಲಿ ಪ್ರಶ್ನೆಯೇ ಇಲ್ಲ. ಹುಬ್ಬಳ್ಳಿ ಮತ್ತು ಶಿವಮೊಗ್ಗದಲ್ಲಿ ನಡೆದ ಘಟನೆಗೆ ಪ್ರತಿಯಾಗಿ ನಾವು ಪೋಟೋ ಅಂಟಿಸಿದ್ದೇವೆ. 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ಪಕ್ಷ ಹುಬ್ಬಳ್ಳಿಯಲ್ಲಿ ಸಾವರ್ಕರ್ ಅವರ ಪೋಟೋ ಸುಟ್ಟಿದ್ದರು. ಈ ಮೂಲಕ ಸಾವರ್ಕರ್ ಅವರಿಗೆ ಕಾಂಗ್ರೆಸ್ ಅವಮಾನ ಮಾಡಿತ್ತು. ಕಾಂಗ್ರೆಸ್ ಇಂಥ ವಿವಾದಗಳನ್ನು ಸೃಷ್ಟಿಸುವ ಕೆಲಸವನ್ನು ಪದೇ ಪದೇ ಮಾಡುತ್ತಿದೆ. ಕಾಂಗ್ರೆಸ್ ನವರು ಸಾವರ್ಕರ್ ಪೋಟೋ ಸುಟ್ಟಿದ್ದಕ್ಕಿಂತ ನಾವು ಸಾವರ್ಕರ್ ಪೋಟೋ ಅಂಟಿಸಿದ್ದು ದೊಡ್ಡ ಅಪರಾಧವಲ್ಲ ಎಂದು ಹೇಳಿದರು.
ಸಾವರ್ಕರ್ ಅವರನ್ನು ಕಾಂಗ್ರೆಸ್ ನವರು ಪ್ರಚಾರದ ವಸ್ತುವನ್ನಾಗಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಮಾಡಲು ಕೆಲಸವಿಲ್ಲದ ಕೈ ಪಕ್ಷದವರು ಸಾವರ್ಕರ್ ಬಗ್ಗೆ ಮಾತನಾಡಿ ಪ್ರಚಾರ ಪಡೆಯಲು ಮಾಡುತ್ತಿದ್ದಾರೆ. ಸಾರ್ವಕರ್ ಅವರನ್ನು ಗೌರವಿಸುವ ಕೆಲಸ ಮಾಡಿ, ಅವರ ಬಗ್ಗೆ ತಿಳಿದುಕೊಳ್ಳಿ ಎಂದು ಅವರು ಸಲಹೆ ನೀಡಿದರು
ಕಾಂಗ್ರೆಸ್ ನವರು ಸೃಷ್ಟಿ ಮಾಡೋ ವಿವಾದಕ್ಕೆ ತಿಲಾಂಜಲಿ ಇಡಲು ನಾವು ಸಾವರ್ಕರ್ ಪೊಟೋ ಅಂಟಿಸಿದ್ದೇವೆ. ಹುಬ್ಬಳ್ಳಿಯಲ್ಲಿ ಸಾವರ್ಕರ ಫೋಟೋ ಸುಟ್ಟಿದ್ದನ್ನು ಕಾಂಗ್ರೆಸ್ ಸಮರ್ಥನೆ ಮಾಡಿಕೊಳ್ಳುತ್ತಿರವುದು ಸರಿಯಲ್ಲ. ಸಾವರ್ಕರ್ ಅವರ ಕೇವಲ ಆರು ಪತ್ರಗಳನ್ನು ಇಟ್ಟುಕೊಂಡು ಕಾಂಗ್ರೆಸ್ ಮಾತನಾಡುವುದು ಸರಿಯಲ್ಲ. ಸಾವರ್ಕರ್ ಬಗ್ಗೆ ಕಾಂಗ್ರೆಸ್ ನವರು ಮಾತನಾಡುವುದನ್ನು ಇಲ್ಲಿಗೆ ನಿಲ್ಲಿಸಿದರೆ ಸರಿ. ಇಲ್ಲವಾದರೆ ಇಂದು ಅವರ ಕಚೇರಿಗೆ ಸಾವರ್ಕರ್ ಪೋಟೋ ಹೋಗಿದೆ, ನಾಡಿದ್ದು ಅವರ ಮನೆಗೆ ಹೋಗುತ್ತದೆ. ಅದರಲ್ಲಿ ನೋ ಡೌಟ್ ಎಂದು ಬಸವರಾಜ ಹೂಗಾರ ಎಚ್ಚರಿಕೆ ನೀಡಿದರು.
ಇಂಥ ಲಜ್ಜೆಗೇಡಿತನ, ಹೇಯ ಕೆಲಸ ಮಾಡುತ್ತಿರೋ ಕಾಂಗ್ರೆಸ್ ಗೆ ತಕ್ಕ ಪಾಠ ಕಲಿಸುತ್ತೇವೆ. ಸಾರ್ವಕರ್ ವಿರೋಧಿ ಮಾತನಾಡುತ್ತಿರೋ ಕಾಂಗ್ರೆಸ್ ವಿರುದ್ದ ಹೋರಾಟ ಮಾಡುತ್ತೇವೆ. ಮಹಾತ್ಮಾ ಗಾಂಧಿ, ನೆಹರು ಇಂದಿರಾಗಾಂಧಿ ಕುರಿತು ಪರ ವಿರೋಧ ಚರ್ಚೆ ಇದ್ದರೂ ಅವರನ್ನು ಗೌರವಿಸುತ್ತೇವೆ. ಸಾವರ್ಕರ್ ರಾಷ್ಟ್ರಕ್ಕಾಗಿ ಹೋರಾಟ ಮಾಡಿದವರು, ಅವರ ಹೆಸರು ಬಂದರೆ ಆರ್ ಎಸ್ ಎಸ್ ಎನ್ನುತ್ತಾರೆ. ನಾವೇನು ಮಹಾತ್ಮಾ ಗಾಂಧೀಜಿ ಹೆಸರು ಬಂದರೆ ಕಾಂಗ್ರೆಸ್ ಎಂದು ಹೇಳುತ್ತೇವಾ? ಅಂಥ ಪ್ರಶ್ನೆಯೇ ಇಲ್ಲ. ಅವರು ನಮ್ಮ ರಾಷ್ಟ್ರದವರು ಗೌರವಿಸುತ್ತೇವೆ ಎಂದು ಹೇಳಿದರು.