Savarkar MB Patil: ಬಿಜೆಪಿ ಚಿಲ್ಲರೆ ರಾಜಕಾರಣ ಮುಂದುವರೆಸಿದೆ- ಎಂ. ಬಿ. ಪಾಟೀಲ ಕಿಡಿ

ವಿಜಯಪುರ: ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾವರ್ಕರ ಭಾವಚಿತ್ರ ಅಂಟಿಸಿದ ಘಟನೆಯನ್ನು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಖಂಡಿಸಿದ್ದಾರೆ.

ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಸಾರ್ವಕರ್ ಭಾವಚಿತ್ರ ಅಂಟಿಸುವ ಮೂಲಕ ಬಿಜೆಪಿ ತನ್ನ ಚಿಲ್ಲರೆ ರಾಜಕಾರಣವನ್ನು ಮುಂದುವರೆಸಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯ ಪ್ರವಾಸ ಕೈಗೊಂಡಿರುವ ಅವರು, ದಾವಣಗೆರೆಯಲ್ಲಿ ಈ ಕುರಿತು ಹೇಳಿಕೆ ನೀಡಿದ್ದಾರೆ.  ಈ ಹಿಂದೆ ಸ್ವಾಮಿವಿವೇಕಾನಂದ, ನೇತಾಜಿ ಸುಭಾಷಚಂದ್ರ ಬೋಸ್ ಮತ್ತು ಭಗತ್ ಸಿಂಗ್‍ರನ್ನು ತನ್ನ ಆದರ್ಶ ಎಂದು ಬಿಂಬಿಸಿದ್ದ ಬಿಜೆಪಿ, ಇಂದು ಆ ಮಹಾನ್ ಪುರುಷರ ನೈಜ ವಿಚಾರಗಳು ತಿಳಿದ ನಂತರ ಅವರನ್ನು ಕೈಬಿಟ್ಟಿದೆ.  ಈಗ ಸಾರ್ವಕರ ಅವರನ್ನು ವೀರ, ಧೀರ ಎಂದು ಬಿಂಬಿಸುತ್ತ ಹೊರಟಿದೆ. ಬ್ರಿಟಿಷರಿಗೆ ಕ್ಷಮಾಪಣೆ ಕೇಳಿ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟ ನಕಲಿ ದೇಶ ಭಕ್ತರು ‘ವೀರ ಹೇಗಾಗುತ್ತಾರೆ? ಎಂದು ಪ್ರಶ್ನಿಸಿದ್ದಾರೆ.

ರಾಜ್ಯ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳನ್ನು ಪರಿಹರಿಸುವಲ್ಲಿ ವಿಫಲವಾಗಿರುವ ಈ ಸರಕಾರ ಮತ್ತು ಬಿಜೆಪಿ ಪಕ್ಷ ಇಂತಹ ಚಿಲ್ಲರೆ ಕೆಲಸಗಳ ಮೂಲಕ ಮಾಧ್ಯಮ ಹಾಗೂ ಜನರನ್ನು ಬೇರೆಡೆ ಸೆಳೆಯುವ ಕ್ಷುಲ್ಲಕ ಕಾರ್ಯದಲ್ಲಿ ನಿರತರಾಗಿದ್ದಾರೆ ಎಂದು ಎಂ.ಬಿ.ಪಾಟೀಲ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Leave a Reply

ಹೊಸ ಪೋಸ್ಟ್‌