Election Contest: ಟಿಕೆಟ್ ನೀಡದಿದ್ದರೂ ಚುನಾವಣೆಗೆ ಸ್ಪರ್ಧಿಸುವೆ- ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ

ವಿಜಯಪುರ: ಬಿಜೆಪಿಯಿಂದ ಟಿಕೆಟ್ ನೀಡದಿದ್ದರೂ ಮುಂಬರುಚ ಸಾರ್ವತ್ರಿಕ ಚುನಾವಣೆಯಲ್ಲಿ ಸ್ಪರ್ಧಿಸುತ್ತೇನೆ ಎಂದು ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ಮುಖಂಡ ಅಪ್ಪು ಪಟ್ಟಣಶೆಟ್ಟಿ ಸ್ಪಷ್ಟಪಡಿಸಿದ್ದಾರೆ.

ವಿಜಯಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.

ಕಳೆದ 30 ವರ್ಷಗಳಿಂದ ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವೆ. ಸಾರ್ವಜನಿಕರ ಸಮಸ್ಯೆ, ಗಣೆಶೋತ್ಸವದ ಹೋರಾಟ, ಪರಿಸರ ಕಾಳಜಿಯ ಹೋರಾಟಗಳು, ಜಾತ್ರಾ ಮಹೋತ್ಸವದ ವಿಚಾರವಾಗಿ ನಡೆದ ಎಲ್ಲ ಹೋರಾಟಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡಿರುವೆ‌ ಎಂದು ಅವರು ತಿಳಿಸಿದರು.

ಕಳೆದ ಬಾರಿ ನನಗೆ ಬಿಜೆಪಿಯಿಂದ ಟಿಕೇಟ್ ಕೊಡಲಿಲ್ಲ. ವಿಜಯಪುರ ನಗರ ಮತಕ್ಷೇತ್ರಕ್ಕೆ ನಾನು ಬಿಜೆಪಿಯಿಂದ ಟಿಕೆಟ್ ಕೇಳಿದ್ದೆ. ನನಗೆ ಟಿಕೇಟ್ ಕೊಡದಿದ್ದರೂ ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷದಲ್ಲಿ ಕೆಲಸ ಮುಂದುವರೆಸಿದ್ದೇನೆ.

ಈ ಬಾರಿ ವಿಧಾನ ಸಭೆ ಚುಬಾವಣೆಯಲ್ಲಿ ಸ್ಪರ್ಧಿಸುವಂತೆ ಬಿಜೆಪಿ ಕಾರ್ಯಕರ್ತರ ಒತ್ತಾಯವಿದೆ. ಕಾರ್ಯಕರ್ತರ ಒತ್ತಾಯದ ಹಿನ್ನಲೆ ಮೊದಲಿಗೆ ಬಿಜೆಪಿಯಿಂದ ಟಿಕೇಟ್ ಕೇಳುತ್ತೇನೆ. 30 ವರ್ಷ ಪಕ್ಷದಲ್ಲಿ ಮಾಡಿದ ಕೆಲಸಗಳನ್ನು ಹೈಕಮಾಂಡ್ ಗಮನಕ್ಕೆ ತಂದು ಟಿಕೆಟ್ ‌ಕೇಳುತ್ತೇನೆ ಎಂದು ಅಪ್ಪು ಪಟ್ಟಣಶೆಟ್ಟಿ ತಿಳಿಸಿದರು.

ಬಿಜೆಪಿಯಿಂದ ನಗರ ಮತಕ್ಷೇತ್ರಕ್ಕೆ ನನಗೆ ಟಿಕೇಟ್ ನೀಡದೇ ಹೋದರೂ ಸ್ಪರ್ದಿಸುತ್ತೇನೆ. ಆದರೆ ಬೇರೆ ಯಾವುದೋ ಪಕ್ಷದಿಂದ ಮಾತ್ರ ಸ್ಪರ್ದಿಸುವುದಿಲ್ಲ. ಕಾರ್ಯಕರ್ತರ ಸಲಹೆ ಸೂಚನೆ ಪಡೆದು ಪಕ್ಷೇತರನಾಗಿ ಸ್ಪರ್ದಿಸುವೆ ಎಂದು ಮಾಜಿ ಸಚಿವರು ಸ್ಪಷ್ಟಪಡಿಸಿದರು.

Leave a Reply

ಹೊಸ ಪೋಸ್ಟ್‌