Egg Throwing Protest: ಸಿದ್ಧರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ- ನಾನಾ ಸಂಘಟನೆಗಳಿಂದ ಪ್ರತಿಭಟನೆ

ವಿಜಯಪುರ: ಮಾಜಿ ಸಿಎಂ ಎಸ್. ಸಿದ್ಧರಾಮಯ್ಯ ಅವರ ವಾಹನದ ಮೇಲೆ ಮೊಟ್ಟೆ ಎಸೆತ ಪ್ರಕರಣ ಖಂಡಿಸಿ ವಿಜಯಪುರ ನಗರದಲ್ಲಿ ನಾನಾ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಹಾಲುಮತ ಸಮಾಜದಿಂದ ಪ್ರತಿಭಟನೆ

ಕೊಡಗು ಜಿಲ್ಲೆಯಲ್ಲಿ ವಿಧಾನ ಸಭೆ ಪ್ರತಿಪಕ್ಷದ ನಾಯಕ ಎಸ್. ಸಿದ್ಧಾರಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಪ್ರಕರಣವನ್ನು ಖಂಡಿಸಿ ವಿಜಯಪುರ ಜಿಲ್ಲಾ ಹಾಲುಮತ ಸಂಘ ಹಾಗೂ ವಿಜಯಪುರ ಜಿಲ್ಲಾ ಕುರುಬರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಬಿಜೆಪಿ ಕಾರ್ಯಕರ್ತರು ನಡೆಸಿದ ಈ ಕೃತ್ಯ ಖಂಡನೀಯ.  ಇಂಥ ಘಟನೆಗಳು ಮರುಕಳಿಸದಂತೆ ಕಟ್ಟುನಿಟ್ಟಿನ ಕೈಗೊಳ್ಳುವಂತೆ ರಾಜ್ಯ ಸರಕಾರಕ್ಕೆ ಎಚ್ಚರಿಕೆ ನೀಡಬೇಕು ಎಂದು ಪ್ರತಿಭಟನೆಯಲ್ಲಿ ಪಾಲ್ಗೋಂಡ ಮುಖಂಡರು ಒತ್ತಾಯಿಸಿದರು.

ಅಲ್ಲದೇ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಈ ಕುರಿತು ಮನವಿ ಪತ್ರವನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಈ ಜಿಲ್ಲಾ ಕುರುಬರ ಸಂಘದ ಅದ್ಯಕ್ಷರಾದ ರಾಜು ಬಿ. ಕಂಬಾಗಿ(ಅರ್ಜುಣಗಿ),  ಪ್ರಧಾನ ಕಾರ್ಯದರ್ಶಿ ಬಸವರಾಜ ಕಾತ್ರಾಳ, ಅಹಿಂದ ಮುಖಂಡರಾದ ಮೋಹನ ಮೇಟಿ, ಬಸವರಾಜ ಕಂಕಣವಾಡಿ, ಸಿದ್ದು ಗೌಡನವರ, ಪ್ರತಿಭಾ ನಾಟೀಕಾರ, ಮಲ್ಲು ಬಿದರಿ, ದೇವಕಾಂತ ಬಿಜ್ಜರಗಿ, ಬೀರಪ್ಪ ಜುಮನಾಳ, ಮಾಳು ಗುಗದಡ್ಡಿ, ಸತೀಶ ಅಡವಿ, ಅರವಿಂದ ಡೋಣೂರ, ಡಿ.ಬಿ. ಹಿರೇಕುರುಬರ, ಮಾಂತೇಶ ರೂಗಿ, ಗುರನಗೌಡ ಪಾಟೀಲ, ಸತೀಶ ವಾಲೀಕಾರ ಮುಂತಾದವರು ಉಪಸ್ಥಿತರಿದ್ದರು.

ಕೊಡಗಿನಲ್ಲಿ ಮೊಟ್ಟೆ ಎಸೆದ ಘಟನೆ ಖಂಡಿಸಿ ವಿಜಯಪುರದಲ್ಲಿ ಜಿಲ್ಲಾ ಕುರುಬರ ಸಂಘ, ರಾಯಣ್ಣ ಯುವಸೇನೆ, ಹಾಲುಮತ ಸಮಾಜದ ಸಂಘಟನೆಗಳ ವತಿಯಿಂದ ಪ್ರತಿಭಟನೆ ನಜೆಸಲಾಯಿತು

ಜಿಲ್ಲಾ ಕುರುಬರ ಸಂಘ, ರಾಯಣ್ಣ ಯುವಸೇನೆ, ಹಾಲುಮತ ಸಮಾಜದ ಸಂಘಟನೆಗಳ ಪ್ರತಿಭಟನೆ

ಈ ಮಧ್ಯೆ, ಪ್ರತ್ಯೇಕವಾಗಿ ಸಾಂಕೇತಿಕವಾಗಿ ಪ್ರತಿಭಟನೆ ನಡೆಸಿದ ವಿಜಯಪುರ: ಜಿಲ್ಲಾ ಕುರುಬರ ಸಂಘ ರಾಯಣ್ಣ ಯುವ ಸೇನೆ ಹಾಗೂ ಹಾಲುಮತ ಸಮಾಜದ ನಾನಾ ಸಂಘಟನೆಗಳು ಗೃಹ ಸಚಿವ ಅರಗ ಜ್ಞಾನೇಂದ್ರ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು.

ಮೊಟ್ಟೆಗಳನ್ನು ಎಸೆದು ಗೂಂಡಾಗಳ ರೀತಿ ವರ್ತಿಸಿರುವ ಬಿಜೆಪಿ ಕಾರ್ಯಕರ್ತರ ವರ್ತನೆಯಿಂದ ರಾಜ್ಯದ ಜನತೆಯಲ್ಲಿ ಭಯದ ವಾತಾವರಣ ಉಂಟಾಗಿದೆ.  ಇಂಥದ ಬಗ್ಗೆ ಮಾಹಿತಿ ಇದ್ದರೂ ಅದನ್ನು ತಡೆಯಲು ವಿಫಲರಾದ ಕೊಡಗು ಎಸ್ಪಿಯನ್ನು ದೀರ್ಘಾವತಿ ರಜೆಯ ಮೇಲೆ ಕಳುಹಿಸಬೇಕು ಎಂದು ಸಂಗೊಳ್ಳಿ ರಾಯಣ್ಣ ಯುವ ಸೇನೆಯ ಸಂಸ್ಥಾಪಕ ಅಧ್ಯಕ್ಷ ದೇವಕಾಂತ ಬಿಜ್ಜರಗಿ ಆಗ್ರಹಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಅಧ್ಯಕ್ಷರಾದ ರಾಜು ಕಂಬಾಗಿ,ಡಿಸಿಸಿ ಬ್ಯಾಂಕಿನ ಮಾಜಿ ನಿರ್ದೇಕ ಬೀರಪ್ಪ ಜುವiನಾಳ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷೆ ಪ್ರಭಾವತಿ ನಾಟಿಕಾರ ಮಾತನಾಡಿ, ರಾಜ್ಯದಲ್ಲಿ ಮತೀಯ ಭಾವನೆ ಕೆರೆಳಿಸವಂತೆ  ಬಿಜೆಪಿ ಕಾರ್ಯಕರ್ತರಿಗೆ ಗ್ರಹ ಸಚಿವರೆ ಕುಮುಕ್ಕು ನೀಡುವ ರೀತಿಯಲ್ಲಿ ವರ್ತಿಸುತ್ತಿದ್ದಾರೆ.  ಕೂಡಲೇ ತಪ್ಪಿತಸ್ಥರ ವಿರುದ್ಧ ಕಠಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.

ಅಲ್ಲದೇ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ ಅವರಿಗೆ ಈ ಕುರಿತು ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮೋಹನ್ ಮೇಟಿ, ಬಂದಗಿ ಸಾಬ್ ಗಸ್ತಿ, ಗುರುನ ಗೌಡ ಪಾಟೀಲ್, ಸುರೇಶ್ ಮಸೂತಿ, ಸತೀಶ್ ಅಡವಿ, ಬಸವರಾಜ್ ಕಂಕಣವಾಡಿ, ಬಸವರಾಜ್ ಕಾತ್ರಾಳ, ಸಿದ್ದು ಗೌಡನವರ್, ಮಾಳಪ್ಪ ಗೂಗ್ದಡ್ಡಿ,ಡಿ.ಬಿ.ಹಿರೆಕುರುಬರ,ಅರವಿಂದ ಡೂಣುರ, ಈರಣ್ಣ ಕಿಚ್ಡಿ, ನೀವರ್ತಿ ಯರನಾಳ, ಹೇಮಕಾಂತ್ ಬಿಜ್ಜರಗಿ, ಅಶೋಕ್ ಬಿಜ್ಜರಗಿ, ಚಂದ್ರಶೇಖರ್ ತೋಳಮಟ್ಟಿ. ಸತೀಶ್ ವಾಲಿಕಾರ್, ಮಲ್ಲು ಪರಸನ್ನವರ್,ಶೀವಾನಂದ ಸಿಂದಗಿ, ಬಾಜಿರಾವ್ ಕರೆ, ಭೀವಾ ಪುಜಾರಿ, ಬಾಭುಶ ಇಮ್ಮಡಿ,ಭೀಮಶಿ ಬರಕಡೆ, ಶಂಕರ್ ಕಾಳೆ, ಸಂಜು ಕರೆ, ಬಾಬು ಹಂಚಿನಾಳ, ಮುಂತಾದವರು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌