Earthquake DC: ಕಪ್ಪು ಶಿಲೆಯ ವಿಜಯಪುರ ಜಿಲ್ಲೆಯಲ್ಲಿ ಭೂಕಂಪನವು ಹಾನಿ ಮಾಡುವುದಿಲ್ಲ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಸ್ಪಷ್ಟನೆ
ವಿಜಯಪುರ: ವಿಜಯಪುರ ಜಿಲ್ಲೆ ಕಪ್ಪು ಶಿಲೆಯಿಂದ ಆವೃತವಾಗಿದ್ದು, ಇದು ಕಡಿಮೆ ಮತ್ತು ಮಧ್ಯಮ ತೀವ್ರತೆಯುಳ್ಳ ವಲಯವಾಗಿದೆ. ಹೀಗಾಗಿ ಈ ರೀತಿಯ ಪ್ರದೇಶಗಳಲ್ಲಿನ ಭೂಕಂಪನಗಳು ಯಾವುದೇ ಹಾನಿ ಸೃಷ್ಟಿಸುವುದಿಲ್ಲವಾದ್ದರಿಂದ ಸಾರ್ವಜನಿಕರು ಭಯಪಡುವ ಅಗತ್ಯವಿರುವುದಿಲ್ಲ ಎಂದು ಜಿಲ್ಲಾಧಿಕಾರಿಗಳಾದ ಡಾ.ವಿಜಯಮಹಾಂತೇಶ ದಾನಮ್ಮನವರು ಅವರು ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ ಪ್ರಕಟಣೆ ನೀಡಿರುವ ಅವರು, ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಮೇಲಿಂದ ಮೇಲೆ ಕಡಿಮೆ ತೀವ್ರತೆ ಉಳ್ಳ ಭೂಕಂಪನ ಸಂಭವಿಸುತ್ತಿದೆ. ಈ ಬಗ್ಗೆ ಆಗಸ್ಟ್ 23ರಂದು ಜಿಲ್ಲಾಡಳಿತದಿಂದ ಜಿಲ್ಲಾ ವಿಪತ್ತು ನಿರ್ವಹಣಾ ಸಭೆ ನಡೆಸಿ […]
Earthquake Karajol: ಬಸವ ನಾಡಿನಲ್ಲಿ ಕೊಳವೆ ಭಾವಿಗಳ ಹೆಚ್ಚಳದಿಂದ ಭೂಕಂಪನ ಉಂಟಾಗುತ್ತಿರುವ ಶಂಕೆಯಿದೆ- ಜಿಲ್ಲಾಡಳಿತ ಕಾರಣ ಪತ್ತೆ ಮಾಡಿಸಬೇಕು- ಉಮೇಶ ಕಾರಜೋಳ
ವಿಜಯಪುರ: ಗುಮ್ಮಟ ನಗರಿಯಲ್ಲಿ ಉಂಟಾಗುತ್ತಿರುವ ಭೂಕಂಪಕ್ಕೆ ಕೊಳವೆ ಭಾವಿಗಳ ಹೆಚ್ಚಳವೇ ಕಾರಣ ಎಂಬ ಶಂಕೆ ಬಲವಾಗಿದ್ದು, ಈ ಕುರಿತು ವಿಜಯಪುರ ಜಿಲ್ಲಾಡಳಿತ ಸ್ಪಷ್ಟ ಕಾರಣ ಪತ್ತೆ ಮಾಡಿ ಜನರಲ್ಲಿ ಉಂಟಾಗಿರುವ ಆಂತಕವನ್ನು ನಿವಾರಣೆ ಮಾಡಬೇಕು ಎಂದು ಬಿಜೆಪಿ ಯುವ ಮುಖಂಡ ಮತ್ತು ಸಮಾಜ ಸೇವಕ ಉಮೇಶ ಕಾರಜೋಳ ಆಗ್ರಹಿಸಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಸವ ನಾಡು ವಿಜಯಪುರ ಜಿಲ್ಲೆಯ ಕೊಲ್ಹಾರದಿಂದ ಮಹಾರಾಷ್ಟ್ರದ ಸೋಲಾಪುರದವರೆಗೆ ಭೂಮಿಯಡಿ ಏಕಶಿಲೆಯಿದೆ. ಆದರೆ, ಬೋರವೆಲ್ ಗಳ ಹೆಚ್ಚಳದಿಂದಾಗಿ ಈ ಏಕಶಿಲೆಗೆ ಧಕ್ಕೆಯಾಗುತ್ತಿದೆ, […]
Earthquake Meeting: ಭೂಕಂಪನ ಹಿನ್ನೆಲೆ- ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಡಿಸಿ ಸಭೆ
ವಿಜಯಪುರ: ವಿಜಯಪುರ ಜಿಲ್ಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ಭೂಕಂಪ ಉಂಟಾಗುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳಾದ ಡಾ. ವಿಜಯಮಹಾಂತೇಶ ಬಿ.ದಾನಮ್ಮನವರ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ನಾನಾ ಇಲಾಖೆಗಳ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಭೂಕಂಪನಕ್ಕೆ ಸಂಬಂಧಿಸಿದಂತೆ ಚರ್ಚಿಸಿದರು. ಈ ವೇಳೆ ಮಾತನಾಡಿದ ಜಿಲ್ಲಾಧಿಕಾರಿಗಳು, ಭೂಗರ್ಭದಲ್ಲಿ ಚಿಕ್ಕ ಪ್ರಮಾಣದಲ್ಲಿ ಆಗುವ ಭೂಕಂಪನಗಳು ಕೆಲವೊಮ್ಮೆ ಗೊತ್ತಾಗುವುದಿಲ್ಲ. ಕೆಲವೊಮ್ಮೆ ಭೂಕಂಪನದ ಬಗ್ಗೆ ಅನುಭವಕ್ಕೆ ಬಂದರೂ ಅದರಿಂದ ಜನತೆಗೆ ತೊಂದರೆಯೂ ಇರುವುದಿಲ್ಲ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಆದರೆ, ಭೂಕಂಪನದ ಬಗ್ಗೆ ನಾನಾ ಸಾಮಾಜಿಕ ಜಾಲತಾಣಗಳಲ್ಲಿ […]
Corporation Category: ವಿಜಯಪುರಕ್ಕೆ ಎಸ್ ಟಿ ಮೇಯರ್, ಹಿಂದುಳಿದ ವರ್ಗ ಬ ಉಪಮೇಯರ್- ಮೀಸಲಾತಿ ಪ್ರಕಟಿಸಿದ ಸರಕಾರ
ಬೆಂಗಳೂರು- ವಿಜಯಪುರ ಸೇರಿದಂತೆ 10 ಮಹಾನಗರ ಪಾಲಿಕೆಗಳ ಮೇಯರ್ ಮತ್ತು ಉಪಮೇಯರ್ ಮೀಸಲಾತಿ ಪಟ್ಟಿಯನ್ನು ಸರಕಾರ ಪ್ರಕಟಿಸಿದೆ. ವಿಜಯಪುರ ಮೇಯರ್ ಸ್ಥಾನ ಎಸ್ಟಿಗೆ ಒಲಿದಿದ್ದರೆ ಉಪಮೇಯರ್ ಸ್ಥಾನ ಹಿಂದುಳಿದ ವರ್ಗ ಬ ಗೆ ಮೀಸಲಿಡಲಾಗಿದೆ. ಈ ಕುರಿತು ಸರಕಾರ ಆದೇಶ ಹೊರಡಿಸಿದೆ. ಉಳಿದ ಮಹಾನಗರ ಮೀಸಲಾತಿ ಪಟ್ಟಿ ಮಾಹಿತಿ ಇಲ್ಲಿದೆ ಬಳ್ಳಾರಿ- ಮೇಯರ್( ಹಿಂದುಳಿದ ವರ್ಗ ಎ ಮಹಿಳೆ), ಉಪಮೇಯರ್(ಸಾಮಾನ್ಯ ಮಹಿಳೆ) ಬೆಳಗಾವಿ- ಮೇಯರ್(ಸಾಮಾನ್ಯ ), ಉಪಮೇಯರ್(ಎಸ್ ಸಿ. ಮಹಿಳೆ), ದಾವಣಗೆರೆ- ಮೇಯರ್(ಸಾಮಾನ್ಯ ಮಹಿಳೆ ), ಉಪಮೇಯರ್(ಹಿಂದುಳಿದ […]
Nursery CEO: ನರ್ಸರಿ ಅಭಿವೃದ್ಧಿಗೆ ವಿಜಯಪುರ ಜಿ. ಪಂ. ಸಿಇಓ ರಾಹುಲ್ ಶಿಂಧೆ ಚಾಲನೆ
ವಿಜಯಪುರ: ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ರಾಹುಲ ಶಿಂಧೆ ಅವರು ವಿಜಯಪುರ ತಾಲೂಕಿನ ಆಹೇರಿ, ಶಿವಣಗಿ ಮತ್ತು ಮದಭಾವಿ ಗ್ರಾ. ಪಂ. ಗಳಿಗೆ ಭೇಟಿ ನೀಡಿ ನಾನಾ ಕಾಮಗಾರಿಗಳನ್ನು ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಆಹೇರಿ ಗ್ರಾ. ಪಂ. ವ್ಯಾಪ್ತಿಯ ಅಂಕಲಗಿ ಗ್ರಾಮದಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆ ಹಾಗೂ ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಗಳ ಸಹಭಾಗಿತ್ವದಲ್ಲಿ ಕೈಗೊಂಡ ನರ್ಸರಿ ಅಭಿವೃದ್ಧಿ ಕಾಮಗಾರಿಗೆ ಸಹ ಚಾಲನೆ ನೀಡಿದರು. ನಂತರ ನರ್ಸರಿ ಅಭಿವೃದ್ಧಿ ಘಟಕದಲ್ಲಿ ದ್ರಾಕ್ಷಿ ಸಸಿಗಳನ್ನು ಸಹ […]