Electricity MBP: ಸರಕಾರ ಸಹಾಯಧನ ಕಡಿತದ ಪರಿಣಾಮ‌ ರೈತರ ಪಂಪಸೆಟ್ ಗಳಿಗೆ ವಿದ್ಯುತ್ ಕೊರತೆ ಸಂಕಷ್ಟದಲ್ಲಿ ರೈತರು ಎಂ. ಬಿ. ಪಾಟೀಲ ಆರೋಪ

ವಿಜಯಪುರ: ಸರಕಾರ ಎಸ್ಕಾಂ ಗಳಿಗೆ ಸಹಾಯ ಧನ‌ ಕಡಿತ ಮಾಡಿದ್ದು, ಇದರಿಂದಾಗಿ ರೈತರ ಪಂಪಸೆಟ್ ಗಳಿಗೆ ವಿದ್ಯುತ್ ಕೊರತೆಯಾಗಿ ಅನ್ನದಾತರ ಸಂಕಷ್ಟದಲ್ಲಿದ್ದಾರೆ ಎಂದು‌‌ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಎಸ್ಕಾಂ ಗಳಿಗೆ ನಿಗದಿಯಾಗಿರುವ ಸಹಾಯಧನ, ಕಡಿತ ಮಾಡಿರುವ ಹಣ, ವಿದ್ಯುತ್ ಕೊರತೆಯ ಪ್ರಮಾಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು. ರಾಜ್ಯದಲ್ಲಿ ನೀರಾವರಿ ಪಂಪ್ ಸೆಟ್ ಗಳಿಗೆ ಬೇಕಾದ ವಿದ್ಯುಚ್ಛಕ್ತಿಯ ಪೂರೈಕೆಗೆ ಸುಮಾರು ರೂ.‌ 16 ಸಾವಿರ ಕೋ. […]

Journalists Pension: ಪತ್ರಕರ್ತರ ಮಾಸಾಶನ ಹೆಚ್ಚಳ- ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ಪತ್ರಕರ್ತರ ಮಾಸಾಶನ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಭರವಸೆ ನೀಡಿದ್ದಾರೆ. ಬೆಂಗಳೂರು ಪ್ರೆಸ್ ಕ್ಲಬ್ ನಲ್ಲಿ ಆಯೋಜಿಸಲಾಗಿದ್ದ ಬ್ಯುಸಿನೆಸ್ ಐಕಾನ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪತ್ರಕರ್ತರ ಹಲವಾರು ಬೇಡಿಕೆಗಳಿವೆ. ಪತ್ರಕರರಿಗೆ ಸಾಮಾಜಿಕವಾಗಿ, ಆರ್ಥಿಕವಾಗಿ ಭದ್ರತೆಯ ಅವಶ್ಯಕತೆ ಇದೆ. ನಿವೃತ್ತ ಪತ್ರಕರ್ತರಿಗೆ ಮಾಸಾಶನ ನೀಡುವ ಸಮಿತಿ ರಚಿಸಲು ನಾಳೆಯೇ ಆದೇಶ ಹೊರಡಿಸಲಾಗುವದು. ಅದಕ್ಕಿರುವ ನಿಯಮಗಳನ್ನು ಸರಳೀಕರಣಗೊಳಿಸಲಾಗುವುಎಂದು ಅವರು ತಿಳಿಸಿದರು. ವಿಧಾನ ಸಭೆಯ ಹತ್ತಿರವೇ ಪ್ರೆಸ್ ಕ್ಲಬ್ ಇದೆ. ಪತ್ರಕರ್ತರು ಶಕ್ತಿಸ್ಥಳ ಭಾಗ. ನಾಡು […]

KUWJ Felicitation: ಮಾಧ್ಯಮ ಮಾನ್ಯತಾ ಸಮಿತಿ ನೂತನ ಸದಸ್ಯರಿಗೆ ಕೆಯುಡಬ್ಲ್ಯೂಜೆ ಯಿಂದ ಸನ್ಮಾನ

ಬೆಂಗಳೂರು: ನೈಜ ಪತ್ರಕರ್ತರನ್ನು ಒಳಗೊಂಡ ಮಾಧ್ಯಮ ಮಾನ್ಯತಾ ಸಮಿತಿ ರಚನೆಯಾಗಿರುವುದು ಆ ಸಮಿತಿ ಘನತೆ ಹೆಚ್ಚಿಸಿದೆ ಎಂದು ಕೆಯುಡಬ್ಲ್ಯೂಜೆ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ಹೇಳಿದ್ದಾರೆ. ಬೆಂಗಳೂರಿನಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಮಾಧ್ಯಮ ಮಾನ್ಯತಾ ಸಮಿತಿ (ಮೀಡಿಯಾ ಅಕ್ರಿಡಿಟೇಶನ್ ಸಮಿತಿ)ಯ ನೂತನ ಸದಸ್ಯರ ಅಭಿನಂದನಾ ಸಭೆಯಲ್ಲಿ ಅವರು ಮಾತನಾಡಿದರು. ಡಿವಿಜಿ ಕಟ್ಟಿದ ಸಂಘ ಸಮಸ್ತ ಪತ್ರಕರ್ತರ ಪ್ರಾತಿನಿಧಿಕ ಮಾತೃ ಸಂಸ್ಥೆಯಾಗಿದೆ. ಎಂಟು ಸಾವಿರಕ್ಕೂ ಹೆಚ್ಚು ಸದಸ್ಯರಿರುವ ಬೃಹತ್ ಸಂಘಟನೆಯಾಗಿದೆ. ಸಂಘದ ಸದಸ್ಯತ್ವ ಪಡೆಯಲು ಎಲ್ಲಾ ಕಡೆಯಲ್ಲೂ […]

Horti Irrigation: ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಅನುಮೋದನೆ- ಇಂಡಿ ಬಹುಹಳ್ಳಿ ಯೋಜನೆ ಅಂದಾಜು ಪಟ್ಟಿಗೆ ಅನುಮೋದನೆ- ಸಚಿವ ಕಾರಜೋಳ

ಬೆಂಗಳೂರು: ಹೊರ್ತಿ-ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಯಡಿ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಜಲಸಂಪನ್ಮೂಲ‌ ಸಚಿವ ಗೋವಿಂದ ಕಾರಜೋಳ‌ ತಿಳಿಸಿದ್ದಾರೆ. ಈ ಕುರಿತು ಮಾಧ್ಯಮ‌ ಪ್ರಕಟಣೆ ನೀಡಿರುವ ಅವರು, ಪ್ರಸ್ತುತ ಆಲಮಟ್ಟಿ ಜಲಾಶಯದ ಹಿನ್ನೀರಿನಲ್ಲಿ ಪ್ರತ್ಯೇಕವಾಗಿ 3.245 ಟಿಎಂಸಿ ನೀರನ್ನು ಲಿಫ್ಟ್ ಮಾಡಿ (ಆರ್.ಎಲ್.504.75 ಮೀ.ನಿಂದ ಆರ್.ಎಲ್.660.00 ಮೀ.ವರೆಗೆ) ಪೈಪ್ ಲೈನ್ ಅಳವಡಿಕೆಯೊಂದಿಗೆ ಇಂಡಿ ಮತ್ತು ವಿಜಯಪುರ ತಾಲೂಕುಗಳ (ನಾಗಠಾಣ ಮತಕ್ಷೇತ್ರ ಒಳಗೊಂಡಂತೆ) 28000 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಯೋಜನೆ ಇದಾಗಿದ್ದು, ಮೂರು […]

Earthquake Felt: ಬಸವ ನಾಡಿನಲ್ಲಿ ಮತ್ತೆ ಭೂಕಂಪ- ಮಧ್ಯರಾತ್ರಿ, ನಸುಕಿನ ಜಾವ ಎರಡು ಬಾರಿ ಭೂಕಂಪನ

ವಿಜಯಪುರ: ಬಸವ ನಾಡು ವಿಜಯಪುರದಲ್ಲಿ ಮತ್ತೆ ಭೂಕಂಪನ ಸಂಭವಿಸಿದೆ. ಮಧ್ಯರಾತ್ರಿ 12.05ಕ್ಕೆ ಮತ್ತು ನಸುಕಿನ ಜಾವ 5.29ಕ್ಕೆ ಭೂಕಂಪನ ಉಂಟಾಗಿದೆ. ಮಧ್ಯರಾತ್ರಿ12.05ಕ್ಕೆ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯಲ್ಲಿ ಭೂಕಂಪನ ಅನುಭವವಾಗಿದೆ. ಅನಧಿಕೃತ ಮೂಲಗಳ ಪ್ರಕಾರ 2.8 ತೀವ್ರತೆಯ ಭೂಕಂಪನ ಇದಾಗಿತ್ತು. ನಸುಕಿನ‌ ಜಾವ ವಿಜಯಪುರ ತಾಲೂಕಿನ ಹೊನ್ನುಟಗಿ ಬಳಿ ಭೂಕಂಪನ ಅನುಭವವಾಗಿದೆ. ಹೊನ್ನುಟಗಿ ಬಳಿ ಕೇಂದ್ರಬಿಂದು ಹೊನ್ನುಟಗಿ ಭೂಕಂಪನ ಕುರಿತು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಬಿ. ದಾನಮ್ಮನವರ ಮಾಹಿತಿ ನೀಡಿದ್ದಾರೆ. ರಿಕ್ಚರ್ ಮಾಪಕದಲ್ಲಿ […]

Savarkar MBP: ಬಿಜೆಪಿ ಸಾವರ್ಕರ ಬದಲು ಕನ್ನಡ ನಾಯಕರ ರಥಯಾತ್ರೆ ಮಾಡಲಿ- ಗಣೇಶೋತ್ಸವ ಸಂಬಂಧ ಯತ್ನಾಳ, ಪಟ್ಟಣಶೆಟ್ಟಿಗೆ ಎಂ. ಬಿ. ಪಾಟೀಲ‌ ಹೇಳಿದ್ದೇನು ಗೊತ್ತಾ?

ವಿಜಯಪುರ: ಬಿಜೆಪಿ ನಾಯಕರು ಸಾವರ್ಕರ್ ರಥಯಾತ್ರೆ ಬಿಟ್ಟು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕನ್ನಡ ಹೋರಾಟಗಾರರ ರಥಯಾತ್ರೆ ನಡೆಸಲಿ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ನಾಯಕರಾದ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಇತರ ನಾಯಕರಿಗೆ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರಾದ ವೀರರಾಣಿ ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಸುರಪುರ ನಾಯಕರು ಮತ್ತು ಹಲಗಲಿಯ ಬೇಡರು ಕಾಣಿಸುತ್ತಿಲ್ಲವೆ ಎಂದು ವಾಗ್ದಾಳಿ ನಡೆಸಿದರು. ಬೇಕಿದ್ದರೆ ಬಿಜೆಪಿಯವರು ಕನ್ನಡ ಹೋರಾಟಗಾರರ ರಥಯಾತ್ರೆ […]