Electricity MBP: ಸರಕಾರ ಸಹಾಯಧನ ಕಡಿತದ ಪರಿಣಾಮ‌ ರೈತರ ಪಂಪಸೆಟ್ ಗಳಿಗೆ ವಿದ್ಯುತ್ ಕೊರತೆ ಸಂಕಷ್ಟದಲ್ಲಿ ರೈತರು ಎಂ. ಬಿ. ಪಾಟೀಲ ಆರೋಪ

ವಿಜಯಪುರ: ಸರಕಾರ ಎಸ್ಕಾಂ ಗಳಿಗೆ ಸಹಾಯ ಧನ‌ ಕಡಿತ ಮಾಡಿದ್ದು, ಇದರಿಂದಾಗಿ ರೈತರ ಪಂಪಸೆಟ್ ಗಳಿಗೆ ವಿದ್ಯುತ್ ಕೊರತೆಯಾಗಿ ಅನ್ನದಾತರ ಸಂಕಷ್ಟದಲ್ಲಿದ್ದಾರೆ ಎಂದು‌‌ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ ಹೇಳಿದ್ದಾರೆ.

ವಿಜಯಪುರದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ರಾಜ್ಯದ ಎಸ್ಕಾಂ ಗಳಿಗೆ ನಿಗದಿಯಾಗಿರುವ ಸಹಾಯಧನ, ಕಡಿತ ಮಾಡಿರುವ ಹಣ, ವಿದ್ಯುತ್ ಕೊರತೆಯ ಪ್ರಮಾಣವನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

ರಾಜ್ಯದಲ್ಲಿ ನೀರಾವರಿ ಪಂಪ್ ಸೆಟ್ ಗಳಿಗೆ ಬೇಕಾದ ವಿದ್ಯುಚ್ಛಕ್ತಿಯ ಪೂರೈಕೆಗೆ ಸುಮಾರು ರೂ.‌ 16 ಸಾವಿರ ಕೋ. ಅಂದರೆ 21333 ಮಿಲಿಯನ್ ಯುನಿಟ್ಸ್ ವಿದ್ಯುತ್ ಬೇಕು. ಆದರೆ, ಈ ಸತಕಾರ ರೂ. 12 ಸಾವಿರ ಕೋ.‌ಮಾತ್ರ ಸಹಾಯಧನ‌ ನೀಡಿದೆ. ಅಂದರೆ 16 ಸಾವಿರ ಮಿಲಿಯನ್ ಯುನಿಟ್ಸ್ ಮಾತ್ರ ಸರಬರಾಜು ಮಾಡಲಾಗಿದೆ. ಇನ್ನೂ ರೂ. 4000 ಕೋ. ಅನುದಾನದ ಕೊರತೆ ಇದೆ ಎಂದು ಅವರು ತಿಳಿಸಿದರು.

ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ. ಬಿ. ಪಾಟೀಲ

ಕಿತ್ತೂರು ಕರ್ನಾಟಕದ ಹುಬ್ಬಳ್ಳಿ ಹೆಸ್ಕಾಂ ವ್ಯಾಪ್ತಿಗೆ ಅಂದಾಜು 6400 ಮಿಲಿಯನ್ ಯುನಿಟ್ಸ್ ಬೇಕು. ಆದರೆ, 5500 ಮಿಲಿಯನ್ ಯುನಿಟ್ಸ್ ಮಾತ್ರ‌ ಹಂಚಿಕೆಯಾಗಿದೆ. 900 ಮಿಲಿಯನ್ ಯುನಿಟ್ಸ್ ವಿದ್ಯುತ್ ಕೊರತೆ ಇದೆ ಎಂದು ಅವರು ತಿಳಿಸಿದರು.

ವಿಜಯಪುರ ಜಿಲ್ಲೆಯಲ್ಲಿ ಏ. 2022 ರಿಂದ ಜು.‌ 2022ರ ವರೆಗೆ 400.625 ಮಿಲಿಯನ್ ಯುನಿಟ್ಸ್ ಹಂಚಿಕೆಯಾಗಿದೆ. 512.686 ಮಿಲಿಯನ್ ಯುನಿಟ್ ಬಳಕೆಯಾಗಿದೆ‌. ಹಂಚಿಕೆಗಿಂತ ಹೆಚ್ಚಿಗೆ ವಿದ್ಯುತ್ ಬಳಕೆಯಾಗಿದೆ ಎಂದು ಅವರು ತಿಳಿಸಿದರು.

 

ನಮ್ಮ ಸರಕಾರ 2013-18 ರ ಅವಧಿಯಲ್ಲಿ ರೈತರಿಗೆ ವಿದ್ಯುಚ್ಛಕ್ತಿ ಬಳಕೆಗೆ ಅಗತ್ಯವಿದ್ದಷ್ಟು ಅನುದಾನ ಒದಗಿಸಿದ್ದೇವೆ. ‌ಈಗ ಸತಕಾತ ನೀರಾವರಿ ಪಂಪ್ ಸೆಟ್ ಗಳಿಗೆ ಫೀಡರ್ ವಾರು ಸಹಾಯಧನ‌ ಹಂಚಿಕೆ ಮಾಡಿದೆ. ಅಲ್ಲದೇ, ಹಂಚಿಕೆಯ ಪ್ರಮಾಣ ಮೀರದಂತೆ ಕಟ್ಟುನಿಟ್ಟಾಗಿ ಅಧಿಕಾರಿಗಳಿಗೆ ಆದೇಶ ನೀಡಿದೆ. ಅಲ್ಲದೇ ಹಂಚಿಕೆಗಿಂತ ಹೆಚ್ಚುವರಿಯಾಗಿ ಬಳಕೆಯಾದ ವಿದ್ಯುತ್ ಪ್ರಮಾಣ ಮತ್ತು ಅವಧಿ ಸರಿದೂಗಿಸಲು ಈಗ ಸರಬರಾಜಿನಲ್ಲಿ ಕಡಿತಗೊಳಿಸಲು ಕ್ರಮ ಕೈಗೊಂಡಿದೆ ಎಂದು ಎಂ.‌ ಬಿ. ಪಾಟೀಲ‌ ತಿಳಿಸಿದರು.

ಮುಂಬರುವ ದಿನಗಳಲ್ಲಿ ತ್ರಿ-ಫೇಸ್ ವಿದ್ಯುತ್ ನ್ನು ಏಳು ಗಂಟೆಗಳ ಬದಲಾಗಿ ಕಡಿಮೆ ಅವಧಿಗೆ ಪೂರೈಸಲು ಕ್ರಮ ವಹಿಸುತ್ತಿರುವ ಮಾಹಿತಿ ಇದೆ ಎಂದು ಹೇಳಿದ ಅವರು, ಈಗ ಅನ್ನದಾತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಾಲಮಾಡಿ ಸಾಗುವಳಿ ಮಾಡುತ್ತಿರುಚ ರೈತರಿಗೆ ವಿದ್ಯುತ್ ನೀಡದೇ ಹೋದರೆ ರೈತರು ಬೀದಿಗೆ ಬೀಳಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಈಗಾಗಲೇ ರೈತರು ಪ್ರತಿಭಟನೆಗೆ ಇಳಿಯುತ್ತಿದ್ದಾರೆ. ಈ ಎಲ್ಲ ಅವಾಂತರಗಳಿಗೆ ರಾಜ್ಯ ಸರಕಾರದ ಅನುದಾನ ಕಡಿತವೇ ಕಾರಣ. ಸಹಾಯಧನದ ಕೊರತೆಯಿಂದಾಗಿ ಎಸ್ಕಾಂ‌ ಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಅಸಹಾಯಕರಾಗಿದ್ದಾರೆ ಎಂದು ಮಾಜಿ ಸಚಿವರು ಹೇಳಿದರು.

ರೈತರಿಗೆ ಎಂ. ಬಿ. ಪಾಟೀಲ ಮನವಿ

ಇದಕ್ಕೆ ಸರಕಾರವೇ ಕಾರಣವಾಗಿರುವ ಹಿನ್ನೆಲೆಯಲ್ಲಿ ಎಸ್ಕಾಂ‌ ಅಧಿಕಾರಿಗಳು‌ ಮತ್ತು ಸಿಬ್ಬಂದಿಯ ಅಸಹಾಯಕತೆಯನ್ನು ಕೂಡ ಅರ್ಥ ಮಾಡಿಕೊಳ್ಳಬೇಕು. ರೈತರು ತಮ್ಮ ಪ್ರತಿಭಟನೆ ಏನಿದ್ದರೂ ರಾಜ್ಯ ಸರಕಾರದ ವಿರುದ್ದ ಮಾಡಬೇಕೇ ಹೊರತು ಅಧಿಕಾರಿಗಳ ವಿರುದ್ಧ ಅಲ್ಲ ಎಂದು ಅವರು ಹೇಳಿದರು.

ನೀರಾವರಿ ಜಾರ್ಯ

ಇನ್ನು ವಿಜಯಪುರ ಜಿಲ್ಲೆ ನೀರಾವರಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಕಂಡಿದೆ. ಶೇ.66 ರಷ್ಟು ಲೋಡ್ ಗ್ರೋಥ್ ಆಗಿದೆ. ವಿದ್ಯುತ್ ಜಾಲದ ಸಾಮರ್ಥ್ಯವನ್ನು ಹೆಚ್ಚುವರಿಯಾಗಿ 60 ಮಿಲಿಯನ್ ವ್ಯಾಟ್ ಅಭಿವೃದ್ಧಿ ಪಡಿಸಲಾಗಿದೆ. ಅದರಂಗೆ ತಿಕೋಟಾ ಮತ್ತು ಇನ್ನುಳಿದ ತಾಲೂಕಿನಲ್ಲಿಯೂ ಲೋಡ್ ಗ್ರೋಥ್ ಕಂಡು ಬಂದಿದೆ. ಇದನ್ನು ಪರಿಗಣಿಸದೇ ವಿದ್ಯುಚ್ಛಕ್ತಿ ಹಂಚಿಕೆ ಮಾಡಲಾಗಿದೆ. ಇದೊಂದು ಅವೈಜ್ಞಾನಿಕ ವಿಧಾನ. ಇದರಿಂದ ಭವಿಷ್ಯದಲ್ಲಿ ರೈತರು ಸಂಕಷ್ಟಕ್ಕೆ ಈಡಾಗಲಿದ್ದಾರೆ ಎಂದು ಎಂ.ಬಿ. ಪಾಟೀಲ ಎಚ್ಚರಿಕೆ ನೀಡಿದರು.

40% ಸರಕಾರ ಆರೋಪ ತನಿಖೆಗೆ ಆಗ್ರಹ

ಇದೇ ವೇಳೆ, ರಾಜ್ಯದಲ್ಲಿ 40 ಪರ್ಸೆಂಟ್ ಸರಕಾರ ವಿಚಾರ ಕುರಿತು ಗುತ್ತಿಗೆದಾರರ ಸಂಘದ ಪುನಾರೋಪದ ಕುರಿತು ಮಾತನಾಡಿದ ಕೆಪಿಸಿಸಿ ಪ್ರಚಾರ ಸಮಿತಿ ಆಧ್ಯಕ್ಷ ಎಂ.‌ ಬಿ. ಪಾಟೀಲ ಅವರು, ಸರಕಾರದ ವಿರುದ್ಧ ಗುತ್ತಿಗೆದಾರರ ಸಂಘದವರು ಆರೋಪ ಮಾಡಿದ್ಧಾರೆ. ಗುತ್ತಿಗೆದಾರರ ಸಂಘದವರು ಇಲ್ಲಿ ಸಮಸ್ಯೆಗೆ ಈಡಾದವರು. ಗುತ್ತಿಗೆದಾರರ ಸಂಘದವರು ಈಗಾಗಲೇ ತನಿಖೆಗೆ ಸಹಕರಿಸುವುದಾಗಿ ಹೇಳಿದ್ದಾರೆ. ಹಾಲಿ ಹೈಕೋರ್ಟ್ ನ್ಯಾಯಾದೀಶರ ನೇತೃತ್ವದಲ್ಲಿ ಈ ಕುರಿತು ತನಿಖೆಯಾಗಲಿ. ನಾವು ಎಲ್ಲಾ ದಾಖಳಾತಿಗಳನ್ನು ಒದಗಿಸುತ್ತೇವೆ ಎಂದು ಹೇಳಿದ್ದಾರೆ ಎಂದು ತಿಳಿಸಿದರು.

ದಾಖಲಾತಿಗಳನ್ನು ಒದಗಿಸದಿದ್ದರೆ ನಮಗೆ ಏನು ಬೇಕಾದರೂ ಶಿಕ್ಷೆ ನೀಡಿ ಎಂದು ಗುತ್ತಿಗೆದಾರರ ಸಂಘದವರು ಹೇಳಿದ್ದಾರೆ. ನಿನ್ನೆಯೇ ಈ ವಿಚಾರವನ್ನು ಗುತ್ತಿಗೆದಾರರ ಸಂಘದವರು ಹೇಳಿದ್ದಾರೆ. ಇಷ್ಟೆಲ್ಲ ಹೇಳಿದ ಮೇಲೆ ನಿಮಗೆ ಏನು ತೊಂದರೆ ಎಂದು ಸರಕಾರಕ್ಕೆ ಎಂ. ಬಿ. ಪಾಟೀಲ್ ಪ್ರಶ್ನೆ ಮಾಡಿದರು.

ತೊಂದರೆಗೊಳಗಾದ ಗುತ್ತಿಗೆದಾರರ ಸಂಘದವರು ಆರೋಪ ಮಾಡುತ್ತಿದ್ದಾರೆ. ತೊಂದರೆಗೆ ಒಳಗಾದವರನ್ನು ಬಿಟ್ಟು ತಪ್ಪು ಮಾಡಿದವರನ್ನು ಕೇಳಿ ಮಾಡುತ್ತೀರಾ? ಎಂದು ಅವರು ಪ್ರಶ್ನೆ ಮಾಡಿದರು.

ಈ ಮೂಲಕ 40 ಪರ್ಸೆಂಟ್ ವಿಚಾರವನ್ನು ಹೈಕೋರ್ಟಿನ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಯಾಗಬೇಕು ಎಂದು ಅವರು ಒತ್ತಾಯಿಸಿದರು.

Leave a Reply

ಹೊಸ ಪೋಸ್ಟ್‌