ವಿಜಯಪುರ: ಬಸವ ನಾಡು ವಿಜಯಪುರದಲ್ಲಿ ಮತ್ತೆ ಭೂಕಂಪನ ಸಂಭವಿಸಿದೆ.
ಮಧ್ಯರಾತ್ರಿ 12.05ಕ್ಕೆ ಮತ್ತು ನಸುಕಿನ ಜಾವ 5.29ಕ್ಕೆ ಭೂಕಂಪನ ಉಂಟಾಗಿದೆ.
ಮಧ್ಯರಾತ್ರಿ12.05ಕ್ಕೆ ಬಸವನ ಬಾಗೇವಾಡಿ ತಾಲೂಕಿನ ಉಕ್ಕಲಿಯಲ್ಲಿ ಭೂಕಂಪನ ಅನುಭವವಾಗಿದೆ. ಅನಧಿಕೃತ ಮೂಲಗಳ ಪ್ರಕಾರ 2.8 ತೀವ್ರತೆಯ ಭೂಕಂಪನ ಇದಾಗಿತ್ತು.
ನಸುಕಿನ ಜಾವ ವಿಜಯಪುರ ತಾಲೂಕಿನ ಹೊನ್ನುಟಗಿ ಬಳಿ ಭೂಕಂಪನ ಅನುಭವವಾಗಿದೆ.
ಹೊನ್ನುಟಗಿ ಬಳಿ ಕೇಂದ್ರಬಿಂದು
ಹೊನ್ನುಟಗಿ ಭೂಕಂಪನ ಕುರಿತು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಬಿ. ದಾನಮ್ಮನವರ ಮಾಹಿತಿ ನೀಡಿದ್ದಾರೆ. ರಿಕ್ಚರ್ ಮಾಪಕದಲ್ಲಿ 3.4 ತೀವ್ರತೆಯ ಭೂಕಂಪನ ಇದಾಗಿದೆ. ಹೊನ್ನುಟಗಿ ಗ್ರಾಮದಿಂದ ನೈರುತ್ಯ ಭಾಗದಲ್ಲಿ 3.6 ಕಿ. ಮೀ. ದೂರದಲ್ಲಿ ಈ ಭೂಕಂಪನದ ಕೇಂದ್ರಬಿಂದು ದೃಢಪಟ್ಟಿದೆ.
ಭೂಮಿಯ ಒಳಗೆ 5 ಕಿ. ಮೀ. ಆಳದಲ್ಲಿ ಈ ಭೂಕಂಪನ ಉಂಟಾಗಿದೆ ಎಂದು ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾಹಿತಿ ನೀಡಿದ್ದಾರೆ.