Earthquake Reason: ವಿಜಯಪುರ ಭೂಕಂಪಕ್ಕೆ ಕಾರಣ ಬಿಚ್ಚಿಟ್ಟ ವಿಜ್ಞಾನಿ ಜಗದೀಶ- ಭೂಕಂಪನ ಬಗ್ಗೆ ಭಯ ಬೇಡ ಎಂದು ಧೈರ್ಯ ಹೇಳಿದ ವಿಜ್ಞಾನಿ

ವಿಜಯಪುರ: ಭೂಕಂಪನದ ಬಗ್ಗೆ ಭಯ ಬೇಡ.  ಆದರೆ, ಜಾಗರೂಕರಾಗಿರಬೇಕು ಎಂದು ಕರ್ಣಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವೈಜ್ಞಾನಿಕ ಅಧಿಕಾರಿ ಜಗದೀಶ ತಿಳಿಸಿದ್ದಾರೆ. ಜಿಲ್ಲೆಯಲ್ಲಿ ಪದೇಪದೆ ಭೂಕಂಪನ ಸಂಭವಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನರಿಗೆ ಧೈರ್ಯ ಹೇಳಲು ಮತ್ತು ಭೂಕಂಪನ ಮಾಪನ ಕೇಂದ್ರ ಆರಂಭಿಸಿ, ಭೂಕಂಪನದ ಮೇಲೆ ಹೆಚ್ಚಿನ ನಿಗಾ(ಕ್ಲೋಸ್ ಮಾನಿಟರಿಂಗ್) ವಹಿಸಲು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಅಧಿಕಾರಿಗಳ ತಂಡವು ವಿಜಯಪುರ ಜಿಲ್ಲೆಯ ಬಸನವ ಬಾಗೇವಾಡಿ ತಾಲೂಕಿನ ನಾನಾ ಗ್ರಾಮಗಳಿಗೆ ಭೇಟಿ ನೀಡಿ […]

Tanveer Hashmi: ನಿಂದಾ ಕಾನೂನು ರಚಿಸಿ- ಭಾರತದ ಏಕತೆ, ಅಖಂಡತೆಗೆ ಧಕ್ಕೆಯಾಗದಂತೆ ಸರ್ವ ಧರ್ಮಗಳ ನಂಬಿಕೆಗಳನ್ನು ಗೌರವಿಸಿ- ಮುಸ್ಲಿಂ ಮುತ್ತೈದಾ ಕೌನ್ಸಿಲ್ ಆಗ್ರಹ

ವಿಜಯಪುರ: ಭಾರತದ ಅಖಂಡತೆ ಮತ್ತು ಏಕತೆಗಾಗಿ ನಿಂದಾ(ನಿಂದನೆ) ಕಾನೂನು ರಚಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಮುಸ್ಲಿಂ ಮುತ್ತೈದಾ ಕೌನ್ಸಿಲ್ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಮುಸ್ಲಿಂ ಧರ್ಮಗುರು ಸೈಯ್ಯದ ಮೊಹ್ಮದ ತನ್ವೀರ್ ಹಾಶ್ಮಿ ಅವರ ನೇತೃತ್ವದಲ್ಲಿ ನಾನಾ ಸಂಘಟನೆಗಳ ಮುಖಂಡರು ಮನವಿ ಪತ್ರ ಸಲ್ಲಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಸೈಯ್ಯದ ಮೊಹ್ಮದ ತನ್ವೀರ್ ಹಾಶ್ಮಿ ಮನವಿ ಪತ್ರದಲ್ಲಿ ಪ್ರಸ್ತಾಪಿಸುವ ವಿಷಯಗಳನ್ನು  ಪೀರಾ ಹಾಶ್ಮಿ ಭಾರತ ಅನೇಕತೆಯಲ್ಲಿ ಏಕತೆಯನ್ನು ಹೊಂದಿದೆ.  ಎಲ್ಲ ಧರ್ಮದ ಜನರು ಸಂವಿಧಾನದ […]

Farmers Celebration: ಶ್ರೀ ರೇವಣಸಿದ್ಧೇಶ್ವರ ಏತ ನೀರಾವರಿ ಯೋಜನೆಗೆ ಅನುಷ್ಠಾನ- ಸರಕಾರದ ನಿರ್ಧಾರಕ್ಕೆ ರೈತರಿಂದ ಸಂಭ್ರಮಾಚರಣೆ

ವಿಜಯಪುರ: ಬಹುದಿನಗಳಿಂದ ನೀರಾವರಿಯಿಂಚ ವಂಚಿತವಾಗಿರುವ ಇಂಡಿ ತಾಲೂಕಿನ 55 ಹಳ್ಳಿಗಳ ರೈತರು ಶ್ರೀ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆ ಅನುಷ್ಠಾನಕ್ಕೆ ಸರಕಾರ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ರೈತರು ವಿಜಯಪುರದಲ್ಲಿ ಸಂಭ್ರಮಾಚರಣೆ ನಡೆಸಿದರು. ಈ ಯೋಜನೆಯ ಅನುಷ್ಠಾನಕ್ಕಾಗಿ ರೈತರು ಅನೇಕ ಧರಿಣಿ ಸತ್ಯಾಗ್ರಹ ಮತ್ತು ಹೋರಾಟ ಮಾಡುತ್ತಲೇ ಬಂದಿದ್ದರು. ಆದರೆ, ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಅವರು ರೂ. 2368 ಕೋ ವೆಚ್ಚದ ರೇವಣಸಿದ್ದೇಶ್ವರ ಏತ ನೀರಾವರಿ ಯೋಜನೆಗೆ ಅನುಮೋದನೆ ಪಡೆದುಕೊಂಡಿದ್ದಾರೆ. […]

Earthquake Continues: ಗುಮ್ಮಟ ನಗರಿಯಲ್ಲಿ ಮಧ್ಯರಾತ್ರಿ, ಬೆಳಗಿನ ಜಾವ ಮತ್ತೆ ಭೂಕಂಪನ

ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಮಧ್ಯರಾತ್ರಿ ಮತ್ತೆ ಭೂಕಂಪನ ಸಂಭವಿಸಿದೆ. ಮಧ್ಯರಾತ್ರಿ 2.22ಕ್ಕೆ ಭೂಕಂಪನ ಉಂಟಾಗಿದ್ದು, ವಿಜಯಪುರ ನಗರದ ಹಲವಾರು ಕಡೆ ಜನತೆಗೆ ಇದರ ಅನುಭವವಾಗಿದೆ. ಜಲನಗರ, ಇಬ್ರಾಹಿಂಪೂರ ಸೇರಿದಂತೆ ನಾನಾ ಕಡೆ ಭೂಕಂಪನದ ಅನುಭವವಾಗಿದ್ದು ಜನತೆ ಅತಂಕದಲ್ಲಿ ಕಾಲ‌ ಕಳೆಯುವಂತಾಗಿದೆ. ವಿಜಯಪುರ ನಗರದ ಪೂರ್ವ ಭಾಗದಲ್ಲಿ ಸುಮಾರು 14 ಕಿ. ಮೀ. ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಭೂಮಿಯ ಒಳಗಡೆ 10 ಕಿ. ಮೀ. ಆಳದಲ್ಲಿ ಭೂಕಂಪನ ಉಂಟಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ. […]