ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಮಧ್ಯರಾತ್ರಿ ಮತ್ತೆ ಭೂಕಂಪನ ಸಂಭವಿಸಿದೆ.
ಮಧ್ಯರಾತ್ರಿ 2.22ಕ್ಕೆ ಭೂಕಂಪನ ಉಂಟಾಗಿದ್ದು, ವಿಜಯಪುರ ನಗರದ ಹಲವಾರು ಕಡೆ ಜನತೆಗೆ ಇದರ ಅನುಭವವಾಗಿದೆ.
ಜಲನಗರ, ಇಬ್ರಾಹಿಂಪೂರ ಸೇರಿದಂತೆ ನಾನಾ ಕಡೆ ಭೂಕಂಪನದ ಅನುಭವವಾಗಿದ್ದು ಜನತೆ ಅತಂಕದಲ್ಲಿ ಕಾಲ ಕಳೆಯುವಂತಾಗಿದೆ.
ವಿಜಯಪುರ ನಗರದ ಪೂರ್ವ ಭಾಗದಲ್ಲಿ ಸುಮಾರು 14 ಕಿ. ಮೀ. ದೂರದಲ್ಲಿ ಭೂಕಂಪನದ ಕೇಂದ್ರ ಬಿಂದು ಪತ್ತೆಯಾಗಿದೆ. ಭೂಮಿಯ ಒಳಗಡೆ 10 ಕಿ. ಮೀ. ಆಳದಲ್ಲಿ ಭೂಕಂಪನ ಉಂಟಾಗಿದೆ ಎಂದು ಮೂಲಗಳು ಮಾಹಿತಿ ನೀಡಿವೆ.
ಬೆ.7ಕ್ಕೆ ಮತ್ತೆ ಅನುಭವ
ಬೆ. 7ರ ಸುಮಾರಿಗೆ ಮತ್ತೆ ಭೂಮಿ ಕಂಪಿದಿರುವುದು ಜನರಲ್ಲಿ ಆತಂಕವನ್ನು ಹೆಚ್ಚಿಸಿದೆ.