Tanveer Hashmi: ನಿಂದಾ ಕಾನೂನು ರಚಿಸಿ- ಭಾರತದ ಏಕತೆ, ಅಖಂಡತೆಗೆ ಧಕ್ಕೆಯಾಗದಂತೆ ಸರ್ವ ಧರ್ಮಗಳ ನಂಬಿಕೆಗಳನ್ನು ಗೌರವಿಸಿ- ಮುಸ್ಲಿಂ ಮುತ್ತೈದಾ ಕೌನ್ಸಿಲ್ ಆಗ್ರಹ

ವಿಜಯಪುರ: ಭಾರತದ ಅಖಂಡತೆ ಮತ್ತು ಏಕತೆಗಾಗಿ ನಿಂದಾ(ನಿಂದನೆ) ಕಾನೂನು ರಚಿಸಬೇಕು ಎಂದು ಆಗ್ರಹಿಸಿ ನಗರದಲ್ಲಿ ಮುಸ್ಲಿಂ ಮುತ್ತೈದಾ ಕೌನ್ಸಿಲ್ ವತಿಯಿಂದ ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.

ಮುಸ್ಲಿಂ ಧರ್ಮಗುರು ಸೈಯ್ಯದ ಮೊಹ್ಮದ ತನ್ವೀರ್ ಹಾಶ್ಮಿ ಅವರ ನೇತೃತ್ವದಲ್ಲಿ ನಾನಾ ಸಂಘಟನೆಗಳ ಮುಖಂಡರು ಮನವಿ ಪತ್ರ ಸಲ್ಲಿಸಿದರು.  ಈ ಸಂದರ್ಭದಲ್ಲಿ ಮಾತನಾಡಿದ ಸೈಯ್ಯದ ಮೊಹ್ಮದ ತನ್ವೀರ್ ಹಾಶ್ಮಿ ಮನವಿ ಪತ್ರದಲ್ಲಿ ಪ್ರಸ್ತಾಪಿಸುವ ವಿಷಯಗಳನ್ನು  ಪೀರಾ ಹಾಶ್ಮಿ

ಭಾರತ ಅನೇಕತೆಯಲ್ಲಿ ಏಕತೆಯನ್ನು ಹೊಂದಿದೆ.  ಎಲ್ಲ ಧರ್ಮದ ಜನರು ಸಂವಿಧಾನದ ಅಡಿಯಲ್ಲಿ ತಂತಮ್ಮ ಧರ್ಮದ ಆಚರಣೆಗಳನ್ನು ಮಾಡುತ್ತ ದೇಶದ ಅಖಂಡತೆ ಮತ್ತು ಏಕತೆಗಾಗಿ ಶ್ರಮಿಸುತ್ತಿದ್ದಾರೆ.  ಆದರೆ, ಕೆಲವು ಪಟ್ಟಭದ್ದ ಸಮಾಜ ಘಾತುಕ ವ್ಯಕ್ತಿಗಳು ತಮ್ಮ ಹಿತಕ್ಕಾಗಿ ದೇಶದ ಅಖಂಡತೆಯನ್ನು ಹಾಳು ಮಾಡಲು ಹವಣಿಸುತ್ತಿದ್ದಾರೆ.  ಪ್ರವಾದಿ ಮೊಹ್ಮದ ರವರ ವ್ಯಕ್ತಿತ್ವದ ವಿರುದ್ಧ ಅವಹೇಳನಕಾರಿ ಭಾಷಣಗಳಾಗಲಿಮತ್ತು ಹಿಂದೂ ಧರ್ಮದ ಯಾವುದೇ ದೇವಿ, ದೇವತೆಗಳ ವಿರುದ್ಧ ಹಾಗೂ ಕ್ರೈಸ್ತ, ಬೌದ್ದ, ಶಿಖ್ ಧರ್ಮಗಳ ಕುರಿತು ಟಿಪ್ಪಣೆಗಳಾಗಲಿ, ದೇಶದ ಪ್ರಗತಿ ಮತ್ತು ಏಕತೆಯ ಮೇಲೆ ಪರಿಣಾಮ ಬೀರುತ್ತದೆ.  ಇಸ್ಲಾಂ ಪ್ರಕಾರ ಒಬ್ಬ ಮುಸ್ಲಿಮನಾಗಿ ಬೇರೆ ಧರ್ಮದ ಬಗ್ಗೆ ಅಗೌರವ ಕೊಟ್ಟರೆ ಆತ ಮುಸ್ಲಿಮನೇ ಅಲ್ಲ ಎಂದು ನಮ್ಮ ಧರ್ಮ ಹೇಳುತ್ತದೆ ಎಂದು ಅವರು ತಿಳಿಸಿದರು.

ಇತ್ತೀಚಿನ ದಿನಗಳಲ್ಲಿ ಅಮಾನತು ತೆಲಂಗಾಣದ ಬಿಜೆಪಿ ಶಾಸಕ ಟಿ. ರಾಜಾ ಪ್ರವಾದಿ ಮೊಹ್ಮದರ ಕುರಿತು ಟಿಪ್ಪಣೆ ಮಾಡಿರುವದು ಖಂಡನೀಯ ಮತ್ತು ಅಪರಾಧವಾಗಿದೆ.  ಈ ಹಿನ್ನೆಲೆಯಲ್ಲಿ ಭಾರತದ ಅಖಂಡತೆ ಮತ್ತು ಏಕತೆಗಾಗಿ ನಿಂಧಾ ಕಾನೂನನ್ನು ರಚಿಸಬೇಕು.  ಈ ಕಾನೂನಿನ ಅಡಿಯಲ್ಲಿ ಯಾವುದೇ ವ್ಯಕ್ತಿ, ಯಾವುದೇ ಧರ್ಮಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ಕೊಟ್ಟರೆ ಅವರನ್ನು ಕಠಿಣ ಶಿಕ್ಷೆಗೆ ಒಳಪಡಿಸಿ ಬೇರೆಯವರಿಗೆ ಮಾದರಿಯಾಗದಂತೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ರಾಷ್ಚ್ರಪತಿಗಳ ಮೂಲಕ  ಷ್ಮುಟ  ಧರ್ಮಗುರು ಸಯ್ಯದ ಮೊಹ್ಮದ ತನ್ವೀರ ಹಾಶ್ಮಿ ಅವರು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಮುತ್ತೈದಾ ಕೌನ್ಸ್‍ಲ್ ಅಧ್ಯಕ್ಷರು, ಸದಸ್ಯರು, ಧರ್ಮಗುರುಗಳು, ಪದಾಧಿಕಾರಿಗಳು ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌