ವಿಜಯಪುರ: ಕೇಂದ್ರ ಸರಕಾರ ಇತ್ತೀಚೆಗಷ್ಟೇ ಏಪಿಎಸ್ ಆಗಿ ಬಡ್ತಿ ನೀಡಿದ ಏಳು ಜನ ಹಿರಿಯ ಪೊಲೀಸ್ ಅಧಿಕಾರಿಗಳನ್ನು ರಾಜ್ಯ ಸರಕಾರ ಹಾಲಿ ಇರುವ ಸ್ಥಳಗಳಲ್ಲಿಯೇ ಮುಂದುವರೆಸಿ ಆದೇಶ ಹೊರಡಿಸಿದೆ.
ಇದನ್ನೂ ಓದಿ:
IPS Promotion: ವಿಜಯಪುರ ಎಎಸ್ಪಿ ಡಾ. ಅರಸಿದ್ದಿ, ಬಿ. ಎಸ್. ನೇಮೆಗೌಡ ಸೇರಿ ಏಳು ಜನರಿಗೆ ಐಪಿಎಸ್ ಗೆ ಬಡ್ತಿ
ಸಾಮಾನ್ಯವಾಗಿ ಯಾವುದೇ ಹಿರಿಯ ಅಧಿಕಾರಿಗಳಿಗೆ ಬಡ್ತಿ ನೀಡಿದರೆ ನಂತರ ಅವರನ್ನು ಬೇರೋಂದು ಹುದ್ದೆ ಅಥವಾ ಜಿಲ್ಲೆಗೆ ವರ್ಗಾವಣೆ ಮಾಡಲಾಗುತ್ತದೆ. ಆದರೆ, ಈ ಬಾರಿ ರಾಜ್ಯ ಸರಕಾರ ಇತ್ತೀಚೆಗಷ್ಟೇ ಐಪಿಎಸ್ ಅಧಿಕಾರಿಗಳಾಗಿ ಬಡ್ತಿಯಾದ ವಿಜಯಪುರ ಜಿಲ್ಲೆಯ ಎಎಸ್ಪಿ ಡಾ. ರಾಮ ಲಕ್ಷ್ಮಣಸಾ ಅರಸಿದ್ಧಿ, ಬಿ. ಎಸ್. ನೇಮೆಗೌಡ ಸೇರಿದಂತೆ ಎಲ್ಲ ಏಳು ಜನ ಅಧಿಕಾರಿಗಳನ್ನು ಅವರು ಹಾಲಿ ಕೆಲಸ ಮಾಡುತ್ತಿರುವ ಹುದ್ದೆ ಮತ್ತು ಜಿಲ್ಲೆಗಳಲ್ಲಿಯೇ ಮುಂದುವರೆಸಿದೆ. ಅಲ್ಲದೇ, ಇವರೆಲ್ಲರಿಗೂ ಎಸ್ಪಿಗಳಿಗೆ ಇರುವ ಅಧಿಕಾರಗಳನ್ನೇ ನೀಡಲಾಗಿದೆ ಎಂದು ಆದೇಶದಲ್ಲಿ ಮಾಹಿತಿ ನೀಡಲಾಗಿದೆ.
ಐಪಿಎಸ್ ಗೆ ಬಡ್ತಿಯಾದ ಹಿರಿಯ ಪೊಲೀಸ್ ಅಧಿಕಾರಿಗಳು, ಅವರನ್ನು ಮುಂದುವರೆಸಿರುವ ಸ್ಥಳ, ಜಿಲ್ಲೆಯ ಮಾಹಿತಿ
1. ಸಚಿನ ಘೋರ್ಪಡೆ- ಎಎಸ್ಪಿ, ಕೊಲ್ಹಾರ ಜಿಲ್ಲೆ,
2. ವಿಕ್ರಮ ಆಮ್ಟೆ- ಎಎಸ್ಪಿ, ಶಿವಮೊಗ್ಗ ಜಿಲ್ಲೆ,
3. ಸಚಿನ ವಿ. ಜೆ- ಎಸ್ಪಿ, ಎಸಿಬಿ, ಮೈಸೂರು, .
4. ಡಾ. ರಾಮ ಲಕ್ಷ್ಮಣಸಾ ಅರಸಿದ್ದಿ- ಎಎಸ್ಪಿ, ವಿಜಯಪುರ ಜಿಲ್ಲೆ,
5. ಬಿ. ಎಸ್. ನೇಮಗೌಡ- ಎಸ್ಪಿ, ಎಸಿಬಿ, ಬೆಳಗಾವಿ ಜಿಲ್ಲೆ,
6. ಗೋಪಾಲ ಎಂ. ಬ್ಯಾಕೋಡ- ಡಿಸಿಪಿ, ಕ್ರೈಂ ಆ್ಯಂಡ್ ಟ್ರಾಫಿಕ್, ಹುಬ್ಬಳ್ಳಿ-ಧಾರವಾಡ
7. ಮಹಾನಿಂಗ ನಂದಗಾಂವಿ- ಎಎಸ್ಪಿ- ಬೆಳಗಾವಿ ಜಿಲ್ಲೆ
ಹೊಸ ಸಂಪ್ರದಾಯ
ಕಳೆದ ವಾರವಷ್ಟೇ ಈ ಏಳು ಜನ ಕೆಎಸ್‌ಪಿಎಸ್ ಅಧಿಕಾರಿಗಳನ್ನು ಕೇಂದ್ರ ಸರಕಾರ ಐಪಿಎಸ್ ಅಧಿಕಾರಿಗಳನ್ನಾಗಿ ಬಡ್ತಿ ನೀಡಿತ್ತು. ಈಗ ಈ ಅಧಿಕಾರಿಗಳನ್ನು ಬಡ್ತಿಯಾದ ಐಪಿಎಸ್ ಹುದ್ದೆಗಳನ್ನು ನೀಡಿ ಹಾಲಿ ಕಾರ್ಯ ನಿರ್ವಹಿಸುತ್ತಿರುವ ಸ್ಥಳಗಳಲ್ಲಿಯೇ ರಾಜ್ಯ ಸರಕಾರ ಮುಂದುವರೆಸಿ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ. ಈ ಕನ್ನಡಿಗ ಅಧಿಕಾರಿಗಳ ಸೇವಾದಕ್ಷತೆಯನ್ನು ಪರಿಗಣಿಸಿ ಸರಕಾರ ಈ ಹೊಸ ನಿರ್ಧಾರ ಕೈಗೊಂಡಿದೆ ಎಂದೇ ಪೊಲೀಸ್ ಇಲಾಖೆ ಮತ್ತು ಆಯಾ ಜಿಲ್ಲೆಗಳಲ್ಲಿ ಈ ಅಧಿಕಾರಿ ಸೇವೆಯನ್ನು ಬಲ್ಲವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.