Retired Felicitation: ಸೇವಾ ನಿವೃತ್ತಿ ಹೊಂದಿದ ಮುಖ್ಯ ಗುರುಮಾತೆಗೆ ಸನ್ಮಾನಿಸಿ ಶುಭ ಕೋರಿಕೆ

ವಿಜಯಪುರ: 41 ವರ್ಷ ಶಿಕ್ಷಕಿಯಾಗಿ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತಿಯಾದ ಮುಖ್ಯ ಗುರುಮಾತೆಯನ್ನು ಶಾಲೆಯ ಸಿಬ್ಬಂದಿ, ಮಕ್ಕಳು ಮತ್ತು ಇತರರು ಆತ್ಮೀಯವಾಗಿ ಶುಭ ಕೋರಿದರು.

ವಿಜಯಪುರ ನಗರದ ಗ್ಯಾಂಗ್ ಬಾವಡಿ ಪ್ರದೇಶದ ಜಯನಗರದಲ್ಲಿರುವ ಹೆಣ್ಣು ಮಕ್ಕಳ ಸರಕಾರಿ‌ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.

ಈ ಮುಖ್ಯ ಶಿಕ್ಷಕಿ ಶಾರದಾ ಕೊಪ್ಪ(ಐಹೊಳ್ಳಿ) 41 ವರ್ಷ ಒಂದು ತಿಂಗಳುಗಳ ಕಾಲ ವಿಜಯಪುರ ನಗರದ ನಾನಾ ಶಾಲೆಗಳಲ್ಲಿ ಶಿಕ್ಷಕಿಯಾಗಿ ಮುಖ್ಯ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ.

ಸೇವಾ ನಿವೃತ್ತಿ ಹೊಂದಿದ ಶಾರದಾ ಕೊಪ್ಪ(ಐಹೊಳ್ಳಿ) ಮತ್ತು ಅವರ ಪತಿ ವಿ. ಡಿ. ಐಹೊಳ್ಳಿ ಅವರನ್ನು ಸನ್ಮಾನಿಸಲಾಯಿತು ಐಹೊಳ್ಳಿ ದಂಪತಿಯನ್ನು ಸನ್ಮಾನಿಸಲಾಯಿತು

 

ಆ.31 ರಂದು ಇವರು ಸೇವಾ ನಿವೃತ್ತಿ ಹೊಂದುತ್ತಿದ್ದಾರೆ. ಆದರೆ, ಆ. 31 ರಂದು ಗಣೇಶ ಚತುರ್ಥಿ ಹಿನ್ನೆಲೆ ಸರಕಾರಿ‌ ರಜೆ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಒಂದು ದಿನ‌ ಮುಂಚಿತವಾಗಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಪ್ರಸ್ತುತ ಶಾಲೆಯ ಆಡಳಿತ ಮಂಡಳಿಯವರು ಅಷ್ಟೇ ಅಲ್ಲ, ಇವರು ಈ ಮುಂಚೆ ಸೇವೆ ಸಲ್ಲಿಸಿದ ನಾನಾ ಶಾಲೆಗಳ ಶಿಕ್ಲಕರು, ನಾನಾ ಸಂಘ-ಸಂಸ್ಥೆಗಳ ಮುಖಂಡರು ಕಾರ್ಯಕ್ರಮಕ್ಕೆ ಆಗಮಿಸಿ‌ ಸನ್ಮಾನಿಸಿ ನಿವೃತ್ತಿ ಜೀವನ‌‌ಕ್ಕೆ ಶುಭ ಕೋರಿದರು.

ಈ ಸಂದರ್ಭದಲ್ಲಿ ಶಾರದಾ ಕೊಪ್ಪ(ಐಹೊಳ್ಳಿ) ಅವರ ಪತಿ, ಮತ್ತು ಬಿ ಎಲ್ ಡಿ ಇ ಸಂಸ್ಥೆಯ ಜೆಎಸ್ಎಸ್ ಶಿಕ್ಷಣ‌ ಮಹಾವಿದ್ಯಾಲಯದ ನಿವೃತ್ತ ಪ್ರಾಚಾರ್ಯ ಹಾಗೂ ವಚನಪಿತಾಮಹ ಡಾ. ಫ. ಗು. ಹಳಕಟ್ಟಿ ಸಂಶೋಧನ ಕೇಂದ್ರದ ಸಂಯೋಜಕರಾದ ಡಾ. ವಿ. ಡಿ. ಐಹೊಳ್ಳಿ ಅವರನ್ನೂ ಸನ್ಮಾನಿಸಲಾಯಿತು.

ಹಳಕಟ್ಟಿ ಸಂಶೋಧನ‌ ಕೇಂದ್ರ ಕಾರ್ಯಕರ್ಶಿ ಎಂ. ಎಸ್. ಮದಭಾವಿ, ಎ. ಬಿ. ಬೂದಿಹಾಳ, ವಿ. ಸಿ. ನಾಗಠಾಣ, ಮಹೇಶ ದೊಡ್ಡಿ, ಸಂಜೀವರೆಡ್ಡಿ‌ ಪಾಟೀಲ, ಜಂಬುನಾಥ ಕಂಚ್ಯಾಣಿ ಕೂಡ ಪ್ರತ್ಯೇಕವಾಗಿ ಐಹೊಳ್ಳಿ ದಂಪತಿಯನ್ನು ಗೌರವಿಸಿ ಶುಭ ಕೋರಿದರು.

ಶಾಲೆ ಮಕ್ಕಳು ಸೇರಿದಂತೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ಎಲ್ಲರಿಗೂ ಐಹೊಳ್ಳಿ ದಂಪತಿ ಭೋಜನ ಬಡಿಸಿದರು.

ಐಹೊಳ್ಳಿ ದಂಪತಿಯ ಹಿರಿಯ ಮಗ ಸಾಫ್ಟವೇರ್ ಎಂಜಿನಿಯರ್ ಆಗಿದ್ದರೆ, ಕಿರಿಯ ಪುತ್ರ ಸನ್ಮಿತ್ರ ಐಹೊಳ್ಳಿ ಚರ್ಮರೋಗ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Leave a Reply

ಹೊಸ ಪೋಸ್ಟ್‌