Rain Record: ಬಸವ ನಾಡಿನಲ್ಲಿ ಉತ್ತಮ ಮಳೆ- ದೇ. ಹಿಪ್ಪರಗಿಯಲ್ಲಿ 52 ಮಿಮಿ ಮಳೆ- ಉಳಿದೆಡೆ ಎಷ್ಟು ಗೊತ್ತಾ?

ವಿಜಯಪುರ: ಕಳೆದ 24 ಗಂಟೆಗಳಲ್ಲಿ ಬಸವ ನಾಡು ವಿಜಯಪುರ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ದೇವರ ಹಿಪ್ಪರಗಿಯಲ್ಲಿ ಜಿಲ್ಲೆಯಲ್ಲಿಯೇ ಅತ್ಯಧಿಕ 53 ಮಿಮಿ ಮಳೆ ದಾಖಲಾಗಿದೆ.

ವಿಜಯಪುರ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದ್ದರೆ, ಕೆಲವೆಡೆ ಭಾರಿ ಮತ್ತೆ ಅನೇಕ ಕಡೆ ಸಾಧಾರಣ ಮಳೆಯಾಗಿದೆ.

ವಿಜಯಪುರ ಜಿಲ್ಲೆಯ ನಾನಾ ಕಡೆ ಸುರಿದ ಮಳೆಯ ವಿವರ ಇಲ್ಲಿದೆ.

 

ವಿಜಯಪುರ ತಾಲೂಕು

ವಿಜಯಪುರ ನಗರ- 31.60 ಮಿಮಿ

ನಾಗಠಾಣ- 6.40 ಮಿಮಿ

ಭೂತ್ನಾಳ- 15.60 ಮಿಮಿ

ಹಿಟ್ನಳ್ಳಿ- 28.80 ಮಿಮಿ
ಕುಮಟಗಿ- 5.20 ಮಿಮಿ

ಬಬಲೇಶ್ವರ ತಾಲೂಕು

ಮಮದಾಪುರ- 31 ಮಿಮಿ
ಬಬಲೇಶ್ವರ- 22.20 ಮಿಮಿ

ತಿಕೋಟಾ ತಾಲೂಕು

ತಿಕೋಟಾ- 14.20 ಮಿಮಿ
ಕನ್ನೂರ- 38.40 ಮಿಮಿ

ಬಸವನ ಬಾಗೇವಾಡಿ ತಾಲೂಕು

ಬಸವನ ಬಾಗೇವಾಡಿ- 14.50 ಮಿಮಿ
ಮನಗೂಳಿ- 10.20 ಮಿಮಿ
ಹೂವಿನ ಹಿಪ್ಪರಗಿ- 40.80 ಮಿಮಿ

ನಿಡಗುಂದಿ ತಾಲೂಕು

ಆಲಮಟ್ಟಿ- 44.60ಮಿಮಿ
ಅರೆಶಂಕರ- 4 ಮಿಮಿ

ಕೊಲ್ಹಾರ ತಾಲೂಕು

ಮಟ್ಟಿಹಾಳ- 43.40 ಮಿಮಿ

ಮುದ್ದೇಬಿಹಾಳ ತಾಲೂಕು

ಮುದ್ದೇಬಿಹಾಳ- 7.40 ಮಿಮಿ
ನಾಲತವಾಡ- 6.70 ಮಿಮಿ

ತಾಳಿಕೋಟೆ ತಾಲೂಕು

ತಾಳಿಕೋಟೆ- 00ಮಿಮಿ
ಡವಳಗಿ- 35.40 ಮಿಮಿ

ಇಂಡಿ ತಾಲೂಕು

ಇಂಡಿ- 10 ಮಿಮಿ
ನಾದ ಬಿಕೆ- 9.40 ಮಿಮಿ
ಅಗರಖೇಡ- 21.10 ಮಿಮಿ
ಹೊರ್ತಿ- 8.80 ಮಿಮಿ
ಝಳಕಿ- 3.20. ಮಿಮಿ

ಚಡಚಣ ತಾಲೂಕು

ಚಡಚಣ- 23.20 ಮಿಮಿ
ಹಲಸಂಗಿ- 14 ಮಿಮಿ

ಸಿಂದಗಿ ತಾಲೂಕು

ಸಿಂದಗಿ- 30 ಮಿಮಿ
ಆಲಮೇಲ- 37 ಮಿಮಿ
ಸಾಸಾಬಾಳ- 6.20 ಮಿಮಿ
ರಾಮನಳ್ಳಿ- 35.20 ಮಿಮಿ

ದೇವರ ಹಿಪ್ಪರಗಿ ತಾಲೂಕು

ದೇವರ ಹಿಪ್ಪರಗಿ- 53 ಮಿಮಿ
ಕೊಂಡಗೂಳಿ- 39.20 ಮಿಮಿ
ಕಡ್ಲೆವಾಡ ಪಿಸಿಎಚ್- 20.30 ಮಿಮಿ,

ಆಸ್ತಿಪಾಸ್ತಿ ಹಾನಿ

ಈ ಮಧ್ಯೆ ಕಳೆದ 24 ಗಂಟೆಗಳಲ್ಲಿ ಸುರಿದ ಮಳೆಯಿಂದಾಗಿ ತಾಳಿಕೋಟೆ ಮತ್ತು ಮುದ್ದೇಬಿಹಾಳ ತಾಲೂಕುಗಳಲ್ಲಿ ಆಸ್ತಿಪಾಸ್ತಿಗೆ ಹಾನಿಯಾಗಿದೆ. ಇಟ್ಟು 16 ಕಚ್ಚಾ ಮನೆಗಳು ಹಾನಿಗೀಡಾಗಿವೆ‌.

ತಾಳಿಕೋಟೆ ತಾಲೂಕಿನಲ್ಲಿ ಒಂಬತ್ತು ಕಚ್ಚಾ ಮನೆಗಳೊಗೆ ಭಾಗಷಃ ಹಾನಿಯಾಗಿದೆ.

ಅಲ್ಲದೇ, ಮುದ್ದೇಬಿಹಾಳ ತಾಲೂಕಿನಲ್ಲಿ ಏಳು ಕಚ್ಚಾ ಮನೆಗಳು ಭಾಗಷಃ ಬಿದ್ದಿವೆ. ಒಟ್ಟು ಭಾಗಷಃ ಹಾನಿಯಾಗಿರುವ ಕುರಿತು ಪ್ರಾಥಮಿಕ ವರದಿಗಳಲ್ಲಿ ಮಾಹಿತಿ ನೀಡಲಾಗಿದೆ ಎಂದು ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮಾಹಿತಿ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌