ವಿಜಯಪುರ: ಸಾರ್ವಜನಿಕ ಉತ್ಸವದ ಅಂಗವಾಗಿ ನಮನ ನಿರ್ಮಿಸಲಾಗಿದ್ದ ಗೋಲ್ಡನ್ ಗಣೇಶ ಮಂಟಪ ದಿಢೋರ ಕುಸಿದ ಘಟನೆ ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ನಡೆದಿದೆ.
ಸಿಂದಗಿ ಪಟ್ಟಣದಲ್ಲಿ ಸ್ವಾಮಿ ವಿವೇಕಾನಂದ ವೃತ್ತದಲ್ಲಿನ ಗಣೇಶ ಮಂಟಪ ಕುಸಿದ ಪರಿಣಾಮ ಕೆಲವು ಜನರಿಗೆ ಗಾಯಗಳಾಗಿವೆ.
ಸಾರ್ವಜನಿಕ ಗಣೇಶ ಉತ್ಸವದ ಹಿನ್ನೆಲೆಯಲ್ಲಿ ಸಿಂದಗಿ ಪಟ್ಟಣದ ಸ್ವಾಮಿ ವಿವೇಕಾನಂದ ವೃತ್ತದಲ್ಲಿ
ವೆಲ್ಲೋರದ ಗೋಲ್ಡನ್ ಟೆಂಪಲ್ ಮಾದರಿ ದೇವಸ್ಥಾಮ ನಿರ್ಮಿಸಲಾಗಿತ್ತು. ಈ ಗಣೇಶನ ಸಿಂದಗಿ ಪಟ್ಟಣಾದ್ಯಂತ ಜನಮನ ಸೆಳೆದಿತ್ತು. ನಾಲ್ಕು ದಿನಗಳ ಹಿಂದೆ ಇಲ್ಲಿ ಪ್ರತಿಷ್ಠಾಪಿಸಲಾಗಿರುವ ಗೋಲ್ಡನ್ ಗಣೇಶ ಟೆಂಪಲ್ ವೀಕ್ಷಿಸಲು ಪ್ರತಿನಿತ್ಯ ನೂರಾರು ಜನರು ಆಗಮಿಸುತ್ತಿದ್ದಾರೆ.
ಎಂದಿನಂತೆ ನಾಲ್ಕನೇ ದಿನ ಭಕ್ತರ ಹೆಚ್ಚಿನ ಸಂಖ್ಯೆಯಲ್ಲಿ ಗಣೇಶನ ಭಕ್ತರೂ ಆಗಮಿಸಿದ್ದರು. ಆದರೆ, ಸಂಜೆ ಈ ಗಣೇಶನ ಮಂಟಪ ದಿಢೀರ ಕುಸಿದಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ ಹಿನ್ನೆಲೆ ಈ ಮಂಟಪ ಕುಸಿಯಲು ಕಾರಣ ಎನ್ನಲಾಗಿದೆ.
ಮಕ್ಕಳಾದಿಯಾಗಿ ಮಹಿಳೆಯರು ಮತ್ತು ಯುವಕರು ಮಂಟಪದಲ್ಲಿನ ಗಣೇಶನ ದರುಶನಕ್ಕೆ ನಿಂತ ಸಮಯದಲ್ಲಿ ಮಂಟಪದ ಮದ್ಯದ ಸ್ಥಳವೇ ಏಕಾಏಕಿ ಕುಸಿದಿದೆ. ಇದರಿಂದಾಗಿ ಮಂಟಪದಲ್ಲಿದ್ದ ಜನರು, ದಿಢೀರನೇ ತಮ್ಮ ಮೇಲೆ ಬಿದ್ದ ಮಂಟಪವನ್ನು ತಕ್ಷಣವೇ ಕೈಯಿಂದ ಮೇಲೆ ಎತ್ತುವ ಮೂಲಕ ಹೆಚ್ಚಿನ ಅನಾಹುತ ತಪ್ಪಿಸಿದ್ದಾರೆ.
ಒಂದು ವೇಳೆ ಈ ಘಟನೆ ನಡೆದಾಗ ಜನರು ಇಲ್ಲದಿದ್ದರೆ ದರ್ಶನಕ್ಕೆ ನಿಂತಿದ್ದ ಜನರಿಗೆ ಹೆಚ್ಚಿನ ಸಂಕಷ್ಟ ಎದುರಾಗುವ ಸಾಧ್ಯತೆ ಹೆಚ್ಚಾಗಿತ್ತು.
ಈ ಅವಘಡದಲ್ಲಿ ಮಕ್ಕಳ ಕೈ, ಕಾಲು, ತಲೆಗೆ ಪೆಟ್ಟಾಗಿದೆ. ಕೆಲವು ಮಹಿಳೆಯರಿಗೆ ಮತ್ತು ಯುವಕರಿಗೆ ತಲೆ, ಮುಂಡಿಗೆ ಗಾಯಗಳಾಗಿವೆ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದ್ದಾರೆ.
ಘಟನೆಯ ಬಳಿಕ ಗಾಯಾಳುಗಳನ್ನು ಸ್ವಾಮಿ ವಿವೇಕಾನಂದ ವೃತ್ತದ ಬಳಿಯ ಖಾಸಗಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
ಈಗ ಮಂಟಪದ ತೆರವಿನ ಕಾರ್ಯ ನಡೆಯಬೇಕಿದೆ.