Rain Water: ಇದು ಯಾವುದೋ‌ ಹಳ್ಳ ಅಲ್ಲ- ಬಸವ ನಾಡಿನಲ್ಲಿರುವ ಈ ಸ್ಥಳ ಯಾವುದು ಗೊತ್ತಾ?

ವಿಜಯಪುರ: ಇದನ್ನು ನೋಡಿದರೆ ಹಳ್ಳದಂತೆ ಕಾಣುತ್ತದೆ. ಆದರೆ, ಇದು ಹಳ್ಳ ಅಲ್ಲವೇ ಅಲ್ಲ. ನದಿಯೂ ಅಲ್ಲ.

ಸಂಜೆ ಬಸವ ನಾಡು ವಿಜಯಪುರ ನಗರದಲ್ಲಿ ಸುಮಾರು ಹೊತ್ತು ಧಾರಾಕಾರ ಮಳೆಯಾಗಿದೆ. ಈ ಮಳೆಯ ನೀರು ಎಷ್ಟಿತ್ತೆಂದರೆ, ರಾಷ್ಟ್ರೀಯ ಹೆದ್ದಾರಿಯೇ ಈ ಭಾಗದಲ್ಲಿ ಮಳೆಯ ನೀರಿನಿಂದ ತುಂಬಿ ಹೋಗಿತ್ತು. ರಸ್ತೆಯೇ ಕಾಣದ ರೋಡಿನಲ್ಲಿ ವಾಹನ ಸವಾರರು ಒಂದು ಅಂದಾಜಿನ ಮೇಲೆಯೇ ತಂತಮ್ಮ ವಾಹನ ಚಲಾಯಿಸಿಸುತ್ತಿದ್ದ ದೃಷ್ಯ ಮಾಮೂಲಾಗಿತ್ತು. ಬಸ್ಸಿರಲಿ, ಟ್ರಕ್ ಇರಲು, ದ್ವಿಚಕ್ರ ವಾಹನಗಳೇ ಇರಲಿ. ಎಲ್ಲವೂ ಹೀಗೆ ನೀರು ತುಂಬಿದ ರಸ್ತೆಯಲ್ಲಿಯೇ ಅಪಾಯವನ್ನೂ ಲೆಕ್ಕಿಸದೇ ಸಂಚರಿಸಿದರು.

ಮಳೆ ನೀರಿನಲ್ಲಿಯೇ ಸಂಚರಿಸುತ್ತಿರುವ ನಾನಾ ವಾಹನಗಳು

ಕೆಲ ದಿನಗಳಿಂದ ಶಾಂತಚಾಗಿಧ್ದ ವರುಣ ಸಂಜೆ ಪ್ರತ್ಯಕ್ಷವಾಗಿ ಉತ್ತಮ ಮಳೆ ಸುರಿಸಿದ್ದಾನೆ. ಈ ನೀರು ವಿಜಯಪುರ ನಗರದ ಹೊರ ವಲಯದಲ್ಲಿರುವ ಐನಾಪುರ(ಮಹಲ್) ಮತ್ತು ಮುನೀಶ್ವರ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ನೀರು ಸಂಗ್ರಹವಾಗಲು ಕಾರಣವಾಗಿದೆ. ಈ ಎರಡು ಸ್ಥಳಗಳಲ್ಲಿ ಜೇವರ್ಗಿ ಸಂಕೇಶ್ವರ ಹೆದ್ದಾರಿಯಲ್ಲಿ ನೀರು ತುಂಬಿ ಹರಿದು ರಸ್ತೆ ಕಾಣದಂತಾಗಿತ್ತು.

ಅವೈಜ್ಞಾನಿಕ ಕಾಮಗಾರಿಯೇ ಕಾರಣ

ಹೆದ್ದಾರಿಗಳೆಂದರೆ ಮಳೆಯ ನೀರು ರಸ್ತೆಗಳ ಪಕ್ಕದಲ್ಲಿ ನೀರು ಹರಿದು ಹೋಗುವಂತಿರಬೇಕು. ಅಲ್ಲದೇ, ರಸ್ತೆಯ ಮೇಲೆ ನೀರು ಸಂಗ್ರಹವಾಗದಂತೆ ಕ್ರಮ ಕೈಗೊಳ್ಳಬೇಕು. ಇಲ್ಲಿ ಅದಾವುದೂ ಆಗಿಲ್ಲ. ಮಳೆಯಾದರೆ ಸಾಕು ಈ ಸ್ಥಳಗಳಲ್ಲಿ ಹೆದ್ದಾರಿ ಸಮತಟ್ಟವಾಗಿಲ್ಲದ ಕಾರಣ ಮಳೆ ನೀರು ರಸ್ತೆಯ ಮೇಲೆಯೇ ಬಂದು ನಿಂತು ಅವಾಂತರ ಸೃಷ್ಠಿಸುತ್ತಿದೆ. ಇನ್ನು ಮುಂದಾದರೂ ಈ ಹೆದ್ದಾರಿಗೆ ಸಂಬಂಧಿಸಿದ ಲೋಕೋಪಯೋಗಿ ಇಲಾಖೆ ಅಥವಾ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರಗಳು ಎಚ್ಚೆತ್ತುಕೊಂಡು ಹೆದ್ದಾರಿಯಲ್ಲಿ ನೀರು ಸಂಗ್ರಹವಾಗದಂತೆ ಕ್ರಮ ಕೈಗೊಳ್ಳಬೇಕಿದೆ.

Leave a Reply

ಹೊಸ ಪೋಸ್ಟ್‌