NQAS Award: ವಿಜಯಪುರ ಜಿಲ್ಲಾಸ್ಪತ್ರೆಗೆ ಒಲಿದ ಕೇಂದ್ರದ ಮತ್ತೋಂದು ಪ್ರಶಸ್ತಿ- ಆ ಗೌರವ ಯಾವುದು ಗೊತ್ತಾ?

ಮಹೇಶ ವಿ. ಶಟಗಾರ ವಿಜಯಪುರ: ಸತತವಾಗಿ ಎರಡು ವರ್ಷ ಕಾಯಕಲ್ಪ ಪ್ರಶಸ್ತಿಗೆ ಪಾತ್ರವಾಗಿದ್ದ ಬಸವ ನಾಡು ವಿಜಯಪುರ ಜಿಲ್ಲಾಸ್ಪತ್ರೆಗೆ ಈಗ ಕೇಂದ್ರ ಸರಕಾರದಿಂದ ಮತ್ತೋಂದು ಗೌರವ ಪ್ರಾಪ್ತವಾಗಿದೆ‌. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಬಾರಿ ರಾಜ್ಯದಲ್ಲಿ ಜಿಲ್ಲಾಸ್ಪತ್ರೆ ವಿಭಾಗದಲ್ಲಿ ನಾನಾ ಅಂಶಗಳನ್ನು ಪರಿಗಣಿಸಿ ರಾಷ್ಟ್ರೀಯ ಗುಣಮಟ್ಟ ಮತ್ತು ಸೇವೆ(NQAS) ಪ್ರಶಸ್ತಿ ಪ್ರಕಟಿಸಿದೆ. ಈ ವಿಭಾಗದಲ್ಲಿ ಗೌರವಕ್ಕೆ ಪಾತ್ರವಾದ ಏಕೈಕ ಆಸ್ಪತ್ರೆ ಇದಾಗಿದೆ. ಕಳೆದ ಜೂ. 22 ಮತ್ತು 23ರಂದು ವಿಜಯಪುರ ಜಿಲ್ಲಾಸ್ಪತ್ರೆಗೆ ಭೇಟಿ […]

Teachers Day: ಪ್ರೇರಣಾ ಶಿಕ್ಷಣ ಸಂಸ್ಥೆಯಲ್ಲಿ ಗಮನ ಸೆಳೆದ ಶಿಕ್ಷಕರ ದಿನಾಚರಣೆ

ವಿಜಯಪುರ: ನಗರದ ಹೊರ ವಲಯದಲ್ಲಿರುವ ಪ್ರೇರಣಾ ಶಿಕ್ಷಣ ಸಂಸ್ಥೆಯಲ್ಲಿಶಿಕ್ಷಕರ ದಿನವನ್ನು ವಿಶೇಷವಾಗಿ ಆಚರಿಸಲಾಯಿತು. ನಿರಾಶ್ರೀತರ ಕೇಂದ್ರದಲ್ಲಿರುವ ಹಿರಿಯರನ್ನು ಕರೆಯಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಾತೃ ದೇವೋ ಭವ, ಪಿತೃ ದೇವೋ ಭವ, ಮನೆಯೇ ಮೊದಲ ಪಾಠಶಾಲೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲು ಈ ವಿಶೇಷ ಕಾರ್ಯಕ್ರಮ ಯಶಸ್ವಿಯಾಯಿತು. ಮಕ್ಕಳಲ್ಲಿ ತಂದೆ ತಾಯಿ ಎಂದರೇನು? ಅವರಿಗೆ ಯಾವ ರೀತಿಯ ಗೌರವ‌, ಆರೈಕೆ ಮಾಡಬೇಕು? ಇರದಿದ್ದರೆ ಅವರಿಗೆ ಆಗುವ ತೊಂದರೆ ಏನು ಎಂಬುದನ್ನು ನಿರಾಶ್ರೀತರ ಕೇಂದ್ರದ […]

Stray Cattles: ಗುಮ್ಮಟ ನಗರಿಯಲ್ಲಿ120 ಬೀಡಾಡಿ‌ ದನಗಳು ಗೋಶಾಲೆಗೆ- ವಿಜಯ ಮೆಕ್ಕಳಕಿ

ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ 120ಕ್ಕೂ ಹೆಚ್ಚು ಬೀಡಾಡಿ ದನಗಳನ್ನು ಮಹಾನಗರ ಪಾಲಿಕೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ಕಳೆದ ಒಂದು ತಿಂಗಳಿಂದ ಬೀಡಾಡಿ‌ ದನಗಳನ್ನು ಮಹಾನಗರ ಪಾಲಿಕೆ ಸಿಬ್ಬಂದಿ ವಶಕ್ಕೆ ಪಡೆದು ವಿಜಯಪುರ ತಾಲೂಕಿನ ಬುರಣಾಪುರದಲ್ಲಿ ಆರಂಭಿಸಲಾಗಿರುವ ಸರಕಾರಿ ಗೋಶಾಲೆಗೆ ಸಾಗಿಸಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಅದರಲ್ಲೂ ಮುಖ್ಯವಾಗಿ ರಸ್ತೆಗಳಲ್ಲಿ ಬೇಕಾಬಿಟ್ಟಿ ಅಲೆದಾಡುತ್ತಿದ್ದ ಬೀಡಾಡಿ ದನಗಳು ಹಲವು ಬಾರಿ ಅಪಘಾತಕ್ಕೂ ಕಾರಣವಾಗಿದ್ದವು. ಬಸ್ ಸಂಚಾರಕ್ಕೂ ಕೂಡ ಅಡ್ಡಿ ಉಂಟು ಮಾಡಿದ್ದವು. ಅಲ್ಲದೆ ಮಾರುಕಟ್ಟೆ […]

Rain: ಬಸವ ನಾಡಿನ ಹೊರ್ತಿಯಲ್ಲಿ 45.2 ಮಿಮಿ ಮಳೆ- ಜಿಲ್ಲೆಯ ಉಳಿದೆಡೆ ಸುರಿದ ಮಳೆ ಎಷ್ಟು ಗೊತ್ತಾ?

ವಿಜಯಪುರ: ಕಳೆದ 24 ಗಂಟೆಗಳಲ್ಲಿ ಬಸವ ನಾಡು ವಿಜಯಪುರ ಜಿಲ್ಲೆಯ ಅಲ್ಲಲ್ಲಿ ಉತ್ತಮ ಮಳೆಯಾಗಿದೆ. ಇಂಡಿ ತಾಲೂಕಿನ ಹೊರ್ತಿಯಲ್ಲಿ ಜಿಲ್ಲೆಯಲ್ಲಿಯೇ ಅತ್ಯಧಿಕ 45.2 ಮಿಮಿ ಮಳೆ ದಾಖಲಾಗಿದೆ. ವಿಜಯಪುರ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದ್ದರೆ, ಕೆಲವೆಡೆ ಭಾರಿ ಮತ್ತೆ ಅನೇಕ ಕಡೆ ಸಾಧಾರಣ ಮಳೆಯಾಗಿದೆ. ವಿಜಯಪುರ ಜಿಲ್ಲೆಯ ನಾನಾ ಕಡೆ ಸುರಿದ ಮಳೆಯ ವಿವರ ಇಲ್ಲಿದೆ. ವಿಜಯಪುರ ತಾಲೂಕು ವಿಜಯಪುರ ನಗರ- 3.8 ಮಿಮಿ ನಾಗಠಾಣ- 5.3 ಮಿಮಿ ಭೂತ್ನಾಳ- 2.4 ಮಿಮಿ ಹಿಟ್ನಳ್ಳಿ- 25ಮಿಮಿ ಕುಮಟಗಿ- […]