Stray Cattles: ಗುಮ್ಮಟ ನಗರಿಯಲ್ಲಿ120 ಬೀಡಾಡಿ‌ ದನಗಳು ಗೋಶಾಲೆಗೆ- ವಿಜಯ ಮೆಕ್ಕಳಕಿ

ವಿಜಯಪುರ: ಗುಮ್ಮಟ ನಗರಿ ವಿಜಯಪುರದಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದ್ದ 120ಕ್ಕೂ ಹೆಚ್ಚು ಬೀಡಾಡಿ ದನಗಳನ್ನು ಮಹಾನಗರ ಪಾಲಿಕೆ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಕಳೆದ ಒಂದು ತಿಂಗಳಿಂದ ಬೀಡಾಡಿ‌ ದನಗಳನ್ನು ಮಹಾನಗರ ಪಾಲಿಕೆ ಸಿಬ್ಬಂದಿ ವಶಕ್ಕೆ ಪಡೆದು ವಿಜಯಪುರ ತಾಲೂಕಿನ ಬುರಣಾಪುರದಲ್ಲಿ ಆರಂಭಿಸಲಾಗಿರುವ ಸರಕಾರಿ ಗೋಶಾಲೆಗೆ ಸಾಗಿಸಿದ್ದಾರೆ.

ವಿಜಯಪುರ ನಗರದಲ್ಲಿ ಮಹಾನಗರ ಪಾಲಿಕೆ ವಶಪಡಿಸಿಕೊಂಡಿರುವ ಬೀಡಾಡಿ ದನಗಳು

ಸಾರ್ವಜನಿಕ ಸ್ಥಳಗಳಲ್ಲಿ ಅದರಲ್ಲೂ ಮುಖ್ಯವಾಗಿ ರಸ್ತೆಗಳಲ್ಲಿ ಬೇಕಾಬಿಟ್ಟಿ ಅಲೆದಾಡುತ್ತಿದ್ದ ಬೀಡಾಡಿ ದನಗಳು ಹಲವು ಬಾರಿ ಅಪಘಾತಕ್ಕೂ ಕಾರಣವಾಗಿದ್ದವು. ಬಸ್ ಸಂಚಾರಕ್ಕೂ ಕೂಡ ಅಡ್ಡಿ ಉಂಟು ಮಾಡಿದ್ದವು. ಅಲ್ಲದೆ ಮಾರುಕಟ್ಟೆ ಪ್ರದೇಶಗಳಲ್ಲಿ ತಿರುಗಾಡುವುದರಿಂದ ಸಾರ್ವಜನಿಕರು ಕೂಡ ಸುಗಮವಾಗಿ ನಡೆದುಕೊಂಡು ಹೋಗಲು ಅಡ್ಡಿಯಾಗಿವು. ವಿಜಯಪುರ ನಗರದ ಜನರಿಂದ ದೂರುಗಳು ಬಂದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆ 120ಕ್ಕೂ ಹೆಚ್ಚು ಬೀಡಾಡಿ ದನಗಳನ್ನು ವಶಕ್ಕೆ ಪಡೆದಿದೆ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯ ಮೆಕ್ಕಳಕಿ ತಿಳಿಸಿದ್ದಾರೆ.

ಬೀಡಾಡಿ ದನಗಳ ಮಾಲಿಕರಿಗೆ ಸೂಚನೆ, ಎಚ್ಚರಿಕೆ

ಈ ಮಧ್ಯೆ ಈ ಜಾನುವಾರುಗಳ ತಮ್ಮ ದನಗಳನ್ನು ವಾಪಸ್ ಪಡೆಯಲು ಸೂಕ್ತ ದಾಖಲಾತಿ ನೀಡಿಬೇಕು. ಅಲ್ಲದೇ, ಮಹಾನಗರ ಪಾಲಿಕೆ ಸಿಬ್ಬಂದಿ ಇದೇ ಮೊದಲ ಬಾರಿಗೆ ಬೀಡಾಡಿ ದನಗಳನ್ನು ವಶಪಡಿಸಿಕೊಂಡಿದ್ದರೆ ಅವುಗಳ ತಲಾ ರೂ. 10 ಸಾವಿರ ದಂಡ ಕಟ್ಟಬೇಕು. ಎರಡನೇ ಬಾರಿ ಮತ್ತೆ ಅದೇ ಮಾಲಿಕರ ದನಗಳನ್ನು ವಶಪಡಿಸಿಕೊಂಡಿದ್ದರೆ ಅವುಗಳನ್ನು ವಾಪಸ್ ಕೊಡುವುದಿಲ್ಲ ಎಂದು ಮಹಾನಗರ ಪಾಲಿಕೆ ಆಯುಕ್ತರು ಬಸವ ನಾಡು ವೆಬ್ ಗೆ ಮಾಹಿತಿ ನೀಡಿದ್ದಾರೆ..

ಜಾನುವಾರುಗಳ ಮಾಲಿಕರು ತಮ್ಮ ದನಗಳನ್ನು ಸಾರ್ವಜನಿಕ ಸ್ಥಳಗಳಲ್ಲಿ ಬಿಡದೇ ಮುನ್ಬೆಚ್ಚರಿಕೆ ವಹಿಸದಿದ್ದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ವಿಜಯ ಮೆಕ್ಕಳಕಿ ಎಚ್ಚರಿಕೆ ನೀಡಿದ್ದಾರೆ.

Leave a Reply

ಹೊಸ ಪೋಸ್ಟ್‌