Teachers Day: ಪ್ರೇರಣಾ ಶಿಕ್ಷಣ ಸಂಸ್ಥೆಯಲ್ಲಿ ಗಮನ ಸೆಳೆದ ಶಿಕ್ಷಕರ ದಿನಾಚರಣೆ

ವಿಜಯಪುರ: ನಗರದ ಹೊರ ವಲಯದಲ್ಲಿರುವ ಪ್ರೇರಣಾ ಶಿಕ್ಷಣ ಸಂಸ್ಥೆಯಲ್ಲಿಶಿಕ್ಷಕರ ದಿನವನ್ನು ವಿಶೇಷವಾಗಿ ಆಚರಿಸಲಾಯಿತು.

ನಿರಾಶ್ರೀತರ ಕೇಂದ್ರದಲ್ಲಿರುವ ಹಿರಿಯರನ್ನು ಕರೆಯಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಪ್ರೇರಣಾ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನ ಆಚರಣೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು, ನಿರಾಶ್ರಿತರ ಕೇಂದ್ರದ ಹಿರಿಯರು ಪಾಲ್ಗೊಂಡಿದ್ಸರು

ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಮಾತೃ ದೇವೋ ಭವ, ಪಿತೃ ದೇವೋ ಭವ, ಮನೆಯೇ ಮೊದಲ ಪಾಠಶಾಲೆ ಎಂಬುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲು ಈ ವಿಶೇಷ ಕಾರ್ಯಕ್ರಮ ಯಶಸ್ವಿಯಾಯಿತು.

ಮಕ್ಕಳಲ್ಲಿ ತಂದೆ ತಾಯಿ ಎಂದರೇನು? ಅವರಿಗೆ ಯಾವ ರೀತಿಯ ಗೌರವ‌, ಆರೈಕೆ ಮಾಡಬೇಕು? ಇರದಿದ್ದರೆ ಅವರಿಗೆ ಆಗುವ ತೊಂದರೆ ಏನು ಎಂಬುದನ್ನು ನಿರಾಶ್ರೀತರ ಕೇಂದ್ರದ ವೈದ್ಯರು ಮನವರಿಕೆ ಮಾಡಿಕೊಟ್ಟರು.

ವಿದ್ಯಾರ್ಥಿ ಸುಕೃತ ಅರವಿಂದ. ಪಾಟೀಲ ನೇತೃತ್ವದಲ್ಲಿ ಗೆಜ್ಜಿ ಕೆರಿಯರ್ ಅಕಾಡೆಮಿಯ ಸುರೇಶ ಗೆಜ್ಜಿ ಮಾರ್ಗದರ್ಶನದಲ್ಲಿ ಪ್ರೇರಣಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಶಿಕ್ಷಕರು ಸೇರಿಕೊಂಡು ಶಿಕ್ಷಕರ ದಿನವನ್ನು ವಿಶೇಷವಾಗಿ ಆಚರಿಸಿದರು.

ವಿದ್ಯಾರ್ಥಿಗಳಿಗೆ ಈ ಸಂದರ್ಭದಲ್ಲಿ ಸಿಹಿ‌ ಹಂಚಲಾಯಿತು.

ಈ ಸಂದರ್ಭದಲ್ಲಿ ನಿರಾಶ್ರಿತರ ಕೇಂದ್ರದ ಮುಖ್ಯಸ್ಥ ನಾಟಿಕರ ಮತ್ರು ಚವ್ಹಾಣ, ಪ್ರೇರಣಾ ಶಿಲ್ಷಣ ಸಂಸ್ಥೆಯ ಬೋಧಕ ಮತ್ತು ಬೋಧಕರ ಹೊರತಾದ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು‌ ಉಪಸ್ಥಿತರಿದ್ದರು.

Leave a Reply

ಹೊಸ ಪೋಸ್ಟ್‌