ವಿಜಯಪುರ: ವಿಶ್ವವಿದ್ಯಾಲಯಗಳಿಗೆ ಕುಲಪತಿಗಳಾಗಿ ಬರುವವರು ನಾಲ್ಕೈದು ಕೋಟಿ ಹಣ ನೀಡಿಯೇ ಅಧಿಕಾರಕ್ಕೆ ಹುದ್ದೆ ವಹಿಸಿಕೊಂಡಿರುತ್ತಾರೆ. ನಂತರ ಅವರು ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುವ ಭ್ರಷ್ಟಾಚಾರ ವ್ಯವಸ್ಥೆಯ ಕುರಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲೆಗೊಂದು ವಿಶ್ವವಿದ್ಯಾಲಯ ಸ್ಥಾಪನೆಯಾಗಬಾರದು. ಇದರಿಂದ ಪ್ರಯೋಜನವಾಗುವುದಿಲ್ಲ ಎಂದು ಹೇಳಿದರು.
ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆದಿರುತ್ತದೆ. ಉಪಕುಲಪತಿ ಆಗುವವರು ತಮ್ಮ ನೇಮಕಾತಿಗಾಗಿ ನಾಲ್ಕೈದು ಕೋಟಿ ರೂಪಾಯಿ ನೀಡಿಯೇ ಹುದ್ದೆ ಪಡೆದಿರುತ್ತಾರೆ. ಹೀಗೆ ಲಂಚ ನೀಡಿ ಅಧಿಕಾರಕ್ಕೆ ಬಂದವರು ತಮ್ಮ ಅಧಿಕಾರಾವಧಿಯಲ್ಲಿ ಆ ಹಣವನ್ನು ವಾಪಸ್ ಗಳಿಸಲು ಭ್ರಷ್ಟಾಚಾರದಲ್ಲಿ ತೊಡಗುತ್ತಾರೆ ಎಂದು ಅವರು ಗಂಭೀರ ಆರೋಪ ಮಾಡಿದರು.
ವಿಜಯಪುರ ಜಿಲ್ಲೆಯಲ್ಲಿ ಮತ್ತೊಂದು ವಿಶ್ವವಿದ್ಯಾಲಯ ಬೇಡವೇ ಬೇಡ. ಈಗಾಗಲೇ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯವಿದೆ. ಬೆಳಗಾವಿಯಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯವಿದೆ. ಇನ್ನೂ ಎಷ್ಟು ವಿಶ್ವವಿದ್ಯಾಲಯಗಲನ್ನು ಮೋಡಬೇಕು ಎಂದು ಶಾಸಕರು ಪ್ರಶ್ನಿಸಿದರು.
ನನ್ನ ಅಭಿಪ್ರಾಯದಲ್ಲಿ ಜಿಲ್ಲೆಗೊಂದು ವಿಶ್ವವಿದ್ಯಾಲಯ ಮಾಡಬಾರದು. ರೂ. 2000 ಕೋ. ಹಣವನ್ನು ವಿಶ್ವವಿದ್ಯಾಲಯಕ್ಕೆ ಸರಕಾರ ಹಾಕುತ್ತದೆ. ಅದು ನಿರುಪಯುಕ್ತವಾಗುತ್ತದೆ. ನಮ್ಮ ಸರಕಾರವಿದ್ದರೆ ಹೌದಪ್ಪಗಳು ಹೇಳುವುದಕ್ಕೆಲ್ಲ ಹೌದಪ್ಪ ಎನ್ನಬೇಕಾ ಎಂದು ಯತ್ನಾಳ ಖಾರವಾಗಿ ಪ್ರಶ್ನಿಸಿದರು.
ಒಂದು ವಿಶ್ವವಿದ್ಲಾಯಲ ಆರಂಭಿಸಲು ಕೇಂದ್ರ ಸರಕಾರ ಹೆಚ್ಚೆಂದರೆ ಸುಮಾರು ರೂ. 20 ಕೋ. ಅನುದಾನ ನೀಡುತ್ತದೆ. ವಿಶ್ವವಿದ್ಯಾಲಯ ಆರಂಭಿಸಲು 200 ರಿಂದ 300 ಎಕರೆ ಜಮೀನು ನೀಡುತ್ತಾರೆ. ಈ ಜಮೀನನ್ನು ಕೆಲವುರ ಮೊದಲೆ ಹೊಡೆದುಕೊಂಡು ಕೂತಿರುತ್ತಾರೆ. ಅವರಿಂದ ಈ ಜಮೀನನ್ನು ಖರೀದಿ ಮಾಡಲಾಗುತ್ತದೆ. ಬೆಳಗಾವಿಯಲ್ಲಿ ರಾಣಿ ಚೆನ್ನಮ್ಮ ವಿಶ್ವವಿದ್ಲಾಯವಿದೆ. ವಿಜಯಪುರದಲ್ಲಿ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಲಾಲಯವಿದೆ. ಈಗಾಗಲೇ ವಿಶ್ವೇಶ್ವರಯ್ಯ ತಾಂತ್ರಿಯ ವಿಶ್ವವಿದ್ಯಾಲಯ (ವಿ ಟಿ ಯು) ನಲ್ಲಿ ನಡೆದ ಅವ್ಯವವಹಾರ ಎಲ್ಲರ ಕಣ್ಣಮುಂದೆ ಇದೆ ಎಂದು ಅವರು ಹೇಳಿದರು.
ವಿದ್ಯಾರ್ಥಿಗಳ ಸಂಖ್ಯೆ, ಸಾಮರ್ಥ್ಯಕ್ಕೆ ಅನುಗುಣವಾಗಿ ವಿಶ್ವವಿದ್ಯಾಲಯ ಸ್ಥಾಪಿಸುವುದಾದರೆ ಅದನ್ನು ಮುಂದೆ ಮಾಡಲಿ. ಹೊಸ ಶಿಕ್ಷಣ ನೀತಿ ಪ್ರಕಾರ ಏನು ಆಗಬೇಕು ಆಗಲಿ. ಆಗ, ಆ ವಿಶ್ವವಿದ್ಯಾಲಯಗಳಿಗೆ ಅವುಗಳದೇ ಆದ ಅನುದಾನ ಇರುತ್ತದೆ ಎಂದು ಶಾಸಕರು ಹೇಳಿದರು.
ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಏನು ಅವ್ಯವಹಾರ ಆಗುತ್ತೆ ಎಂದು ನನಗೆ ಗೊತ್ತಿದೆ. ನಾನು ಭರವಸೆ ಸಮಿತಿ ಅಧ್ಯಕ್ಷನಾಗಿದ್ದಾಗ ಎಲ್ಲಾ ವಿಶ್ವವಿದ್ಲಾಯಗಳ ಕಾರ್ಯವೈಖರಿಯನ್ನು ನೋಡಿದ್ದೇನೆ. ಮಂಗಳೂರು ವಿವಿ, ಮೈಸೂರು ವಿವಿ, ಬೀದರ್ ವಿವಿ, ಯುಟಿಯು ನಲ್ಲಿನ ಅವ್ಯವಹಾರ ನೋಡಿದ್ದೇನೆ. ವೈಸ್ ಚಾನ್ಸಲರ್ ಆಗಬೇಕಾದರೆ ನಾಲ್ಕೈದು ಕೋಟಿ ಕೊಟ್ಟೆ ಬಂದಿರುತ್ತಾರೆ. ಬಂದ್ಮೇಲೆ ಅವರು ಅದನ್ನು ತೆಗೆದುಕೊಳ್ಳಬೇಕಲ್ಲ. ಇವರು ಏನು ಶಿಕ್ಷಣ ಕೊಡುತ್ತಾರೆ? ಕುಲಪತಿಗಳ ನೇಮಕಾತಿಯಲ್ಲಿ ಪಾರದರ್ಶಕ ಇರಬೇಕು. ಒಳ್ಳೆಯ ಪ್ರಾಮಾಣಿಕ ಕುಲಪತಿ ನೇಮಕ ಆಗಬೇಕು. ಕುಲಪತಿಗಳ ನೇಮಕಾತಿ ಈಗ ಒಂದೊಂದು ಉದ್ಯೋಗ ಆಗಿದೆ ಎಂದು ವಿಜಯಪುರ ನಗರ ಬಿಜೆಪಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಆಕ್ರೋಶ ವ್ಯಕ್ತಪಡಿಸಿದರು.